ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ರಾಜ್ಯ ಬಿಜೆಪಿ ಸಂಸದರ ಪ್ರತಿಭಟನೆ

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ರಾಜ್ಯ ಬಿಜೆಪಿ ಸಂಸದರ ಪ್ರತಿಭಟನೆ

ನವದೆಹಲಿ : ವಾಲ್ಮೀಕಿ ನಿಗಮ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಚಾರ ಪ್ರಕರಣದ ತನಿಖೆಯನ್ನು ಸಿಬಿಐ ತಬಿಖೆಗೆ ನೀಡಬೇಕು ಮತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಬಿಜೆಪಿ ಮತ್ತು ಜೆಡಿಎಸ್ ಸಂಸದರು ಸಂಸತ್‌ ಮಕರ ದ್ವಾರದ ಬಳಿ ಪ್ರತಿಭಟನೆ ನಡೆಸಿದರು.

ಮಾಜಿ ಸಿಎಂ ಮತ್ತು ಸಂಸದರಾದ ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಸಂಸದ ಗೋವಿಂದ್ ಕಾರಜೋಳ, ಪಿಸಿ ಮೋಹನ್, ಬಿ.ವೈ ರಾಘವೇಂದ್ರ, ವಿಶ್ವೇಶ್ವರ ಹೆಗಡೆ ಕಾಗೇರಿ, ಜಗ್ಗೇಶ್, ಈರಣ್ಣ ಕಡಾಡಿ, ನಾರಯಣ ಸಾ ಬಾಂಡಗೆ, ಯಧುವೀರ್ ಒಡೆಯರ್, ಲೇಹರ್ ಸಿಂಗ್, ಪಿಸಿ ಗದ್ದಿಗೌಡರ್, ಡಾ. ಮಂಜುನಾಥ್, ಕ್ಯಾ. ಬ್ರಿಜೇಶ್ ಚೌಟಾ, ರಮೇಶ್ ಜಿಗಜಿಣಗಿ ಮತ್ತು ಜೆಡಿಎಸ್ ಸಂಸದರ ಮಲ್ಲೇಶ್ ಬಾಬು ಭಾಗಿಯಾಗಿದ್ದರು.

ಪ್ರತಿಭಟನೆ ಬಳಿಕ ಮಾತನಾಡಿದ ಜಗದೀಶ್ ಶೆಟ್ಟರ್, ವಾಲ್ಮೀಕಿ ನಿಗಮ ಮಂಡಳಿ ಹಗರಣ ಮತ್ತು ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರವಾಗಿ ಭಾಗಿಯಾಗಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ, ಇದನ್ನು ವಿಧಾನಸಭೆಯಲ್ಲೂ ಚರ್ಚೆಗೆ ಅವಕಾಶ ನೀಡುತ್ತಿಲ್ಲ ಹೀಗಾಗೀ ನಾವು ಸಂಸತ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಗೊವಿಂದ್ ಕಾರಜೋಳ ಮಾತನಾಡಿ, ಸರ್ಕಾರದ ಖಜಾನೆಯಿಂದ ಬೇನಾಮಿ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ ಇದಕ್ಕೆ ಮುಖ್ಯಮಂತ್ರಿಗಳು ನೇರ ಹೊಣೆ, ಹೀಗಾಗೀ ಅವರು ಕೂಡಲೇ ರಾಜೀನಾಮೆ ನೀಡಿ ನಿಪ್ಷಪಾತ ತನಿಖೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಪಿಸಿ ಮೋಹನ್ ಮಾತನಾಡಿ, ಯಾವುದೇ ಕೆಲಸ ಮಾಡದೇ ವಾಲ್ಮೀಕ ನಿಗಮದ ಹಣವನ್ನು ಬೇನಾಮಿ ಖಾತೆಗಳಿಗೆ ಜಮೆ ಮಾಡಿದೆ, ಮೂಡಾದಲ್ಲಿ ಪ್ರಭಾವ ಬೀರಿ ಅಕ್ರಮವಾಗಿ ಸೈಟು ಪಡೆದುಕೊಂಡಿದ್ದಾರೆ. ಸಂವಿಧಾನದ ಬಗ್ಗೆ ಮಾತನಾಡುವ ಈ ನಾಯಕರು ದಲಿತರಿಗೆ ನೀಡಿದ ಹಣವನ್ನು ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿದರು. ಭ್ರಷ್ಟಚಾರ ಮಾಡಿದ ಮೇಲೆ ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಅಂಟಿಕೊಂಡು ಕೂತಿದ್ದಾರೆ, ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಸಂಸದ ಬ್ರಿಜೇಶ್ ಚೌಟಾ ಹೇಳಿದರು.

ಕಳೆದ ಎರಡು ವಾರದಿಂದ ಬಿಜೆಪಿ ಶಾಸಕರು ಪ್ರತಿಭಟನೆ ನಡೆಸುತ್ತಿದ್ದಾರೆ, ಕಾಂಗ್ರೇಸ್ ಮೂಡಾ ಮತ್ತು ವಾಲ್ಮೀಕಿ ಹರಗಣದಲ್ಲಿ ಭಾಗಯಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಪರಿಶಿಷ್ಠ ಪಂಗಡ, ಪರಿಶಿಷ್ಠ ಜಾತಿ ಹಣವನ್ನು ಬಳಸಿಕೊಂಡಿದ್ದಾರೆ. ವಾಲ್ಮಿಕಿ ನಿಗದ ಹಣವನ್ನು ಚುನಾವಣೆಗೆ ಬಳಸಿಕೊಂಡಿದ್ದಾರೆ, ಇದು ಕರ್ನಾಟಕಕ್ಕೆ ಸೀಮಿತವಾಗಿಲ್ಲ, ಈ ಹಣ ದೆಹಲಿಗೂ ತಲುಪಿದೆ ಇದರ ಬಗ್ಗೆ ತನಿಖೆಯಾಗಬೇಕು ಎಂದು ಸಂಸದರ ಬಿ.ವೈ ರಾಘವೇಂದ್ರ ಹೇಳಿದರು.

ಬಿಜೆಪಿ ನಾಯಕರ ಪ್ರತಿಭಟನೆಗೆ ಕಾಂಗ್ರೇಸ್ ರಾಜ್ಯಸಭೆ ಸಂಸದ ಜಿ.ಸಿ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ. ಬಿಜೆಪಿಯೇತರ ಸಿಎಂಗಳು ರಾಜೀಕೊಡಬೇಕು ಆದರೆ ಬಿಜೆಪಿಯವರು ಎಷ್ಟೇ ಭ್ರಷ್ಟಾಚಾರ ಮಾಡಿದರು ಸೇಫ್ ಆಗಿ ಇರಬೇಕು ಇದು ನ್ಯಾಯಾನ..? ಕೇಜ್ರೀವಾಲ್ ರನ್ನು ಬಿಡಲಿಲ್ಲ, ಜಾರ್ಖಾಂಡ್ ಸಿಎಂ ಬಿಡಲಿಲ್ಲ ಈಗ ಕರ್ನಾಟಕ ಸಿಎಂ ಬಳಿ ಬಳಿ ಬಂದಿದ್ಧಾರೆ ಸಿದ್ದರಾಮಯ್ಯರನ್ನು ಅಲ್ಲಾಡಿಸಲು ಆಗಲ್ಲ, ಸಿದ್ದರಾಮಯ್ಯ ಮಾಸ್ ಲೀಡರ್

ಸಿದ್ದರಾಮಯ್ಯ ಯಾವತ್ತು ತಪ್ಪು ಮಾಡಲ್ಲ, ಜೀವನದಲ್ಲಿ ಕ್ಲೀನ್ ಇವರು ನಾಯಕ ಸಿದ್ದರಾಮಯ್ಯ, ಅಂತಹ ರಾಜಕಾರಣಿ ಮೇಲೆ ಕಪ್ಪು ಚುಕ್ಕೆ ಇಡುವ ಪ್ರಯತ್ನ ನಡೆಯುತ್ತಿದೆ, ಕರ್ನಾಟಕಕ್ಕೆ ಬಜೆಟ್ ನಲ್ಲಿ ಅನ್ಯಾಯವಾಗಿದೆ ಅದರ ಬಗ್ಗೆ ಪ್ರತಿಭಟನೆ ಮಾಡೊದು ಬಿಟ್ಟು ಯಾರೋನ್ನೋ ಖುಷಿಪಡಿಸಲು ಇಂದು ಪ್ರತಿಭಟನೆ ಮಾಡಿದ್ದಾರೆ. ಬಸವರಾಜ ಬೊಮ್ಮಾಯಿ ಸಾಚಾನಾ? ಅಶ್ವಥ್ ನಾರಾಯಣ್ ಸಾಚಾನಾ? ಈಶ್ವರಪ್ಪ ಪ್ರಕರಣದಲ್ಲಿ ಏನಾಯ್ತು? ಆತ್ಮಹತ್ಯೆ ಮಾಡಿಕೊಂಡವನಿಗೆ ನ್ಯಾಯ ಸಿಗಲಿಲ್ಲ ಈಶ್ವರಪ್ಪಗೆ ಕ್ಲೀನ್ ಚೀಟ್ ಸಿಕ್ಕಿತು ಎಂದು ತಿರುಗೇಟು ನೀಡಿದರು.

Previous Post
ಸಿಎಂ ಸಿದ್ದರಾಮಯ್ಯ ಅವರ ಬಣ್ಣ ಬಯಲಾಗಿದ್ದು, ರಾಜೀನಾಮೆ ನೀಡಬೇಕು: ಬಸವರಾಜ ಬೊಮ್ಮಾಯಿ
Next Post
ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ವಿಜಯ್ ದಿವಸ್‌ ಆಚರಿಸಿದ ಪ್ರಧಾನಿ ಮೋದಿ

Recent News