ಹೊಸ ಅಬಕಾರಿ ನೀತಿಯಲ್ಲಿ ಭ್ರಷಚಾರದ ಆರೋಪ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಐದನೇ ಬಾರಿಗೆ ಇಡಿ ಸಮನ್ಸ್

ಹೊಸ ಅಬಕಾರಿ ನೀತಿಯಲ್ಲಿ ಭ್ರಷಚಾರದ ಆರೋಪ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಐದನೇ ಬಾರಿಗೆ ಇಡಿ ಸಮನ್ಸ್

ನವದೆಹಲಿ : ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಜಾರಿ ನಿರ್ದೇಶನಾಲಯ ಐದನೇ ಬಾರಿಗೆ ಸಮನ್ಸ್ ನೀಡಿದೆ. ಈ ಹಿಂದೆ ನೀಡಿದ ನಾಲ್ಕು ಸಮನ್ಸ್‌ಗೆ ವಿಚಾರಣೆಗೆ ಹಾಜರಾಗದ ಹಿನ್ನಲೆ ಐದನೇ ಬಾರಿಗೆ ಸಮನ್ಸ್ ಜಾರಿ ಮಾಡಿದೆ.

ಜನವರಿ 13 ರಂದು ಕೇಜ್ರಿವಾಲ್‌ಗೆ ನಾಲ್ಕನೇ ಬಾರಿಗೆ ಸಮನ್ಸ್ ಜಾರಿಯಾಗಿತ್ತು, ಜನವರಿ 18 ರಂದು ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹೇಳಿಕೆ ನೀಡುವಂತೆ ಸೂಚಿಸಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗದ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್, ಸಂಸದರಾದ ರಾಘವ್ ಚಡ್ಡಾ ಮತ್ತು ಸಂದೀಪ್ ಪಾಠಕ್ ಅವರೊಂದಿಗೆ ಜನವರಿ 18 ರಿಂದ ಮೂರು ದಿನಗಳ ಗೋವಾ ಭೇಟಿಗೆ ತೆರಳಿದರು. ಎಎಪಿಯ ಗೋವಾ ಮುಖ್ಯಸ್ಥ ಅಮಿತ್ ಪಾಲೇಕರ್ ಅವರ ಪ್ರಕಾರ, ಲೋಕಸಭೆ ಚುನಾವಣೆಗೆ ಮುನ್ನ ಪಕ್ಷದ ಹಿರಿಯ ನಾಯಕರು ಎಎಪಿಯ ಗೋವಾ ಶಾಸಕರು ಮತ್ತು ಕಾರ್ಯಕರ್ತರು ಮತ್ತು ಸ್ವಯಂಸೇವಕರನ್ನು ಕೇಜ್ರಿವಾಲ್ ಭೇಟಿಯಾಗಬೇಕಿತ್ತು.

ಡಿಸೆಂಬರ್ 22 ರಂದು ದೆಹಲಿ ಮುಖ್ಯಮಂತ್ರಿಗೆ ಮೂರನೇ ಬಾರಿ ಸಮನ್ಸ್ ನೀಡಿ, ಜನವರಿ 3 ರಂದು ತನ್ನ ಮುಂದೆ ಹಾಜರಾಗುವಂತೆ ಇಡಿ ತಿಳಿಸಿತ್ತು. ಮೂರನೇ ಸಮನ್ಸ್‌ಗೂ ಕೇಜ್ರಿವಾಲ್ ಹಾಜರಾಗಿರಲಿಲ್ಲ‌. ಇಡಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಕೇಜ್ರಿವಾಲ್ ಅವರು ರಾಜ್ಯಸಭಾ ಚುನಾವಣೆ ಮತ್ತು ಗಣರಾಜ್ಯೋತ್ಸವ ಆಚರಣೆ ಕಾರಣ ತಮ್ಮ ಬಿಡುವಿಲ್ಲದ ವೇಳಾಪಟ್ಟಿಯನ್ನು ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹಾಜರಾಗದಿರಲು ಒಂದು ಕಾರಣವೆಂದು ಉಲ್ಲೇಖಿಸಿದ್ದರು.

ಡಿಸೆಂಬರ್ 21 ರಂದು ಇಡಿ ಮುಂದೆ ಹಾಜರಾಗುವಂತೆ ಎರಡನೇ ಸಮನ್ಸ್ ಅನ್ನು ಡಿಸೆಂಬರ್ 18 ರಂದು ಕೇಜ್ರಿವಾಲ್ ಅವರಿಗೆ ನೀಡಲಾಗಿತ್ತು. ಎರಡನೇ ಸಮನ್ಸ್ ವೇಳೆ ಆಕ್ಷೇಪ ವ್ಯಕ್ತಪಡಿಸಿದ್ದ ಕೇಜ್ರಿವಾಲ್ ಇಡಿ ಸಮನ್ಸ್ “ಕಾನೂನುಬಾಹಿರ”, “ರಾಜಕೀಯ ಪ್ರೇರಿತ” ಎಂದು ಹೇಳುವ ಮೂಲಕ ಅದನ್ನು “ಹಿಂತೆಗೆದುಕೊಳ್ಳಬೇಕು” ಎಂದು ಅಗ್ರಹಿಸಿದ್ದರು‌. ಈ ಎಲ್ಲ ಬೆಳವಣಿಗೆ ನಡುವೆ ಈಗ ಹೊಸ ಸಮನ್ಸ್ ಜಾರಿಯಾಗಿದೆ.

Previous Post
ಕಲಾಪಕ್ಕೆ ಅಡ್ಡಿಪಡಿಸಲು ಸಂಸದರು ಆತ್ಮಾವಲೋಕನ ಮಾಡಿಕೊಳ್ಳಬೇಕು ವಿಪಕ್ಷಗಳ ಸಂಸದರ ವಿರುದ್ಧ ಮೋದಿ ಆಕ್ರೋಶ
Next Post
ಇಡಿ ಅಧಿಕಾರಿಗಳ ವಿರುದ್ಧವೇ ದೂರು ದಾಖಲಿಸಿದ ಸಿಎಂ ಹೇಮಂತ್ ಸೊರೆನ್

Recent News