₹27000 ಕೋಟಿ ವೆಚ್ಚದ ಹಲವು ಮೇಲ್ಸೇತುವೆ, ಅಂಡರ್‌ಪಾಸ್, ಓವರ್‌ಪಾಸ್ ನಿರ್ಮಾಣ, ವಿವರ

₹27000 ಕೋಟಿ ವೆಚ್ಚದ ಹಲವು ಮೇಲ್ಸೇತುವೆ, ಅಂಡರ್‌ಪಾಸ್, ಓವರ್‌ಪಾಸ್ ನಿರ್ಮಾಣ, ವಿವರ

ಬೆಂಗಳೂರು, ಫೆಬ್ರವರಿ 02: ಬೆಳೆಯುತ್ತಿರುವ ರಾಜಧಾನಿ ಬೆಂಗಳೂರು ಮುಂದಿನ ದಿನಗಳಲ್ಲಿ ಸಾವಿರಾರು ಕೋಟಿಯ ರಸ್ತೆ ಮೇಲ್ಸೇತುವೆ, ಅಂಡರ್‌ ಪಾಸ್ ಸೇರಿದಂತೆ ವಿವಿಧ ಯೋಜನೆಗಳನ್ನು ಪಡೆಯಲಿದೆ. ಹೌದು, ಕರ್ನಾಟಕ ರಾಜ್ಯ ಸರ್ಕಾರವು 16 ರಸ್ತೆ ಮೇಲ್ಸೇತುವೆಗಳು, 10 ಓವರ್‌ಪಾಸ್ ಹಾಗೂ 12 ಅಂಡರ್‌ಪಾಸ್‌ಗಳು ನಿರ್ಮಾಣಗೊಳ್ಳಲಿವೆ. ಇದು ಬೆಂಗಳೂರು ವ್ಯಾಪ್ತಿಯ 73 ಕಿಮೀ ಪೆರಿಫೆರಲ್ ರಿಂಗ್ ರಸ್ತೆಯ (PRR) ಭಾಗವಾಗಲಿವೆ ಎಂದು ಸರ್ಕಾರ ತಿಳಿಸಿದೆ ಎಂದು ‘ಡಿಎಚ್’ ವರದಿ ಮಾಡಿದೆ.

ಮಹತ್ವ ಯೋಜನೆ ಕೈಗೊಳ್ಳಲಿರುವ ಸರ್ಕಾರವು ಬೆಂಗಳೂರಿನ ದಕ್ಷಿಣದ ಹೊಸೂರು ರಸ್ತೆಯನ್ನು ಬೆಂಗಳೂರಿನ ವಾಯುವ್ಯದಲ್ಲಿರುವ ತುಮಕೂರು ರಸ್ತೆಯೊಂದಿಗೆ ಸಂಪರ್ಕಿಸುವ ಉದ್ದೇಶ ಸಹ ಹೊಂದಿದೆ. ಒಟ್ಟು ಈ ಮೇಲಿನ ಎಲ್ಲ ಯೋಜನೆಗಳ ಕಾರ್ಯಗತಗೊಳಿಸಲು ಸರ್ಕಾರ 27,000 ಕೋಟಿ ರೂಪಾಯಿ ವ್ಯಯಿಸಲಿದೆ. ಖಾಸಗಿ ಕಂಪನಿಗಳಿಂದ ಸಂಪೂರ್ಣವಾಗಿ ಹಣವನ್ನು ನೀಡಲು ನಿರ್ಧರಿಸಿದೆ. ಕಂಪನಿಗಳಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) 50 ವರ್ಷಗಳವರೆಗೆ ಟೋಲ್ ಸಂಗ್ರಹಿಸುವ ಹಕ್ಕಿನ ಭರವಸೆಯನ್ನು ಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ.

ವಿವಿಧ ಜಂಕ್ಷನ್‌-ಸ್ಥಳಗಳಲ್ಲಿ ಕಾಮಗಾರಿ ಈ ಯೋಜನೆಯು ನಗರದ 10 ಪ್ರಮುಖ ಜಂಕ್ಷನ್‌ಗಳು ಮತ್ತು 100 ಕ್ಕೂ ಹೆಚ್ಚು ಸಣ್ಣ ವೃತ್ತಗಳ ಮೂಲಕ ಹಾದು ಹೋಗಲಿವೆ. ಹೆಚ್ಚು ಟ್ರಾಫಿಕ್‌ ಇರುವ ಕಾರಿಡಾರ್‌ಗಳಾದ ಹೆಸರಘಟ್ಟ ರಸ್ತೆ, ಹಳೆ ಮದ್ರಾಸ್ ರಸ್ತೆ, ವೈಟ್‌ಫೀಲ್ಡ್ ರಸ್ತೆ, ಚನ್ನಸಂದ್ರ ರಸ್ತೆ, ಹೊಸೂರು ರಸ್ತೆ ಮುಂತಾದ ಸ್ಥಳಗಳಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಬಿಡಿಎ ನಿರ್ಧರಿಸಿದೆ. ಚಿಕ್ಕ ತೋಗೂರು ಕೆರೆ, ಗುಂಜೂರು ಕೆರೆ, ಚಿಕ್ಕ ಬನಹಳ್ಳಿ ಕೆರೆ, ಚಿನ್ನಪ್ಪನಹಳ್ಳಿ ಕೆರೆ, ತಿರುಮೇನಹಳ್ಳಿ ಕೆರೆ, ಜರಕಬಂಡೆ ಕೆರೆ ಸೇರಿದಂತೆ ಏಳು ಜಲಮೂಲಗಳಲ್ಲಿ ಸೇತುವೆಗಳನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಈ ಯೋಜನೆ ಮೂಲಕ ಜನರಿಗೆ ರಸ್ತೆ ದಾಟುವ ಅನುಕೂಲ ಒದಗಿಸುವ ಜೊತೆಗೆ ಟ್ರಾಫಿಕ್ ಮುಕ್ತ ಪ್ರಯಾಣ ವ್ಯವಸ್ಥೆ ಕಲ್ಪಿಸಲಿವೆ.

2,560 ಎಕರೆ ಭೂ ಸ್ವಾಧೀನಕ್ಕೆ ಗಡುವು ಈ ಯೋಜನೆಗಳ ಸಾಕಾರಕ್ಕೆ ಬೇಕಾದ ಒಟ್ಟು 2,560 ಎಕರೆ ಭೂ ಸ್ವಾಧೀನಕ್ಕೆ ಬಿಡಿಎ ಆರು ತಿಂಗಳ ಗುರಿ ನಿಗದಿಪಡಿಸಲಾಗಿದೆ. ಎರಡು ವರ್ಷಗಳ ಗುಡುವು ಇರಲಿದೆ. ಆದರೆ ಟೆಂಡರ್ ದಾಖಲೆಗಳಲ್ಲಿ ಅನುಸರಿಸಬೇಕಾದ ಪರಿಹಾರದ ರಚನೆ ಇನ್ನಿತರ ಕೆಲವು ಮಾಹತಿಗಳನ್ನು ಉಲ್ಲೇಖಿಸಲಾಗಿಲ್ಲ ಎನ್ನಲಾಗಿದೆ. ಈ ಬಗ್ಗೆ ಬಿಡಿಎ ಅಧಿಕಾರಿಗಳು ಪ್ರತಿಕ್ರಿಯಿಸಬೇಕಿದೆ. ಕಾಮಗಾರಿ ವೆಚ್ಚದ ಲೆಕ್ಕ ಯೋಜನೆಗೆ ಭೂಸ್ವಾಧೀನಕ್ಕೆ ಅಂದಾಜು 21,000 ಕೋಟಿ ರೂಪಾಯಿ ಬೇಕಾದರೆ, ಇನ್ನೂ ಸಿವಿಲ್ ಕೆಲಗಳಿಗೆ 6,000 ಕೋಟಿ ರೂಪಾಯಿ ತಗುಲಬಹುದು ಎಂದು ಬಿಡಿಎ ಅಂದಾಜಿಸಿದೆ. ಎಂಟು ಪರ್ಥಗಳ ರಸ್ತೆ ಹೊಂದಿದ್ದರೆ ಅದಕ್ಕೆ 100-ಮೀಟರ್ ಅಗಲದ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ನಿರ್ಮಿಸುವ ಚಿಂತನೆ ಇದೆ. ಭೂಗತ ಕೇಬಲ್, ಫುಟ್‌ಪಾತ್, ಸೈಕಲ್ ಟ್ರ್ಯಾಕ್ ಮತ್ತು ಡ್ರೈನ್‌ಗಳನ್ನು ಒದಗಿಸಲಿದೆ. ಹೆಚ್ಚುವರಿ ರಸ್ತೆ ನೆಟ್‌ವರ್ಕ್ ಸಂಪರ್ಕ ಹೊಸೂರು ರಸ್ತೆ ಹಾಗೂ ತುಮಕೂರು ರಸ್ತೆ ಮಧ್ಯೆ 65 ಕಿಮೀ ಅಂತರಿವದೆ. ಬಿಡಿಎ ಮಾದನಾಯಕನಹಳ್ಳಿ ಬಳಿ 3.4-ಕಿಮೀ ಮತ್ತು ಹೆಬ್ಬಗೋಡಿ ಬಳಿ 4.08 ಕಿಮೀ ಹೆಚ್ಚುವರಿ ಉದ್ದದವರೆಗೆ ಯೋಜನೆಗಳು ಬರಲಿವೆ. ಅಂದರೆ ಹೆಚ್ಚುವರಿ ನೆಟ್‌ವರ್ಕ್‌ಗಳನ್ನು ಜೋಡಿಸಲಾಗುತ್ತಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

Previous Post
ಜಾರ್ಖಂಡ್‌ನಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ
Next Post
5ನೇ ಬಾರಿಯೂ ಇಡಿ ವಿಚಾರಣೆಗೆ ಕೇಜ್ರಿವಾಲ್ ಗೈರು

Recent News