5ನೇ ಬಾರಿಯೂ ಇಡಿ ವಿಚಾರಣೆಗೆ ಕೇಜ್ರಿವಾಲ್ ಗೈರು

5ನೇ ಬಾರಿಯೂ ಇಡಿ ವಿಚಾರಣೆಗೆ ಕೇಜ್ರಿವಾಲ್ ಗೈರು

ನವದೆಹಲಿ, ಫೆ. 2: ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ಐದನೇ ಬಾರಿಗೆ ಸಮನ್ಸ್‌ ನೀಡಿದೆ. ಆದರೆ, ಕೇಜ್ರಿವಾಲ್ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಮೂಲಗಳು ತಿಳಿಸಿವೆ.

ಈ ಹಿಂದೆ ಜನವರಿ 19ರಂದು ಕೇಜ್ರಿವಾಲ್‌ಗೆ ಇಡಿ ನಾಲ್ಕನೇ ಸಮನ್ಸ್‌ ನೀಡಿತ್ತು. ಅದನ್ನು ತಿರಸ್ಕರಿಸಿದ್ದ ಕೇಜ್ರಿವಾಲ್, ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗ ನನ್ನನ್ನು ಬಂಧಿಸುವ ಹುನ್ನಾರ ಮಾಡಲಾಗಿದೆ ಎಂದು ಆರೋಪಿಸಿದ್ದರು. ನವೆಂಬರ್ 2, ಡಿಸೆಂಬರ್ 21 ಮತ್ತು ಜನವರಿ 3 ರಂದು ಕೇಜ್ರಿವಾಲ್‌ ಅವರಿಗೆ ಮೂರು ಬಾರಿ ಇಡಿ ಸಮನ್ಸ್ ನೀಡಿತ್ತು. ಅವುಗಳೆಲ್ಲವನ್ನೂ ಕೇಜ್ರಿವಾಲ್ ತಿರಸ್ಕರಿಸಿದ್ದರು. ವಿಚಾರಣೆಗೆ ಗೈರಾಗಿದ್ದರು.

ಇಡಿಯ ಸಮನ್ಸ್ ರಾಜಕೀಯ ಪ್ರೇರಿತ ಮತ್ತು ಕಾನೂನುಬಾಹಿರವಾಗಿದೆ. ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿ ದೆಹಲಿ ಸರ್ಕಾರವನ್ನು ಉರುಳಿಸುವುದು ಪ್ರಧಾನಿ ಮೋದಿಯವರ ಗುರಿ. ಅದನ್ನು ಸಾಧಿಸಲು ನಾವು ಮಾಡಲು ಬಿಡುವುದಿಲ್ಲ ಎಂದು ಎಎಪಿ ಹೇಳಿಕೆಯಲ್ಲಿ ತಿಳಿಸಿದೆ. ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್‌ನಲ್ಲಿ ಕೇಜ್ರಿವಾಲ್‌ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ವಿಚಾರಣೆಗೆ ಒಳಪಡಿಸಿತ್ತು. ಆದರೆ, ಸಿಬಿಐ ಅವರನ್ನು ಆರೋಪಿಯನ್ನಾಗಿ ಮಾಡಿರಲಿಲ್ಲ.

ಇಡಿ ಮೊದಲ ಸಮನ್ಸ್ ನೀಡಿದಾಗಿಂದಲೂ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇತ್ತೀಚೆಗೆ ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್‌ ಅವರ ಬಂಧನದ ಬಳಿಕ ಈನ ಬಗ್ಗೆ ಚರ್ಚೆ ಜೋರಾಗಿದೆ. ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿಯ ಪ್ರಮುಖ ಮೂವರು ನಾಯಕರಾದ ಮನೀಷ್ ಸಿಸೋಡಿಯಾ, ಸಂಜಯ್ ಸಿಂಗ್ ಮತ್ತು ಸತ್ಯೇಂದ್ರ ಜೈನ್ ಈಗಾಗಲೇ ಜೈಲಿನಲ್ಲಿದ್ದಾರೆ. ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯ ಮುಂದೆ ಇಂದು (ಫೆ.2) ಎಎಪಿ ಪ್ರತಿಭಟನೆ ನಡೆಸಲಿದೆ. ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದೆ. ಕೇಜ್ರಿವಾಲ್‌ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

Previous Post
₹27000 ಕೋಟಿ ವೆಚ್ಚದ ಹಲವು ಮೇಲ್ಸೇತುವೆ, ಅಂಡರ್‌ಪಾಸ್, ಓವರ್‌ಪಾಸ್ ನಿರ್ಮಾಣ, ವಿವರ
Next Post
ರಾಜಕೀಯಕ್ಕೆ ನಟ ವಿಜಯ್ ಎಂಟ್ರಿ

Recent News