ಲೋಕಸಭೆ ಚುನಾವಣೆ ಹೊತ್ತಲ್ಲಿ ಕಾಂಗ್ರೇಸ್ ಗೆ ಸಂಕಷ್ಟ 1,700 ಕೋಟಿ ಬಡ್ಡಿ ಸಹಿತ ದಂಡ ಕಟ್ಟಲು ಐಟಿ ನೋಟಿಸ್

ಲೋಕಸಭೆ ಚುನಾವಣೆ ಹೊತ್ತಲ್ಲಿ ಕಾಂಗ್ರೇಸ್ ಗೆ ಸಂಕಷ್ಟ 1,700 ಕೋಟಿ ಬಡ್ಡಿ ಸಹಿತ ದಂಡ ಕಟ್ಟಲು ಐಟಿ ನೋಟಿಸ್

ನವದೆಹಲಿ: ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್‌ಗೆ ಡಿಮ್ಯಾಂಡ್‌ ನೋಟಿಸ್‌ ಬಂದಿದೆ. ಚುನಾವಣೆ ಹೊತ್ತಲ್ಲಿ ದಂಡ, ಬಡ್ಡಿ ಸೇರಿದಂತೆ 1,700 ಕೋಟಿ ರೂಪಾಯಿ ಕಟ್ಟುವ ಅನಿವಾರ್ಯತೆ ಕಾಂಗ್ರೆಸ್‌ ಮುಂದಿದೆ. ತೆರಿಗೆ ನೋಟಿಸ್‌ಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತ್ತು. ಅದಾದ ಒಂದು ದಿನದ ನಂತರ ಆದಾಯ ತೆರಿಗೆ ಇಲಾಖೆಯಿಂದ 1,700 ಕೋಟಿ ರೂ. ಮೊತ್ತದ ಡಿಮ್ಯಾಂಡ್‌ ನೋಟಿಸ್‌ನ್ನು ಕಾಂಗ್ರೆಸ್ ಸ್ವೀಕರಿಸಿದೆ.

ಹೊಸ ಸೂಚನೆಯು 2017-18 ರಿಂದ 2020-21 ರವರೆಗಿನ ದಂಡ ಮತ್ತು ಬಡ್ಡಿಯನ್ನು ಒಳಗೊಂಡಿರುತ್ತದೆ. ಆದಾಯ ತೆರಿಗೆ ಅಧಿಕಾರಿಗಳು 200 ಕೋಟಿ ರೂ. ದಂಡವನ್ನು ವಿಧಿಸಿ ಮತ್ತು ಅದರ ಹಣವನ್ನು ಸ್ಥಗಿತಗೊಳಿಸಿದ ನಂತರ ಕಾಂಗ್ರೆಸ್ ಈಗಾಗಲೇ ಹಣದ ಕೊರತೆಯನ್ನು ಎದುರಿಸುತ್ತಿದೆ. ಪ್ರಕರಣದಲ್ಲಿ ಪಕ್ಷವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸಾಧ್ಯತೆ ಇದೆ.

ಏಪ್ರಿಲ್ 19 ರಿಂದ ಪ್ರಾರಂಭವಾಗುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿಯು ತೆರಿಗೆ ಅಧಿಕಾರಿಗಳನ್ನು ವಿಪಕ್ಷಗಳ ವಿರುದ್ಧ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ನಮ್ಮನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ನೋಟಿಸ್‌ಗಳನ್ನು ಕಳುಹಿಸಲಾಗುತ್ತಿದೆ. ಇದು ತೆರಿಗೆ ಭಯೋತ್ಪಾದನೆ. ಇದನ್ನು ಕಾಂಗ್ರೆಸ್ ಮೇಲೆ ದಾಳಿ ಮಾಡಲು ಬಳಸಲಾಗುತ್ತಿದೆ. ಇದು ನಿಲ್ಲಬೇಕು ಎಂದು ಕಾಂಗ್ರೆಸ್‌ನ ಜೈರಾಮ್ ರಮೇಶ್ ಮಾತನಾಡಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ನ ಪ್ರಚಾರ ಮುಂದುವರಿಯಲಿದ್ದು, ಪಕ್ಷದ ಭರವಸೆಗಳನ್ನು ದೇಶದ ಜನತೆಗೆ ಕೊಂಡೊಯ್ಯಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ನಾವು ಈ ಸೂಚನೆಗಳಿಗೆ ಹೆದರುವುದಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಪವನ್ ಖೇರಾ ಮಾತನಾಡಿ, ಬಿಜೆಪಿ ಕೂಡಾ 2019 ರಲ್ಲಿ ಬಂದಿರುವ ದೇಣಿಗೆ ಮಾಹಿತಿ ನೀಡಿಲ್ಲ, 92‌ ಮಂದಿ ದೇಣಿಗೆ ನೀಡಿದವರ ಹೆಸರು ಹಂಚಿಕೊಂಡಿಲ್ಲ 1980 ಜನರ ವಿಳಾಸವೂ ಇಲ್ಲ, ಹಣ ಯಾರು ಹೇಗೆ ನೀಡಿದರು ಮಾಹಿತಿ ಇಲ್ಲ ಬಿಜೆಪಿ 42 ಕೋಟಿ ಪಡೆದುಕೊಂಡಿದೆ. IT ಅವ್ರು ಬಿಜೆಪಿಗೂ ಸಹ ಹಣ ಎಲ್ಲಿಂದ ಬಂತು ಅಂತ ಕೇಳಬೇಕು.

ಕಾಂಗ್ರೆಸ್ ಗೆ 14 ಲಕ್ಷ ಹಣ ರೂಪದಲ್ಲಿ ಬಂದಿದ್ದಕ್ಕೆ ಐಟಿ ದಂಡ ಹಾಕುತ್ತಿದ್ದಾರೆ. ಕಾಂಗ್ರೇಸ್ ಗೆ ಹಾಕಿದ ರೀತಿಯಲ್ಲಿ ದಂಡ ವಿಧಿಸುವುದಾದರೆ ಬಿಜೆಪಿಗೂ ಸಹ 4600 ಕೋಟಿ ದಂಡ ವಿಧಿಸಬೇಕು ಐಟಿ ಈವರೆಗೂ ಈ ಬಗ್ಗೆ ಧ್ವನಿ ಎತ್ತಿಲ್ಲ. ಕಾಂಗ್ರೆಸ್ ನ ಮಾತ್ರ ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ, ಉದ್ದೇಶ ಪೂರ್ವಕವಾಗಿ ಸಿಲುಕಿಸುವ ಯತ್ನ ಮಾಡಲಾಗುತ್ತಿದೆ ಹೀಗಾದರೆ ಇದು ಚುನಾವಣೆಯ ಸಮಾನ ಹೋರಾಟ ಹೇಗಾಗಿಲಿದೆ ಎಂದು ಪ್ರಶ್ನಿಸಿದರು.

Previous Post
“ಆಪ್ ಪಕ್ಷದ ಲೋಕಸಭಾ ಚುನಾವಣಾ ಕಾರ್ಯತಂತ್ರದ ವಿವರಗಳನ್ನು ಪಡೆಯಲು ಇಡಿ ಬಯಸಿದೆ”
Next Post
ಬಿಹಾರದಲ್ಲಿ INDIA ಒಕ್ಕೂಟದ ಸೀಟು ಹಂಚಿಕೆ ಅಂತಿಮ

Recent News