91 ವರ್ಷದಲ್ಲಿ ಬಿಜೆಪಿ ಜೊತೆಗೆ ಮೈತ್ರಿ, ಮೋದಿ ಹೊಗಳುವ ಗೌಡರ ಮರ್ಮ ಅರ್ಥವಾಗ್ತಿಲ್ಲ, ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ, ನಯವಾಗೇ ತಿರುಗೇಟು ನೀಡಿದ ಹೆಚ್.ಡಿ ದೇವೇಗೌಡ

91 ವರ್ಷದಲ್ಲಿ ಬಿಜೆಪಿ ಜೊತೆಗೆ ಮೈತ್ರಿ, ಮೋದಿ ಹೊಗಳುವ ಗೌಡರ ಮರ್ಮ ಅರ್ಥವಾಗ್ತಿಲ್ಲ, ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ, ನಯವಾಗೇ ತಿರುಗೇಟು ನೀಡಿದ ಹೆಚ್.ಡಿ ದೇವೇಗೌಡ

ನವದೆಹಲಿ : ತಮ್ಮ ರಾಜಕೀಯ ಜೀವನದಲ್ಲಿ ಯಾರನ್ನು ಹೊಗಳದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಈಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಾಡಿ ಹೊಗಳುತ್ತಿದ್ದಾರೆ ಅವರ ರಾಜಕೀಯ ನಿಲುವು ಬದಲಾವಣೆಗೆ ಕಾರಣ ಏನು ಎಂದು ಅರ್ಥವಾಗುತ್ತಿಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದಾರೆ.

ರಾಜ್ಯಸಭೆ ಸದಸ್ಯರ ಅವಧಿ ಮುಕ್ತಾಯ ಹಿನ್ನಲೆ ಬಿಳ್ಕೊಡುಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ನಿರ್ಗಮಿತ ಸದಸ್ಯರ ಬಗ್ಗೆ ಮಾತನಾಡುತ್ತಾ ದೇವೇಗೌಡರ ಬಗ್ಗೆ ಉಲ್ಲೇಖಿಸಿದ ಖರ್ಗೆ ದೇವೇಗೌಡರ ಮತ್ತು ನಮ್ಮ ನಡುವೆ ರಾಜಕೀಯ ನಡೆಯುತ್ತಲೇ ಇರುತ್ತದೆ ನಾನು ಕಾಂಗ್ರೆಸ್ ಬಿಡಲಿಲ್ಲ, ಅವರು ಜನತಾ ಪಕ್ಷ ಬಿಡಲಿಲ್ಲ ಹೀಗಾಗಿ ನಮ್ಮ ನಡುವೆ ನಿರಂತರ ರಾಜಕೀಯ ಹೋರಾಟ ನಡೆಯುತ್ತಿದೆ

ನಿಮ್ಮ ಜೊತೆಗೆ ಹಣ ಇರುವವರು ಇಲ್ಲ ಹೀಗಾಗಿ ನಿಮ್ಮಿಂದ ಸರ್ಕಾರ ನಡೆಸುವುದು ಕಷ್ಟವಾಗಲಿದೆ ಎಂದು ನನಗೆ ಹಿಂದೆ ಒಮ್ಮೆ ದೇವೇಗೌಡರು ಹೇಳಿದ್ದರು ಈ ಹಿನ್ನಲೆ ನಿಮ್ಮ ಸ್ನೇಹಿತನನ್ನ ( ಧರ್ಮಸಿಂಗ್ ) ಸಿಎಂ ಮಾಡುತ್ತೇವೆ ಎಂದು ಹೇಳಿದ್ದರು. ನನ್ನ ಬೆಂಬಲಿಸಲು ಹಣ ಇದ್ದವರು ಯಾರು ಇರಲಿಲ್ಲ ಇಂತಹ ಸಾಕಷ್ಟು ಮಾತುಗಳು ನಮ್ಮ ನಡುವೆ ನಡೆಯುತ್ತಿರುತ್ತವೆ ಎಂದರು.

ಇಡೀ ಜೀವನ ಅವರು ಸಮಾಜವಾದ, ಜಾತ್ಯತೀತವಾದ, ರೈತರ ಪರವಾಗಿ ಹೋರಾಟ ನಡೆಸಿದವರು 91 ವಯಸ್ಸಿನಲ್ಲಿ ಅವರಿಗೆ ಏನಾಯಿತು ಗೊತ್ತಿಲ್ಲ ಈಗ ಏಕಾಏಕಿ ಹೋಗಿ ಮೋದಿ ಅವರನ್ನು ಅಪ್ಪಿಕೊಂಡಿದ್ದಾರೆ ಅವರನ್ನು ಎಷ್ಟು ಹೊಗಳುತ್ತಿದ್ದಾರೆ ಎಂದರೆ ಜೀವನದಲ್ಲಿ ಯಾರನ್ನು ಇಷ್ಟು ಹೋಗಳಲಿಲ್ಲ, ನಾನು ಬಹಳ ವರ್ಷದಿಂದ ನೋಡುತ್ತಿದ್ದೇನೆ ಅವರು ಯಾವತ್ತು ಯಾರನ್ನು ಹೋಗಳುವುದಿಲ್ಲ ಆದರೆ ಈಗ ಮೋದಿ ಅವರನ್ನು ಹೋಗಳುತ್ತಿದ್ದಾರೆ ಅವರ ರೂಢಿ ಬದಲಾಗಿದ್ದೇಗೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿದೆ.ಮೋದಿ ಒಬ್ಬರೇ ನನ್ನನ್ನು ಪ್ರೀತಿಯಿಂದ ಕಂಡಿದ್ದು ಎಂದು ಹೋಗಳುತ್ತಿದ್ದಾರೆ ಇದೇ ಪ್ರೀತಿ ಮೊದಲೇ ಇದ್ದಿದ್ದರೆ ಚೆನ್ನಾಗಿರ್ತಿತ್ತು 91 ವಯಸ್ಸಿನಲ್ಲಿ ಏನ್ ಪ್ರಯೋಜನ ಈಗ ಅನಿವಾರ್ಯವಾಗಿತ್ತು ಮೈತ್ರಿಯಾಗಿದೆ ಇದರ ನಾನು ಮಾತನಾಡಲ್ಲ ಅವರಿಗೆ ಏನ್ ಚಿಕಿತ್ಸೆ ಕೊಡಬೇಕು ಮೋದಿ ಅವರು ಕೊಟ್ಟಿದ್ದಾರೆ ಎಂದು ಕಾಲೇಳೆದರು.

ಇದಕ್ಕೆ ನಯವಾಗೇ ತಿರುಗೇಟು ನೀಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಲ್ಲಿಕಾರ್ಜುನ್ ಖರ್ಗೆ ಅವರ ಗುಣಗಾಣ ಮಾಡಿದರು. ಕಾಂಗ್ರೇಸ್‌ನಲ್ಲಿ ಖರ್ಗೆ 40 ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಆದರೆ ಅವರ ಸ್ನೇಹಿತರಿಂದಲೇ ಅವರಿಗೆ ಹಿನ್ನಡೆಯಾಗಿದೆ
ಖರ್ಗೆ ಸಿಎಂ ಆಗಬೇಕು ಎಂದು ನಾನು ಬಯಸಿದ್ದೆ, ಗುಲಾಮ್ ನಬಿ ಆಜಾದ್ ಬಳಿ ಕುಮಾರಸ್ವಾಮಿ ಸಿಎಂ ಆಗೋದು ಬೇಡ, ಖರ್ಗೆ ಸಿಎಂ ಆಗಲಿ ಎಂದು ಹೇಳಿದ್ದೆ
ಆದರೆ ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿ ಸಿಎಂ ಆಗಬೇಕು ಎಂದರು.

13 ತಿಂಗಳು ಸಿಎಂ ಆಗಿದ್ದ ಕುಮಾರಸ್ವಾಮಿಯನ್ನು ಖರ್ಗೆ ತೆಗೆಯಲಿಲ್ಲ, ಕಾಂಗ್ರೆಸ್ ನಾಯಕರಿಂದಾಗಿಯೇ ಸರ್ಕಾರ ಉರುಳಿತು ಇದರಿಂದಾಗಿ ನಾನು ಕಾಂಗ್ರೆಸ್ ಮೈತ್ರಿಯಿಂದ ಹೊರಬಂದು ಎನ್‌ಡಿಎಗೆ ಬೆಂಬಲ ಸೂಚಿಸಿದ್ದೇನೆ‌. ನನ್ನ ವೈಯಕ್ತಿಕ ಕಾರಣಕ್ಕಾಗಿ ಬಿಜೆಪಿಗೆ ಬೆಂಬಲ ನೀಡಿಲ್ಲ, ಜೆಡಿಎಸ್ ಮುಗಿಸಬೇಕು ಎಂದು ಕಾಂಗ್ರೆಸ್ ನಾಯಕರು ಪ್ರಯತ್ನ ಪಟ್ಟರು.. ಇದಕ್ಕಾಗಿ ಬಿಜೆಪಿಗೆ ಬೆಂಬಲ ಕೊಟ್ಟೆ ಎಂದು ಸಮರ್ಥನೆ ನೀಡಿದ್ದರು.

Previous Post
ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಕೊಡದೆ ಧ್ವನಿ ಅಡಗಿಸುವ ಯತ್ನ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪ
Next Post
ಕರ್ನಾಟಕದ ಬಳಿಕ ದೆಹಲಿಯಲ್ಲಿ ಕೇರಳ ಸರ್ಕಾರದ ಪ್ರತಿಭಟನೆ ಸಿಎಂ ಪಿಣರಾಯಿ ವಿಜಯನ್‌ಗೆ ವಿಪಕ್ಷ ನಾಯಕರ ಬೆಂಬಲ

Recent News