ಮನೆ ಮಗನಾಗಿ ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ನಾನು ಬದ್ಧ ಪಿಲಿಭಿತ್‌ನ ಜನರಿಗೆ ಭಾವನತ್ಮಾಕ ಪತ್ರ ಬರೆದ ವರುಣ್ ಗಾಂಧಿ

ಮನೆ ಮಗನಾಗಿ ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ನಾನು ಬದ್ಧ – ವರುಣ್ ಗಾಂಧಿ

ನವದೆಹಲಿ : ಭಾರತೀಯ ಜನತಾ ಪಕ್ಷದ ಹಾಲಿ ಸಂಸದ ವರುಣ್ ಗಾಂಧಿ ಅವರು ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದು, ಬಿಜೆಪಿಯು ಕೇಂದ್ರ ಸಚಿವ ಜಿತೇಂದ್ರ ಪ್ರಸಾದ್‌ಗೆ ಟಿಕೆಟ್ ಘೋಷಣೆಯಾಗಿದೆ. ಈ ಹಿನ್ನಲೆ ವರುಣ್ ಗಾಂಧಿ ತಮ್ಮ ಕ್ಷೇತ್ರದ ಜನರಿಗೆ ಪತ್ರ ಬರೆದಿದ್ದು, ನನ್ನ ಅಧಿಕಾರಾವಧಿಯು ಕೊನೆಗೊಳ್ಳುತ್ತಿದ್ದರೂ ಸಹ ನನ್ನ ಕೊನೆಯ ಉಸಿರು ಇರುವವರೆಗೂ ನನ್ನ ಸಂಬಂಧ ನಿಮ್ಮೊಂದಿಗೆ ಕೊನೆಗೊಳ್ಳುವುದಿಲ್ಲ ಎಂದು ಭಾವಾನಾತ್ಮಕವಾಗಿ ಪತ್ರ ಬರೆದಿದ್ದಾರೆ.

ಪಿಲಿಭಿತ್‌ನ ಮಹಾನ್ ಜನರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದಿದ್ದನ್ನು ನಾನು ಅದೃಷ್ಟಶಾಲಿ ಎಂದು ಪರಿಗಣಿಸಿದ್ದೇನೆ. ಅಭಿವೃದ್ಧಿಯಲ್ಲಿ ದೊಡ್ಡ ಕೊಡುಗೆಯನ್ನು ಹೊಂದಿದೆ. ನಿಮ್ಮ ಪ್ರತಿನಿಧಿಯಾಗಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ ಮತ್ತು ನಾನು ಯಾವಾಗಲೂ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಿಮ್ಮ ಹಿತಾಸಕ್ತಿಗಳನ್ನು ಸಮರ್ಥಿಸಿಕೊಂಡಿದ್ದೇನೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ಸಂಸದನಾಗಲ್ಲದಿದ್ದರೆ, ಮಗನಾಗಿ ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ನಾನು ಬದ್ಧನಿದ್ದೇನೆ. ನನ್ನ ಮನೆ ಬಾಗಿಲು ನಿಮಗಾಗಿ ಯಾವಾಗಲೂ ತೆರೆದಿರುತ್ತದೆ. ಯಾವುದೇ ವೆಚ್ಚವನ್ನು ಲೆಕ್ಕಿಸದೆ ನಿಮ್ಮ ಕೆಲಸವನ್ನು ಯಾವಾಗಲೂ ಮಾಡುವುದನ್ನು ಮುಂದುವರಿಸಲು ನಾನು ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ ಎಂದು ಅವರು ಹೇಳಿದ್ದಾರೆ. ಪಿಲಿಭಿತ್ ಜತೆಗಿನ ಅವರ ಪರಿಚಯವನ್ನು ನೆನಪಿಸಿಕೊಂಡ ವರುಣ್, ಮೂರು ವರ್ಷದ ಬಾಲಕನಾಗಿದ್ದಾಗ ತನ್ನ ತಾಯಿ ಮೇನಕಾ ಗಾಂಧಿಯೊಂದಿಗೆ 1983ರಲ್ಲಿ ಭೇಟಿ ನೀಡಿದ್ದನ್ನು ಮೆಲುಕು ಹಾಕಿದ್ದಾರೆ.

1983ರಲ್ಲಿ ಮೂರು ವರ್ಷದ ಹುಡುಗನಾಗಿದ್ದಾಗ ನಾನು ಪಿಲಿಭಿತ್‌ಗೆ ಮೊದಲ ಬಾರಿಗೆ ತನ್ನ ತಾಯಿಯ ಬೆರಳು ಹಿಡಿದು ಬಂದದ್ದು ನೆನಪಿದೆ. ಮುಂದೊಂದು ದಿನ ಈ ಭೂಮಿ ತನ್ನ ಕೆಲಸದ ಸ್ಥಳವಾಗುತ್ತದೆ ಮತ್ತು ಇಲ್ಲಿನ ಜನರು ನನ್ನವಾರಾಗುತ್ತಾರೆ ಎಂಬುದು ಆ ಬಾಲಕನಿಗೆ ಹೇಗೆ ಗೊತ್ತು ಎಂದಿದ್ದಾರೆ. ಪಿಲಿಭಿತ್ ಮತ್ತು ನನ್ನ ನಡುವಿನ ಸಂಬಂಧವು ಪ್ರೀತಿ ಮತ್ತು ವಿಶ್ವಾಸದಿಂದ ಕೂಡಿದೆ. ಇದು ಯಾವುದೇ ರಾಜಕೀಯ ಗುಣಾಕಾರಕ್ಕಿಂತ ಹೆಚ್ಚಿನದಾಗಿದೆ. ನಾನು ಇದ್ದೆ, ಇದ್ದೇನೆ ಮತ್ತು ನಿಮ್ಮವನಾಗಿರುತ್ತೇನೆ ಎಂದು ವರುಣ್ ಗಾಂಧಿ ಹೇಳಿದರು.

Previous Post
ನನ್ನ ಸಿಲುಕಿಸುವುದೇ ಇಡಿಯ ಏಕೈಕ ಉದ್ದೇಶ ಎಂದ ಕೇಜ್ರಿವಾಲ್; ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದ ಇಡಿ
Next Post
ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡುವುದಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

Recent News