6 ಐಪಿಎಸ್, 3 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿದ ಚುನಾವಣಾ ಆಯೋಗ

6 ಐಪಿಎಸ್, 3 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಮಾಡಿದ ಚುನಾವಣಾ ಆಯೋಗ

ಬೆಂಗಳೂರು, ಏಪ್ರಿಲ್ 02: ದೇಶಾದ್ಯಂತ ಲೋಕಸಭಾ ಚುನಾವಣೆ ಕಾವು ಹೆಚ್ಚಾಗತೊಡಗಿದೆ. ರಾಜಕೀಯ ಪಕ್ಷಗಳು ಚುನಾವಣ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಕೇಂದ್ರ ಚುನಾವಣಾ ಆಯೋಗವು (ಇಸಿಐ) 06 ಐಪಿಎಸ್ ಅಧಿಕಾರಿಗಳು ಮತ್ತು 03 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಮಂಗಳವಾರ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಭಾರತೀಯ ಚುನಾವಣೆ ಆಯೋಗವು ಅಧಿಕಾರಿಗಳಿಗೆ ಅಧಿಕಾರವನ್ನು ತಕ್ಷಣದ ಕೆಳಗಿನ ಶ್ರೇಣಿಯ ಅಧಿಕಾರಿಗೆ ಹಸ್ತಾಂತರಿಸುವಂತೆ ಸೂಚಿಸಿದೆ. ವರ್ಗಾವಣೆಯ ಅಧಿಕಾರಿಗಳಿಗೆ ಯಾವುದೇ ಚುನಾವಣಾ ಸಂಬಂಧಿತ ಕರ್ತವ್ಯಗಳನ್ನು ನಿಯೋಜಿಸಬಾರದು ಎಂದು ತಿಳಿಸಿದೆ.

ಆಂಧ್ರಪ್ರದೇಶದಲ್ಲಿ ಈ ಒಟ್ಟು 9 ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಕೃಷ್ಣಾ ಜಿಲ್ಲೆಯ ಡಿಇಒ ಪಿ ರಾಜಾ ಬಾಬು, ಅನಂತಪುರಂ ಡಿಇಒ ಎಂ ಗೌತಮಿ, ಡಿಇಒ ತಿರುಪತಿ ಡಾ.ಲಕ್ಷ್ಮೀಶ ಅವರು ವರ್ಗಾವಣೆಗೊಂಡ ಮೂವರು ಐಎಎಸ್ ಅಧಿಕಾರಿಗಳಾಗಿದ್ದಾರೆ. ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಹಿತಿ ಚಿತ್ತೂರು ಎಸ್‌ಪಿ ಪಿ.ಜೋಶುವಾ, ಪ್ರಕಾಶಂ ಎಸ್‌ಪಿ ಪರಮೇಶ್ವರ್, ಪಲ್ನಾಡು ಎಸ್‌ಪಿ ವೈ.ರವಿಶಂಕರ್ ರೆಡ್ಡಿ, ಅನಂತಪುರಂ ಎಸ್‌ಪಿ ಕೆಕೆಎನ್ ಅನ್ಬುರಾಜನ್, ನೆಲ್ಲೂರು ಎಸ್‌ಪಿ ಕೆ ತಿರುಮಲೇಶ್ವರ್ ಮತ್ತು ಐಜಿಪಿ ಗುಂಟೂರು ರೇಂಜ್ ಜಿ ಪಾಲ ರಾಜು ಅವರು ವರ್ಗಾಗವಣೆಗೊಂಡ ಐಪಿಎಸ್ ಅಧಿಕಾರಿಗಳು ಎಂದು ಚುನಾವಣೆ ಆಯೋಗ ತಿಳಿಸಿದೆ.

ಮಾರ್ಚ್ 17 ರಂದು ಪ್ರಧಾನಿ ನರೇಂದ್ರ ಮೋದಿಯವರ ಪಾಲ್ನಾಡು ಸಭೆಯಲ್ಲಿ ಭದ್ರತಾ ಲೋಪ ಆರೋಪದ ಮೇಲೆ ಐಜಿಪಿ ಗುಂಟೂರು ರೇಂಜ್ ಜಿ ಪಾಲ ರಾಜು ಮತ್ತು ಪಲ್ನಾಡು ಎಸ್‌ ವೈ ರವಿಶಂಕರ್ ರೆಡ್ಡಿ ಅವರನ್ನು ಅಮಾನತುಗೊಳಿಸಲಾಗಿದೆ. ಆಂಧ್ರದಲ್ಲಿ ಲೋಕಸಭಾ-ವಿಧಾನಸಭಾ ಚುನಾವಣೆ ತೆಲುಗು ನಾಡು ಆಂಧ್ರಪ್ರದೇಶದಲ್ಲಿ ಮುಂದಿನ ತಿಂಗಳು ಮೇ 13 ರಂದು ಚುನಾವಣೆ ನಡೆಯಲಿದ್ದು. ವಿಶೇಷವೆಂದರೆ ಲೋಕಸಭಾ ಚುನಾವಣೆ ಜೊತೆಗೆ ಈ ಬಾರಿ ಇಲ್ಲಿನ 175 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಇಲ್ಲಿ ಒಟ್ಟು 25 ಲೋಕಸಭಾ ಕ್ಷೇತ್ರಗಳು ಇವೆ. ಆಂಧ್ರಪ್ರದೇಶದಲ್ಲಿ ಸದ್ಯ ಸಿಎಂ ಜಗನ್ ಮೋಹನ್ ರೆಡ್ಡಿಯವರ ವೈಎಸ್‌ಆರ್‌ಸಿಪಿ ಪಕ್ಷದ ಆಡಳಿತವಿದೆ. ತೆಲುಗು ದೇಶಂ ಪಕ್ಷ (ಟಿಡಿಪಿ) ವಿರೋಧ ಪಕ್ಷದ ಸ್ಥಾನದಲ್ಲಿದೆ. ಜನಸೇನಾ ಮತ್ತು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಇಲ್ಲಿ ಪ್ರತಿಪಕ್ಷ ಮತ್ತು ವಿಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.

Previous Post
ಆಯುರ್ವೇದ ಉತ್ಪನ್ನಗಳನ್ನು ಉತ್ತೇಜಿಸಲು ದಾರಿತಪ್ಪಿಸುವ ಜಾಹೀರಾತುಗಳ ಪ್ರಸಾರ ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ ಕ್ಷಮೆ ಒಪ್ಪದ ಸುಪ್ರೀಂಕೋರ್ಟ್
Next Post
ಕೊನೆಗೂ ತಂಡದಲ್ಲಿ ಬದಲಾವಣೆ ಮಾಡಿದ ಆರ್‌ಸಿಬಿ

Recent News