6 ರಾಜ್ಯಗಳ ಗೃಹ ಕಾರ್ಯದರ್ಶಿಗಳ ಪದಚ್ಯುತಿ

6 ರಾಜ್ಯಗಳ ಗೃಹ ಕಾರ್ಯದರ್ಶಿಗಳ ಪದಚ್ಯುತಿ

ನವದೆಹಲಿ. ಮಾ.18: ಗುಜರಾತ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ ಸೇರಿದಂತೆ ಆರು ರಾಜ್ಯಗಳಲ್ಲಿ ಗೃಹಕಾರ್ಯದರ್ಶಿಗಳನ್ನು ಪದಚ್ಯುತಗೊಳಿಸಿ ಭಾರತೀಯ ಚುನಾವಣಾ ಆಯೋಗ (ಇಸಿಐ) ಆದೇಶ ಹೊರಡಿಸಿದೆ. ಮಿಜೋರಾಂ ಮತ್ತು ಹಿಮಾಚಲ ಪ್ರದೇಶದ ಸಾಮಾನ್ಯ ಆಡಳಿತ ಇಲಾಖೆಯ ಕಾರ್ಯದರ್ಶಿಯನ್ನೂ ತೆಗೆದು ಹಾಕಲಾಗಿದೆ. ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕರನ್ನು ಕೂಡ (ಡಿಜಿಪಿ) ಚುನಾವಣಾ ಆಯೋಗ ವಜಾಗೊಳಿಸಿದೆ.

ಸಿಇಸಿ ರಾಜೀವ್ ಕುಮಾರ್ ನೇತೃತ್ವದ ಚುನಾವಣಾ ಸಮಿತಿಯು ಬೃಹನ್ಮುಂಬೈ ಮುನ್ಸಿಪಲ್ ಕಮಿಷನರ್ ಇಕ್ಬಾಲ್ ಸಿಂಗ್ ಚಾಹಲ್ ಮತ್ತು ಹೆಚ್ಚುವರಿ ಆಯುಕ್ತರು ಮತ್ತು ಡೆಪ್ಯುಟಿ ಕಮಿಷನರ್‌ಗಳನ್ನು ವಜಾಗೊಳಿಸುವಂತೆ ಆದೇಶಿಸಿತು. ಈ ಹಿಂದೆ ಮೂರು ವರ್ಷ ಪೂರೈಸಿರುವ ಅಥವಾ ಅವರ ತವರು ಜಿಲ್ಲೆಯಲ್ಲಿರುವ ಚುನಾವಣಾ ಸಂಬಂಧಿತ ಕೆಲಸಗಳಿಗೆ ಸಂಬಂಧಿಸಿದ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಯೋಗವು ಎಲ್ಲಾ ರಾಜ್ಯ ಸರ್ಕಾರಗಳಿಗೆ ಸೂಚಿಸಿತ್ತು. ಆದರೆ ಕೆಲವು ಮುನ್ಸಿಪಲ್ ಕಮಿಷನರ್‌ಗಳು ಮತ್ತು ಕೆಲವು ಹೆಚ್ಚುವರಿ ಮತ್ತು ಉಪ ಮುನ್ಸಿಪಲ್ ಕಮಿಷನರ್‌ಗಳು ಈ ಆದೇಶವನ್ನು ಪಾಲಿಸಿಲ್ಲ. ಅದಕ್ಕಾಗಿ ಈ ಕ್ರಮವನ್ನು ತೆಗೆದುಕೊಂಡಿದೆ.

ಎಲ್ಲ ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ತಿಳಿಸಲಾಗಿತ್ತು. ಆಯೋಗವು ಸೋಮವಾರ ಸಂಜೆ 6 ಗಂಟೆಯೊಳಗೆ ವರದಿ ನೀಡುವಂತೆ BMC ಮತ್ತು ಹೆಚ್ಚುವರಿ ಮತ್ತು ಜಿಲ್ಲಾಧಿಕಾರಿಗಳ ವರ್ಗಾವಣೆಗೆ ಸೂಚಿಸಿತು. ಮಹಾರಾಷ್ಟ್ರದ ಇತರ ಕಾರ್ಪೊರೇಷನ್‌ಗಳ ಇದೇ ರೀತಿಯ ಎಲ್ಲಾ ಮುನ್ಸಿಪಲ್ ಕಮಿಷನರ್‌ಗಳು ಮತ್ತು ಹೆಚ್ಚುವರಿ ಅಥವಾ ಉಪ ಮುನ್ಸಿಪಲ್ ಕಮಿಷನರ್‌ಗಳನ್ನು ವರ್ಗಾಯಿಸಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ. ಮಹಾರಾಷ್ಟ್ರದಲ್ಲೂ ಇತರ ಕಾರ್ಪೊರೇಷನ್‌ಗಳ ಇದೇ ರೀತಿಯ ಎಲ್ಲಾ ಮುನ್ಸಿಪಲ್ ಕಮಿಷನರ್‌ಗಳು ಮತ್ತು ಉಪ ಮುನ್ಸಿಪಲ್ ಕಮಿಷನರ್‌ಗಳನ್ನು ವರ್ಗಾಯಿಸಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ.

ಚುನಾವಣೆ ದಿನಾಂಕ ಘೋಷಣೆಯಾದಂತೆ ಚುನಾವಣಾ ಆಯೋಗ ತುಂಬಾ ಅಲರ್ಟ್ ಆಗಿ ಕೆಲಸ ಮಾಡುತ್ತಿದೆ. 3 ವರ್ಷಕ್ಕಿಂತ ಹೆಚ್ಚು ಅಥವಾ ಅವರ ತವರು ಜಿಲ್ಲೆಯಾಗಿದ್ದಾರೆ. ಚುನಾವಣೆ ಸಮಯದಲ್ಲಿ ಆಯ್ಕೆ ಆಗಿದ್ದಾರೆ ಅಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ, ಹಿಂದೆಯೇ ಹೇಳಿತ್ತು. ಸಿಇಸಿ ಕುಮಾರ್ ಮತ್ತು ಸಹ ಇಸಿಗಳಾದ ಜ್ಞಾನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ಅವರನ್ನು ಒಳಗೊಂಡ ಆಯೋಗ ಸೋಮವಾರ ಇಲ್ಲಿ ಸಭೆ ನಡೆಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

Previous Post
ತೆಲಂಗಾಣ ರಾಜ್ಯಪಾಲೆ ತಮಿಳ್ ಸಾಯಿ ಸೌಂದರರಾಜನ್ ರಾಜೀನಾಮೆ
Next Post
ಅಳುತ್ತಾ ಕಾಂಗ್ರೆಸ್ ತೊರೆದ ಹಿರಿಯ ನಾಯಕ ನಾನಲ್ಲ ಎಂದ ಅಶೋಕ್ ಚವಾಣ್

Recent News