ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೇ ಬಾರಿಗೆ ಸರ್ಕಾರ ರಚಿಸಲಿದೆ – ವಿತ್ತ ಸಚಿವೆ ನಿರ್ಮಲ ಸೀತರಾಮನ್

ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೇ ಬಾರಿಗೆ ಸರ್ಕಾರ ರಚಿಸಲಿದೆ – ವಿತ್ತ ಸಚಿವೆ ನಿರ್ಮಲ ಸೀತರಾಮನ್

ನವದೆಹಲಿ : ಜನರು ಆಡಳಿತದಲ್ಲಿ ಸ್ಥಿರತೆ ಮತ್ತು ನಿಶ್ಚಿತತೆಯನ್ನು ಬಯಸುತ್ತಾರೆ ಹೀಗಾಗೀ ಬಿಜೆಪಿ ನೇತೃತ್ವದ ಎನ್‌ಡಿಎ ಮೂರನೇ ಬಾರಿಗೆ ಸರ್ಕಾರ ರಚಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಉಪಕ್ರಮಗಳನ್ನು ನೋಡಿದ ನಂತರ ದೇಶದ ಜನರು ಬಿಜೆಪಿಯನ್ನು ಆಯ್ಕೆ ಮಾಡಲು ಮನಸ್ಸು ಮಾಡಿದ್ದಾರೆ ಎಂದು ಹೇಳಿದರು.

ಜನರ ಉದ್ದೇಶಗಳು ಸ್ಪಷ್ಟವಾಗಿವೆ, ಮಹಿಳೆಯರು ಮತ್ತು ಯುವಕರು ಮತ ಚಲಾಯಿಸಲು ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವುದನ್ನು ನೀವು ನೋಡಬಹುದು. ಮಹಿಳೆಯರು ಯೋಜನೆಗಳ ಲಾಭವನ್ನು ಪಡೆದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಸಾಮಾನ್ಯವಾಗಿ ಕೇವಲ ಭರವಸೆಗಳನ್ನು ಮಾತ್ರ ನೋಡುವುದಿಲ್ಲ ಯೋಜನೆಗಳ ವಿತರಣೆ ಗಮನಿಸುತ್ತಾರೆ ಅವರು ಹೇಳಿದರು.

ಆದಿವಾಸಿಗಳಿಗಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳ ಕುರಿತು ಮಾತನಾಡಿದ ಸೀತಾರಾಮನ್, ಖನಿಜ ಕಾಯಿದೆ 2015 ರ ಭಾಗವಾಗಿರುವ ಜಿಲ್ಲಾ ಖನಿಜ ನಿಧಿಯು ವಾಸ್ತವವಾಗಿ ಆದಿವಾಸಿಗಳು ವಾಸಿಸುವ ಮತ್ತು ದತ್ತಿಗಳು ಶ್ರೀಮಂತವಾಗಿರುವ ಜಿಲ್ಲೆಗಳಿಗೆ ಹಣವನ್ನು ಹಿಂದಿರುಗಿಸಿದೆ. ಈ ಜಿಲ್ಲೆಗಳು ಅವರ ಬಾಕಿ ಹಣವನ್ನು ಪಡೆಯುತ್ತಿವೆ ಮತ್ತು ಬುಡಕಟ್ಟು ಪ್ರದೇಶಗಳ ಅಭಿವೃದ್ಧಿಗೆ ಇದು ಉಪಯುಕ್ತವಾಗಿದೆ ಎಂದರು.

ದೇಶದ ಸಂಪತ್ತನ್ನು “ಮಕ್ಕಳಿರುವವರಿಗೆ” ಮತ್ತು “ನುಸುಳುಕೋರರಿಗೆ” ನೀಡುತ್ತದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆಯ ವಿವಾದಕ್ಕೆ ಪ್ರತಿಕ್ರಿಯಿಸಿ, ಧರ್ಮದ ಆಧಾರದಲ್ಲಿ ಸಂಪನ್ಮೂಲಗಳನ್ನು ನೀಡಬೇಕು ಎನ್ನುವುದು ಧ್ರುವೀಕರಣವಲ್ಲವೇ?, ರಾಹುಲ್ ಗಾಂಧಿ ಅವರು ಎಕ್ಸರೇ ಮಾಡಿ, ಜನರ ಬಳಿ ಇರುವ ಸಂಪನ್ಮೂಲಗಳನ್ನು ಲೆಕ್ಕಹಾಕಿ ಮರುಹಂಚಿಕೆ ಮಾಡುವುದಾಗಿ ಹೇಳುತ್ತಾರೆ ಸಂವಿಧಾನದಲ್ಲಿ ಅವಕಾಶ ಇದೆಯೇ? ಎಂದು ಪ್ರಶ್ನಿಸಿದರು. ಇಂಡಿಯಾ ಒಕ್ಕೂಟದ ಭಾಗವಾಗಿರುವ ಲಾಲು ಯಾದವ್ ಅವರು ಮುಸ್ಲಿಮರಿಗೆ ಮೀಸಲಾತಿ ನೀಡಬೇಕು ಎಂದು ಹೇಳುತ್ತಾರೆ. ಇದೆಲ್ಲವೂ ಕಾಂಗ್ರೆಸ್‌ನ ಸೈದ್ಧಾಂತಿಕ ಬದ್ಧತೆಯ, ಮತ ಬ್ಯಾಂಕ್‌ನ ಓಲೈಕೆ ಅಲ್ಲದೇ, ಇದು ಕೋಮುವಾದ ಅಲ್ಲವೇ? ಎಂದು ಕೇಳಿದರು.

Previous Post
ದೆಹಲಿ ಚಲೋಗೆ 100 ದಿನ: ಗಡಿಯಲ್ಲಿ ಜಮಾಯಿಸಿದ ಸಾವಿರಾರು ರೈತರು
Next Post
ಅದಾನಿ ಕಲ್ಲಿದ್ದಲು ವಿವಾದ: 21 ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಿಜೆಐಗೆ ಪತ್ರ

Recent News