2.50 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 170 ಕೋಟಿ ರೂ. ವಿದ್ಯಾರ್ಥಿ ವೇತನ ಬಿಡುಗಡೆ

2.50 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 170 ಕೋಟಿ ರೂ. ವಿದ್ಯಾರ್ಥಿ ವೇತನ ಬಿಡುಗಡೆ

ಬೆಂಗಳೂರು, ಜನವರಿ 09: ಅಲ್ಪಸಂಖ್ಯಾತರ ಸಮುದಾಯದ 2.50 ಲಕ್ಷ ವಿದ್ಯಾರ್ಥಿಗಳಿಗೆ 2023-24 ಸಾಲಿನ 170.7 ಕೋಟಿ ರೂ. ವಿದ್ಯಾರ್ಥಿ ವೇತನ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಬಿಡುಗಡೆ ಮಾಡಿದರು. ಈ ಕುರಿತು ಮಂಗಳವಾರ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ, ಪದವಿ ಹಾಗೂ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿದ್ಯಾಸಿರಿ ಯೋಜನೆಯಡಿಯಲ್ಲಿ ಹಾಸ್ಟೆಲ್ ಸೌಲಭ್ಯದ ಆರ್ಥಿಕ ನೆರವು ಬಿಡುಗಡೆಗೆ ಚಾಲನೆ ನೀಡಿ , ಇದೇ ಸಂದರ್ಭದಲ್ಲಿ ಇಲಾಖೆಯ ನೂತನ ಡೈರಿ, ಕ್ಯಾಲೆಂಡರ್ ಬಿಡುಗಡೆ ಮಾಡಿದರು.

1 ರಿಂದ 8 ನೇ ತರಗತಿವರೆಗಿನ 2,35, 661 ವಿದ್ಯಾರ್ಥಿಗಳಿಗೆ 1 ಸಾವಿರ ರೂ. ನಿಂದ 3,500 ರೂ. ವರೆಗೆ 90.30 ಕೋಟಿ ರೂ. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ 280 ವಿದ್ಯಾರ್ಥಿಗಳಿಗೆ ತಲಾ 20 ಲಕ್ಷ ರೂ. ನಂತೆ 25.27 ಕೋಟಿ ರೂ., ಪಿಎಚ್ ಡಿ, ಎಂ ಫಿಲ್ ವ್ಯಾಸಂಗ ಮಾಡುವ 308 ವಿದ್ಯಾರ್ಥಿಗಳಿಗೆ ಮಾಸಿಕ 10 ಸಾವಿರ ರೂ. ನಂತೆ 3.50 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನೂ ಐ ಐ ಟಿ, ಐಐ ಎಂ ಪ್ರವೇಶ ಪಡೆದಿರುವ 19 ವಿದ್ಯಾರ್ಥಿಗಳಿಗೆ ತಲಾ 2 ಲಕ್ಷ ರೂ. ನಂತೆ 38 ಲಕ್ಷ ರೂ. ವಿದ್ಯಾಸಿರಿ ಯೋಜನೆಯಡಿಯಲ್ಲಿ ಹಾಸ್ಟೆಲ್ ಸೌಲಭ್ಯ ಸಿಗದ 3,330 ವಿದ್ಯಾರ್ಥಿಗಳಿಗೆ ತಲಾ 1,500 ರೂ. ನಂತೆ 13.50 ಕೋಟಿ ರೂ., ಬಿಡುಗಡೆ ಮಾಡಲಾಯಿತು. ಅಲ್ಲದೇ ಈ ಕಾರ್ಯಕ್ರಮದಲ್ಲಿ ಇಲಾಖೆ ಕಾರ್ಯದರ್ಶಿ ಮನೋಜ್ ಜೈನ್, ನಿರ್ದೇಶಕ ಜಿಲಾನಿ ಮೊಕಾಶಿ, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಉಪಸ್ಥಿತರಿದ್ದರು. ವಿಶೇಷ ಚೇತನ ಯುವಕನಿಗೆ ಸಹಾಯಹಸ್ತ ಚಾಚಿದ ಸಂತೋಷ್ ಲಾಡ್ ಅಂಗವೈಕಲ್ಯತೆ ಇದ್ದರೂ ಛಲದಿಂದ‌ ಜೀವನ ಸಾಗಿಸುತ್ತಿರುವ ಪ್ರತಿಭಾವಂತ ವಿಶೇಷ ಚೇತನ ವಿದ್ಯಾರ್ಥಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ತ್ರಿಚಕ್ರ ವಾಹನವನ್ನು ನೀಡುವುದಾಗಿ ಅಭಯಹಸ್ತ‌ ನೀಡಿದ್ದಾರೆ. ಸಂಕಷ್ಟ ಎಂದು ಹೇಳಿಕೊಂಡು ಬರುವ ಜನರ ಪಾಲಿಗೆ ಸದಾ ಸ್ಪಂದಿಸುವ ಸಂತೋಷ್ ಲಾಡ್ ಅವರು ಇರುವ ಧಾರವಾಡದ ಸರ್ಕಿಟ್ ಹೌಸ್ ಗೆ ರಾತ್ರಿ ತನ್ನ ಸ್ನೇಹಿತರ ಜೊತೆ ಬಂದಿದ್ದ ಸಿದ್ದಪ್ಪ ಎಂಬ ಈ ಯುವಕ ಮೂಲತಃ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿ. ಸದ್ಯ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅಂತಿಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ. ತಮ್ಮ ಸಂತೋಷ್ ಲಾಡ್ ಫೌಂಡೇಶನ್ ಅಧ್ಯಕ್ಷರಾದ ಆನಂದ್ ಕಲಾಲ್ ಅವರಿಗೆ ಫೋನ್ ಮಾಡಿ ಈ ಯುವಕನಿಗೆ ತ್ರಿಚಕ್ರ ವಾಹನ ಮತ್ತು 25,000 ರೂಪಾಯಿ‌ಯ ಆರ್ಥಿಕ ಸಹಾಯವನ್ನು ಮಾಡಲು ಹೇಳಿ ಸಂತೋಷ್ ಲಾಡ್ ಅವರು ಮತ್ತೊಮ್ಮೆ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.

Previous Post
RCB : ಇಷ್ಟವಿಲ್ಲದಿದ್ದರೂ ಹೆದರಿಸಿ ಆರ್‌ಸಿಬಿ ತಂಡಕ್ಕಾಗಿ ಆಡಿಸಿದರು: ಮಾಜಿ ಆಟಗಾರನ ಸ್ಫೋಟಕ ಹೇಳಿಕೆ
Next Post
Peenya Flyover: ಜನವರಿ 16ರಿಂದ 4 ದಿನಗಳ ಕಾಲ ವಾಹನ ಸಂಚಾರ ಬಂದ್‌-ಯಾಕೆ ಗೊತ್ತಾ? ಪರ್ಯಾಯ ಮಾರ್ಗಗಳ ಕುರಿತಾಗಿಯೂ ತಿಳಿಯಿರಿ

Recent News