ಕಾಲರಾ ಪತ್ತೆ: ‘ಪಿಜಿ’ಗಳಲ್ಲಿ ಹೈ ಅಲರ್ಟ್: ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ

ಕಾಲರಾ ಪತ್ತೆ: ‘ಪಿಜಿ’ಗಳಲ್ಲಿ ಹೈ ಅಲರ್ಟ್: ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ

ಬೆಂಗಳೂರು, ಏಪ್ರಿಲ್ 11: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಲುಷಿತ ನೀರು, ನೈರ್ಮಲ್ಯ ಕಾರಣದಿಂದ ವಿವಿಧೆಡೆ ಕಾಲರಾ ಪ್ರಕರಣಗಳು ಪತ್ತೆಯಾಗಿವೆ. ಇದರ ಬೆನ್ನೆಲ್ಲೆ ಎಚ್ಚೆತ್ತುಕೊಂಡಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಪೇಯಿಂಗ್ ಗೆಸ್ಟ್ (ಪಿಜಿ) ವಸತಿ ಗೃಹಗಳ ಮೇಲೆ ಹೆಚ್ಚು ನಿಗಾ ವಹಿಸಿದೆ. ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಲರಾ ಉಲ್ಬಣಗೊಂಡಿದೆ. ಈ ಪ್ರಯುಕ್ತ ಬಿಬಿಎಂಪಿ ಅಧಿಕಾರಿಗಳು ಪಿಜಿ ಮಾಲೀಕರ ಸಂಘವು ಬೋರ್ಡಿಂಗ್ ಪ್ರಾಪರ್ಟಿಗಳನ್ನು ನಡೆಸುತ್ತಿರುವ ಎಲ್ಲಾ ಓನರ್‌ಗಳಿಗೆ ಕೆಲವು ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಆರೋಗ್ಯಕ್ಕಾಗಿ ಪಿಜಿ ಮಾಲೀಕರು ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ‘ಏಷ್ಯಾನೆಟ್’ ವರದಿ ಮಾಡಿದೆ.

ಮಾಲೀಕರು ತಮ್ಮ ಪಿಜಿಗಳಲ್ಲಿ ಹೊರಗಿನ ಆಹಾರದ ನಿಷೇಧಿಸಬೇಕು. ನೀರು ಶುದ್ಧಿಕರಿಸುವ ಆರ್‌ಒ ವಾಟರ್ ಪ್ಯೂರಿಫೈಯರ್‌ಗಳನ್ನು ಕಡ್ಡಾಯ ಮಾಡಬೇಕು. ಪಿಜಿಗಳಲ್ಲಿನ ಅಡುಗೆಮನೆ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳಬೇಕು.

ಪಿಜಿಗಳಲ್ಲಿ ವಾಸಿಸುತ್ತಿರುವವರು ಮತ್ತು ನಗರವಾಸಿಗಳಲ್ಲಿ ಆರೋಗ್ಯದಲ್ಲಿ ಏರುಪೇರಾದರೆ ಕೂಡಲೇ ವೈದ್ಯರನ್ನು ಸಮಪರ್ಕಿಸಬೇಕು. ಪಿಜಿ ಅಸೋಸಿಯೇಷನ್ ಸದಸ್ಯರು ಸಭೆ ನಡೆಸಿ ಕಾಲರಾ ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಕಾಲರಾ ಉಲ್ಬಣದಲ್ಲಿ ಖಚಿತತೆ ಇತ್ತೀಚೆಗೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ಬಾಲಕಿಯರ ಹಾಸ್ಟೆಲ್‌ನ ಒಟ್ಟು 47 ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಪೈಕಿ ತಪಾಸಣೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಕಾಲರಾ ಸೋಂಕು ಪಾಸಿಟಿವ್ ಬಂದಿತ್ತು. ಅವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಉಳಿದವರು ಡಿಸ್ಚಾರ್ಜ್ ಆದರು. ಇದು ಬೆಂಗಳೂರಿನಲ್ಲಿ ಕಾಲರಾ ಹೆಚ್ಚಾಗುತ್ತಿರುವ ಬಗ್ಗೆ ಖಚಿತ ಪಡಿಸಿತು.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (BMCRI) ಹಾಸ್ಟೆಲ್ ಅಡುಗೆಮನೆ ಮುಚ್ಚಲಾಯಿತು. ವಿಕ್ಟೋರಿಯಾ ಆಸ್ಪತ್ರೆಯ ಅಡುಗೆ ಮನೆಯಿಂದಲೇ BMCRI ಆಹಾರ-ನೀರು ಪೂರೈಕೆ ಮಾಡಲಾಗಿದೆ. ಇದರೊಂದಿಗೆ ನೈರ್ಮಲ್ಯತೆ ಸೃಷ್ಟಿಗಾಗಿ ಕೀಟ ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 06 ಕಾಲರಾ ಪ್ರಕರಣಗಳು ವರದಿ ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯು ರಾಜ್ಯದ ವರದಿ ಪ್ರಕಾರ, ಪ್ರಸಕ್ತ ವರ್ಷ 06 ಕಾಲರಾ ಪ್ರಕರಣಗಳು ವರದಿ ಆಗಿವೆ. ಕಳೆದ ಎರಡು ವಾರಗಳಲ್ಲಿ ರೋಗ ಉಲ್ಬಣಗೊಂಡಿದೆ. ಐದು ಪ್ರಕರಣಗಲು ಕಳೆದ ಮಾರ್ಚ್‌ನಲ್ಲಿಯೇ ವರದಿ ಆಗಿವೆ. ಮುಖ್ಯವಾಗಿ ಏಕಾಎಕಿ ಕಾಲರಾ ರೋಗ ಹರಡುತ್ತಿಲ್ಲ. ಇವೆಲ್ಲ ಸಾಂಕ್ರಾಮಿಕವಾಗಿದ್ದು, ಹೆದರುವ ಅಗತ್ಯವಿಲ್ಲ. ಬದಲಾಗಿ ಎಚ್ಚರಿಕೆ ವಹಿಸಬೇಕು. ಕಾಯಿಸಿ ಆರಿಸಿದ ನೀರು ಸೇವಿಸಬೇಕು. ಹೊರಗಿನ ಆಹಾರ, ತಿಂಡಿಗಳನ್ನು ಸೇವಿಸಬೇಡಿ, ಶುಚಿ ಕಾಪಾಡಿಕೊಳ್ಳಿ. ಸುತ್ತಮುತ್ತಲಿನ ವಾತಾವರಣ ನೈರ್ಮಲ್ಯವಾಗಿರುವಂತೆ ಕಾಯ್ದುಕೊಳ್ಳಿ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ. ಸೂಚಿಸಿದ ಮಾರ್ಗಸೂಚಿಗಳನ್ನು ಪಿಜಿ ಮಾಲೀಕರು ಕಡ್ಡಾಯವಾಗಿ ಪಾಲಿಸುವಂತೆ ಇಲಾಖೆ ಸೂಚಿಸಿದೆ.

Previous Post
ನೀರಿನ ಕೊರತೆ ಹೋಟೆಲ್ ರೆಸಾರ್ಟ್‌ಗಳಿಕೆ ಬಂತು ಖಡಕ್ ಸೂಚನೆ
Next Post
ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲು ಪ್ರಯತ್ನಿಸುತ್ತಿರುವ ಕೇಂದ್ರ: ಎಎಪಿ

Recent News