ರಾಯಚೂರಿಗೆ ಘೋಷಣೆಯಾಗದ ಏಮ್ಸ್ – ಹೋರಾಟಗಾರರಿಂದ ಅಸಮಧಾನ

ರಾಯಚೂರಿಗೆ ಘೋಷಣೆಯಾಗದ ಏಮ್ಸ್ – ಹೋರಾಟಗಾರರಿಂದ ಅಸಮಧಾನ

ನವದೆಹಲಿ : ಈ ಬಾರಿಯ ಬಜೆಟ್ ನಲ್ಲಿ ಏಮ್ಸ್ ಘೋಷಣೆ ಮಾಡದ ಹಿನ್ನೆಲೆ ರಾಯಚೂರಿನ ಜಿಲ್ಲಾ ಏಮ್ಸ್ ಹೋರಾಟ ಸಮಿತಿ ದೆಹಲಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳು ಧಾರವಾಡಕ್ಕೆ ಬೇಕು ಎನ್ನುವಂತಾಗಿದೆ ಇತರೆ ಜಿಲ್ಲೆಗಳ ಬಗ್ಗೆಯೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಯೋಚಿಸಬೇಕು ಎಂದು ಸಮಿತಿಯ ಅಧ್ಯಕ್ಷ ಬಸವರಾಜ್ ಕಳಸ ಅಸಮಧಾನ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಸವರಾಜ್ ಕಳಸ, ಕಲ್ಯಾಣ ಕರ್ನಾಟಕದ ಹಿಂದುಳಿದ ಜಿಲ್ಲೆ ರಾಯಚೂರಿಗೆ ಏಮ್ಸ್ ಘೋಷಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಸಚಿವರಿಗೂ ಮನವಿ ಮಾಡಿದ್ದರು‌. ಆದರೂ ನಮ್ಮ ಮನವಿಗಳಿಗೆ ಸರ್ಕಾರ ಸ್ಪಂದಿಸಿಲ್ಲ‌

ಈ ಬಾರಿಯ ಬಜೆಟ್ ನಿಂದ ನಿರಾಸೆಯಾಗಿದೆ, ವಿಶೇಷವಾದ ಯಾವುದೇ ಘೋಷಣೆಗಳು ರಾಯಚೂರಿಗೆ ಬಂದಿಲ್ಲ, ಏಮ್ಸ್ ಬರೋವರೆಗೂ ನಾವು ಬಿಡುವುದಿಲ್ಲ. ರಾಜ್ಯಕ್ಕೆ ಬರುವ ಎಲ್ಲ ಯೋಜನೆಗಳು ಧಾರವಾಡಕ್ಕೆ ಎಲ್ಲವೂ ಬೇಕು ಎನ್ನುವಂತಾಗಿದೆ, ಐಐಟಿಯನ್ನು ಕಿತ್ತುಕೊಂಡು ಹೋದರು, ಸಚಿವ ಪ್ರಹ್ಲಾದ್ ಜೋಷಿ ಅವರು ರಾಯಚೂರಿನತ್ತವೂ ಗಮನ ಹರಿಸಬೇಕು ಎಂದು ಪರೋಕ್ಷವಾಗಿ ಟೀಕಿಸಿದರು‌.

ರಾಯಚೂರಿನಲ್ಲಿ ತಾಯಿ ಶಿಶುವಿನ ಮರಣ ದರ ಹೆಚ್ಚಿದೆ, RTPS ಮತ್ತು YTPS ಸ್ಥಾವರಗಳ ಧೂಳಿನಿಂದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ ಹೀಗಾಗೀ ಅತ್ಯುತ್ತಮ ಆಸ್ಪತ್ರೆ ಈ ಭಾಗಕ್ಕೆ ಅಗತ್ಯವಿದ್ದು ಮನವಿ ಸ್ಪಂದಿಸಿ ಏಮ್ಸ್ ಘೋಷಣೆ ಮಾಡದಿದ್ದರೆ ಆಗಸ್ಟ್ ನಲ್ಲಿ ದೆಹಲಿಯ ಜಂತರ್ ಮಂತರ್ ನಲ್ಲಿ ಭಾರಿ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಸಿದರು.

Previous Post
ವಿಮಾನ ಪತನ, 18ಮಂದಿ ಧಾರುಣ ಸಾವು
Next Post
ರೈಲ್ವೆ ಕಾಮಗಾರಿಗಳಿಗೆ ಕರ್ನಾಟಕಕ್ಕೆ ₹7,559 ಕೋಟಿ ಅನುದಾನ – ಅಶ್ವಿನಿ ವೈಷ್ಣವ್

Recent News