ಕುಮಾನ್ ಹಿಮಾಲಯದಲ್ಲಿ 90 ಎಕರೆ ಹೋಟೆಲ್, ಟೌನ್‌ಶಿಪ್ ಯೋಜನೆಗೆ ಸುಪ್ರೀಂ ತಡೆ

ಕುಮಾನ್ ಹಿಮಾಲಯದಲ್ಲಿ 90 ಎಕರೆ ಹೋಟೆಲ್, ಟೌನ್‌ಶಿಪ್ ಯೋಜನೆಗೆ ಸುಪ್ರೀಂ ತಡೆ

ನವದೆಹಲಿ, ಮೇ 22: ಉತ್ತರಖಂಡದ ಕುಮಾನ್ ಬೆಟ್ಟಗಳಲ್ಲಿ 90 ಎಕರೆ ವಿಸ್ತೀರ್ಣದ ಹೋಟೆಲ್ ಮತ್ತು ಟೌನ್‌ಶಿಪ್ ಯೋಜನೆಯ ನಿರ್ಮಾಣವನ್ನು ತಾತ್ಕಾಲಿಕವಾಗಿ ತಡೆಹಿಡಿಯುವ ಮೂಲಕ ಪರಿಸರ ದುರ್ಬಲ ಮತ್ತು ಭೂಕಂಪನ ಪೀಡಿತ ಹಿಮಾಲಯ ಶ್ರೇಣಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ತ್ವರಿತಗೊಳಿಸುವ ಸರಕಾರದ ಉದ್ದೇಶಕ್ಕೆ ಸುಪ್ರೀಂಕೋರ್ಟ್‌ ತಡೆ ನೀಡಿದೆ.

ಈ ಕುರಿತು ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠ ಮಧ್ಯಂತರ ಆದೇಶವನ್ನು ಜಾರಿಗೊಳಿಸಿದೆ. ಭೂಮಾಲೀಕ ಬೀರೇಂದ್ರ ಸಿಂಗ್ ಅವರು ಸಲ್ಲಿಸಿದ ವಿಶೇಷ ಅರ್ಜಿಯನ್ನು ಆಧರಿಸಿ, ಹಿರಿಯ ವಕೀಲ ಪಿ.ಬಿ. ಸುರೇಶ್ ಮತ್ತು ವಕೀಲರಾದ ವಿಪಿನ್ ನಾಯರ್ ಮತ್ತು ಕಾರ್ತಿಕ್ ಜಯಶಂಕರ್, ಈ ಪರಿಸರದಲ್ಲಿ ಹೋಟೆಲ್ ಯೋಜನೆಗಳಂತಹ ಬೃಹತ್ ನಿರ್ಮಾಣ ಯೊಜನೆ ಪ್ರಾರಂಭಿಸುವ ಮೊದಲು ಕಡ್ಡಾಯವಾಗಿದ್ದ ಪರಿಸರಕ್ಕೆ ಸಂಬಂಧಿಸಿದ ಕ್ಲಿಯರೆನ್ಸ್‌ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು.

ಪರಿಸರ ದುರ್ಬಲವಾದ ಉತ್ತರಾಖಂಡದಲ್ಲಿ ಹೋಟೆಲ್ ಯೋಜನೆಗಳಂತಹ ಬೃಹತ್ ನಿರ್ಮಾಣಗಳನ್ನು ಪ್ರಾರಂಭಿಸುವ ಮೊದಲು ಕ್ಲಿಯರೆನ್ಸ್‌ ಕಡ್ಡಾಯವಾಗಿದೆ. ದುರ್ಬಲವಾದ ಪರಿಸರ ವಲಯವನ್ನು ರಕ್ಷಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದೆ ಯೋಜನೆಗೆ ಕ್ಲಿಯರೆನ್ಸ್‌ ಸುಲಭವಾಗಿ ನೀಡಬಹುದೇ? ಕುಮಾನ್ ಹಿಮಾಲಯದ ಪರಿಸರ ದುರ್ಬಲವಾದ ಮತ್ತು ಸೂಕ್ಷ್ಮ ಭೂಕಂಪನ ವಲಯವಾಗಿದೆ, ಆದರೂ ಯೋಜನೆಗೆ ಅನುಮತಿ ನೀಡಲಾಗಿದೆ. ಸರಾಸರಿ ಸಮುದ್ರ ಮಟ್ಟದಿಂದ 6,700 ಅಡಿಗಳಿಗಿಂತ ಹೆಚ್ಚು ಎತ್ತರವಿದೆಯೇ? ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಪ್ರಶ್ನಿಸಿದ್ದರು.

ಕಾನೂನು ಮತ್ತು ಸಮಗ್ರ ಪರಿಸರ ಪ್ರಭಾವದ ಮೌಲ್ಯಮಾಪನ (ಇಐಎ) ಅಡಿಯಲ್ಲಿ ಅಗತ್ಯವಾದ ಅನುಮತಿಯಿಲ್ಲದೆ ರಾಜ್ಯದಲ್ಲಿ ವಾಣಿಜ್ಯ ಯೋಜನೆಗಳನ್ನು ಪ್ರಾರಂಭಿಸುವುದನ್ನು ತಡೆಯುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ನ್ಯಾಯಮೂರ್ತಿ ಓಕಾ ಅವರ ಪೀಠವು ಆಗಸ್ಟ್ 12ಕ್ಕೆ ಪ್ರಕರಣವನ್ನು ಪಟ್ಟಿ ಮಾಡಿದೆ. ಹಿರಿಯ ವಕೀಲರಾದ ಸಿ.ಯು ಸಿಂಗ್ ಮತ್ತು ಆರ್ಯಮ ಸುಂದರಂ ನೇತೃತ್ವದ ತಂಡವು ಪ್ರತಿವಾದಿಗಳನ್ನು ಪ್ರತಿನಿಧಿಸಿದ್ದರು.

ಅರ್ಜಿದಾರರು ಸೆಪ್ಟೆಂಬರ್ 14, 2006ರ ಇಐಎ ಅಧಿಸೂಚನೆಯನ್ನು ಉಲ್ಲೇಖಿಸಿದ್ದಾರೆ, ಇದರಲ್ಲಿ ಯಾವುದೇ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸುವ ಮೊದಲು ಪೂರ್ವ ಪರಿಸರ ಅನುಮತಿ ಅಗತ್ಯವಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಇದು ಪರಿಸರ ವಿಪತ್ತುಗಳಿಗೆ ಕಾರಣವಾಗುವುದರಿಂದ ಅದನ್ನು ಬಲವಾಗಿ ನಿರಾಕರಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಕೋರ್ಟ್‌ ಗಮನಕ್ಕೆ ತಂದಿದ್ದಾರೆ.

Previous Post
ಪ್ರಚಾರಕ್ಕೆ ಧರ್ಮವನ್ನು ಬಳಸದಂತೆ ಚುನಾವಣಾ ಆಯೋಗ ಸೂಚನೆ
Next Post
ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ ಉದ್ಯಮಿ ವಿಶಾಲ್ ಅಗ್ರವಾಲ್ ಪೋಲಿಸ್ ಕಸ್ಟಡಿಗೆ

Recent News