75 ಕೋಟಿ ಭಾರತೀಯರ ಮಾಹಿತಿ ಮಾರಾಟಕ್ಕೆ: ವರದಿ

75 ಕೋಟಿ ಭಾರತೀಯರ ಮಾಹಿತಿ ಮಾರಾಟಕ್ಕೆ: ವರದಿ

ನವದೆಹಲಿ, ಜ.‌ 26: ಸುಮಾರು 75 ಕೋಟಿ ಭಾರತೀಯರ ಆಧಾರ್ ವಿವರಗಳು ಮತ್ತು ಮೊಬೈಲ್ ಫೋನ್ ಸಂಖ್ಯೆಗಳಂತಹ ವೈಯಕ್ತಿಕ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಡಿಜಿಟಲ್ ಅಪಾಯ ವಿಶ್ಲೇಷಣೆ ಕಂಪನಿ ‘ಕ್ಲೌಡ್ಸೆಕ್’ ವರದಿಯಲ್ಲಿ ತಿಳಿಸಿದೆ ಎಂದು Scroll.in ವರದಿ ಮಾಡಿದೆ.

ಸಮಗ್ರ ಮೊಬೈಲ್ ನೆಟ್ವರ್ಕ್ ಗ್ರಾಹಕ ಡೇಟಾ ಬೇಸ್‌ನ ಮಾರಾಟವನ್ನು ಉತ್ತೇಜಿಸುವ ‘ಭೂಗತ ವೇದಿಕೆ’ಯಲ್ಲಿ ಸೈಬೋಡೆವಿಲ್ ಎಂಬ ಹ್ಯಾಕರ್ ಮಾರಾಟ ಕುರಿತ ಪೋಸ್ಟ್ ಮಾಡಿರುವುದನ್ನು ಡಿಜಿಟಲ್ ಅಪಾಯ ಸಂರಕ್ಷಣಾ ವೇದಿಕೆ ಕಂಡು ಹಿಡಿದಿದೆ ಎಂದು ಕಂಪನಿ ಹೇಳಿದೆ. ಟೆಲಿಗ್ರಾಮ್‌ನಲ್ಲಿ ಜನವರಿ 14 ರಂದು UNIT8200 ಎಂಬ ಹೆಸರಿನ ಇನ್ನೊಬ್ಬ ಹ್ಯಾಕರ್ ಕೂಡ ಇದೇ ರೀತಿಯ ಪೋಸ್ಟ್ ಮಾಡಿದ್ದಾನೆ ಎಂದು ಕ್ಲೌಡ್ಸೆಕ್ ತಿಳಿಸಿದೆ.

ಮಾರಾಟಕ್ಕಿಟ್ಟ ಮಾಹಿತಿಯಲ್ಲಿ ಮೊಬೈಲ್ ಬಳಕೆದಾರರ ಹೆಸರು, ಅವರ ಫೋನ್ ಸಂಖ್ಯೆಗಳು, ವಸತಿ ವಿಳಾಸಗಳು, ಆಧಾರ್ ವಿವರಗಳು ಮತ್ತು ಅವರ ಕುಟುಂಬ ಸದಸ್ಯರ ಹೆಸರನ್ನು ಹೊಂದಿದೆ ಎಂದು ಆರೋಪಿಸಲಾಗಿದೆ.

Previous Post
ಭಾರತ್ ಜೋಡೋ ನ್ಯಾಯ ಯಾತ್ರೆ: ಸಾರ್ವಜನಿಕ ಸಭೆಗಳಿಗೆ ಅನುಮತಿ ನೀಡದ ದೀದಿ ಸರ್ಕಾರ
Next Post
ಸೇನಾ ಪಡೆಗಳ ಪರೇಡ್ ಮುನ್ನಡೆಸಿದ ಮಹಿಳೆಯರು

Recent News