ದೇಶದ ಜನತೆಯ ಚಿತ್ತ, ಭಾರತೀಯ ಜನತಾ ಪಕ್ಷದತ್ತ , ಜಯನಗರದಲ್ಲಿ ತೇಜಸ್ವೀ ಸೂರ್ಯ ಬೃಹತ್‌ ರೋಡ್‌ ಶೋ 

ದೇಶದ ಜನತೆಯ ಚಿತ್ತ, ಭಾರತೀಯ ಜನತಾ ಪಕ್ಷದತ್ತ , ಜಯನಗರದಲ್ಲಿ ತೇಜಸ್ವೀ ಸೂರ್ಯ ಬೃಹತ್‌ ರೋಡ್‌ ಶೋ

ಬೆಂಗಳೂರು, ಎಪ್ರೀಲ್‌ 19 : ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವೀ ಸೂರ್ಯ ರವರು, ಜಯನಗರದಲ್ಲಿ ಶುಕ್ರವಾರ ಬೃಹತ್‌ ರೋಡ್‌ ಶೋ ನಡೆಸಿ, ಮತಯಾಚನೆ ನಡೆಸಿದರು.

ಕಳೆದ 70 ವರ್ಷಗಳಿಂದ ಕಾಂಗ್ರೆಸ್‌ ಸರ್ಕಾರ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಸಂವಿಧಾನದ ಮೂಲ ಆಶಯಕ್ಕೆ ಕೊಡಲಿ ಹಾಕಿತ್ತು, ಆದರೆ ಮೋದಿ ಸರ್ಕಾರ ಅಂಬೇಡ್ಕರ್‌ ಅವರ ಆಶಯಗಳನ್ನು ಜೀವಂತಗೊಳಿಸಿದೆ. ಕಾಂಗ್ರೆಸ್‌ ಕೇವಲ ತಮ್ಮ ಅನುಕೂಲಕ್ಕಾಗಿ ಕಾನುನುಗಳನ್ನು ರೂಪಿಸಿಕೊಂಡು ದೇಶವನ್ನು ಲೂಟಿ ಮಾಡುವ ಕಾರ್ಯ ನಡೆಸಿದೆ. ಅಧಿಕಾರ ಉಳಿಸಿಕೊಳ್ಳಲು 1975 ರಲ್ಲಿ ಕಾಂಗ್ರೆಸ್‌ ದೇಶದಲ್ಲಿ ಎಮರ್ಜೆಸ್ಸಿ ಹೇರಿಕೆ ಮಾಡಿದ್ದು ಕಾಂಗ್ರೆಸ್‌ ಏಕಪಕ್ಷೀಯ ನಡೆವಳಿಕೆಗೆ ಸಾಕ್ಷಿಯಾಗಿದೆ. ಸ್ವಾತಂತ್ರ್ಯ ಭಾರತದ ನಂತರ ಕಾಂಗ್ರೆಸ್‌ ಯಾವುದೇ ಕಾನೂನು ರೂಪಿಸಿದರು ಅದು ತನ್ನ ಕುಟುಂಬ ಪರಿವಾರದ ಅನುಕೂಲಕ್ಕಾಗಿ ರಚಿಸಲಾಗಿದೆ. ದೇಶದ ಒಳಿತಿಗಾಗಿ ಕಾನೂನುಗಳನ್ನು ರಚಿಸಿದ್ದು ನರೇಂದ್ರ ಮೋದಿ ಸರ್ಕಾರ.

ಕಾಂಗ್ರೆಸ್‌ನಲ್ಲಿ ಮೂರು ತಲೆ ಮಾರುಗಳಿಂದ ರಾಜಕಾರಣವನ್ನೇ ತಮ್ಮ ಜೀವನೋಪಾಯವಾಗಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನವರು ತಮ್ಮ ಮಕ್ಕಳ, ಮೊಮ್ಮಕ್ಕಳ ಭವಿಷ್ಯಕ್ಕೋಸ್ಕರ ರಾಜಕೀಯ ಮಾಡುತ್ತಲಿದ್ದಾರೆ . ಆದರೆ, ಬಿಜೆಪಿ & ನರೇಂದ್ರ ಮೋದಿ ರವರು ದೇಶದ ಭವಿಷ್ಯಕ್ಕೋಸ್ಕರ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂಬೇಡ್ಕರ್‌ ಅವರ ಸಮಾನತೆಯ ಪಾಠವನ್ನು ಪಾಲಿಸುತ್ತಿರುವುದು ಬಿಜೆಪಿ ಮಾತ್ರ. ಬಿಜೆಪಿಯಲ್ಲಿ ಚುನಾಯಿತ ಪ್ರತಿನಿಧಿ ಹಾಗು ಸಾಮನ್ಯ ಕಾರ್ಯಕರ್ತ ಇಬ್ಬರನ್ನೂ ಸಮಾನಾವಾಗಿ ಕಾಣಲಾಗುತ್ತೆ. ಆದರೆ ಇಡೀ ಕಾಂಗ್ರೆಸ್‌ ಪಕ್ಷ ಕೇವಲ ನೆಹರೂ ಕುಟುಂಬದ ಹಿಡಿತದಲ್ಲಿದೆ ಎಂದು ಹೇಳಿದರು.

ಪ್ರಚಾರ ಸಭೆಯಲ್ಲಿ ಮಾತನಾಡಿದ ತೇಜಸ್ವೀ ಸೂರ್ಯ ರವರು, “ಭಾರತ ಇಂದು ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿ ಹೊರಹೊಮ್ಮಲು ಕಳೆದ ೧೦ ವರ್ಷಗಳಲ್ಲಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಅಳವಡಿಸಿಕೊಂಡ ನೀತಿಗಳು ಮತ್ತು ಕ್ರಮಗಳು ಕಾರಣವಾಗಿವೆ. “ಭಾರತ ಮೊದಲು” ಎಂಬುದು ನರೇಂದ್ರಮೋದಿ ನೇತೃತ್ವದ ಸರ್ಕಾರದ ವಿದೇಶಾಂಗ ನೀತಿಯ ಪ್ರಮುಖ ಅಂಶವಾಗಿದ್ದು, ದೇಶದ ಕಾರ್ಯತಂತ್ರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಹೆಚ್ಚಿನ ಆರ್ಥಿಕಾಭಿವೃದ್ಧಿಯನ್ನು ಸಾಧಿಸುವ ಉದ್ದೇಶವನ್ನು ಇದು ಹೊಂದಿದೆ.

“ಹತ್ತು ವರ್ಷಗಳ ಆಡಳಿತದಲ್ಲಿ ನರೇಂದ್ರಮೋದಿ ನೇತೃತ್ವದ ಸರ್ಕಾರ ಅನೇಕ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದೆ. ದೇಶದಲ್ಲಿ ಎಲ್ಲ ಪ್ರದೇಶಗಳಿಗೂ ಒಂದೇ ಸಂವಿಧಾನ ಅನ್ವಯಿಸಬೇಕೆಂಬ ಉದ್ದೇಶದಿಂದ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಲಾಗಿದೆ. ಇದರಿಂದ ಜಮ್ಮು-ಕಾಶ್ಮೀರ ದೇಶದ ಮುಖ್ಯವಾಹಿನಿಗೆ ಬಂದಿದ್ದು, ಇದೀಗ ಆ ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕಾಭಿವೃದ್ಧಿಯಾಗುತ್ತಿದ್ದು, ಶಾಂತಿ-ಸಮೃದ್ಧಿ ನೆಲೆಸುತ್ತಿದೆ. ರಕ್ಷಣಾ ಸಾಮಗ್ರಿಗಳ ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಿರುವ ಸರ್ಕಾರ, ರಕ್ಷಣಾ ಸ್ಟಾರ್ಟ್‌ ಅಪ್‌ ಗಳಿಗೆ 2021 ರಿಂದ 2026ರವರೆಗೆ 500 ಕೋಟಿ ರೂ. ಒದಗಿಸಿದೆ. ಕಳೆದ ಆರ್ಥಿಕ ವರ್ಷ ರಕ್ಷಣಾ ಸಾಮಗ್ರಿಗಳ ರಫ್ತು ದಾಖಲೆಯ 22,000 ಕೋಟಿ ರೂ.ಗೆ ಏರಿದ್ದು, ಇದೇ ಅವಧಿಯಲ್ಲಿ ಸರಕು ಮತ್ತು ಸೇವೆಗಳ ರಫ್ತು 776 ಶತಕೋಟಿ ಡಾಲರ್‌ ಗೆ ಏರಿದೆ. ಭಯೋತ್ಪಾದನೆ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ವಹಿಸಿರುವ ಸರ್ಕಾರ, ದೇಶದ ಹೊರಗೂ ನುಗ್ಗಿ ಭಯೋತ್ಪಾದಕರನ್ನು ನಿರ್ಣಾಮ ಮಾಡುವ ಸಾಹಸ ತೋರಿದೆ. ಸರ್ಜಿಕಲ್‌ ಸ್ಟ್ರೈಕ್‌ ಮತ್ತು ಏರ್‌ ಸ್ಟ್ರೈಕ್‌ ಗಳಿಂದ ಭಯೋತ್ಪಾದಕ ಗುಂಪುಗಳು ಮತ್ತು ಶತ್ರು ರಾಷ್ಟ್ರಗಳು ಹೆದರಿವೆ. ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳಿಂದ ದೇಶದಲ್ಲಿ ನಕ್ಸಲೀಯ ಚಟುವಟಿಕೆಗಳಲ್ಲೂ ಶೇ.75 ರಷ್ಟು ಕಡಿಮೆಯಾಗಿದ್ದು, ಈ ಹಾವಳಿಯ ಸಂಪೂರ್ಣ ನಿಗ್ರಹ ದೂರವಿಲ್ಲ.” ಎಂದು ಹೇಳಿದರು.

“ಕ್ಷೇತ್ರದಲ್ಲಿ ಪಕ್ಷದ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗಿದ್ದು, ಕಾರ್ಯಕರ್ತರು ಮತ್ತು ಮುಖಂಡರು ಬಿಸಿಲನ್ನು ಲೆಕ್ಕಿಸದೆ ಮನೆಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ನರೇಂದ್ರಮೋದಿಯವರನ್ನು ಮತ್ತೆ ಆಯ್ಕೆ ಮಾಡಲು ಮತದಾರರು ಕಾತರದಿಂದ ಮತದಾನ ದಿನವನ್ನು ಕಾಯುತ್ತಿದ್ದಾರೆ.” ಎಂದು ತೇಜಸ್ವೀ ಸೂರ್ಯ ಹೇಳಿದರು.

ಈ ಸಂದರ್ಭದಲ್ಲಿ ಜಯನಗರ ಶಾಸಕರಾದ ಶ್ರೀ ಸಿ ಕೆ ರಾಮಮೂರ್ತಿ, ಮುಖಂಡರಾದ ಶ್ರೀ ಎಸ್‌ ಕೆ ನಟರಾಜ್‌, ಶ್ರೀ ಬಿ ಸೋಮಶೇಖರ್, ಶ್ರೀ ಚಂದ್ರಶೇಖರ್‌ ರಾಜು, ಶ್ರೀ ಗೋವಿಂದ ನಾಯ್ಡು ಸೇರಿದಂತೆ ಇತರರು ಉಪಸ್ಥಿತರಿದ್ದರು.

 

Previous Post
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಶೇ 43% ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ: ಬಸವರಾಜ ಬೊಮ್ಮಾಯಿ
Next Post
ಭ್ರಷ್ಟಾಚಾರದ ಶಾಲೆ ನಡೆಸುತ್ತಿರುವ ಮೋದಿ: ರಾಹುಲ್‌ ಗಾಂಧಿ

Recent News