ಎಲ್ಲಾ ಪೀಸ್.. ಪೀಸ್.. ಇಸ್ರೇಲ್ ಸೇನೆ ದಾಳಿಗೆ ನರಕವಾಯ್ತು ಗಾಜಾ…

ಎಲ್ಲಾ ಪೀಸ್.. ಪೀಸ್.. ಇಸ್ರೇಲ್ ಸೇನೆ ದಾಳಿಗೆ ನರಕವಾಯ್ತು ಗಾಜಾ…

ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಭೀಕರ ತಿಕ್ಕಾಟದಲ್ಲಿ ಗಾಜಾ ನಗರವನ್ನೇ ಉಡೀಸ್ ಮಾಡಲಾಗಿದೆ. ಇನ್ನು ಸುಮಾರು 7 ತಿಂಗಳಿಂದ ಇಬ್ಬರ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಹೀಗಾಗಿ ಇಡೀ ಗಾಜಾ ನಗರ ನಾಶವಾಗಿ ಹೋಗಿದ್ದು, ಇದೀಗ ವಿಶ್ವಸಂಸ್ಥೆಯ ಹೇಳಿಕೆ ಭಯ ಹುಟ್ಟಿಸುತ್ತಿದೆ. ಅಕ್ಟೋಬರ್ 7 ರಂದು ಶುರುವಾದ ಇಸ್ರೇಲ್ & ಹಮಾಸ್ ನಡುವಿನ ಯುದ್ಧದಲ್ಲಿ ಈಗಾಗಲೇ 34 ಸಾವಿರಕ್ಕೂ ಹೆಚ್ಚು ಜನರ ಜೀವ ಬಲಿಯಾಗಿದೆ. ಗಾಜಾ ಭಾಗಶಃ ಕಟ್ಟಡಗಳು ಪೀಸ್ ಪೀಸ್ ಆಗಿ ಹೋಗಿವೆ. ಜನ ಜೀವ ಉಳಿಸಿಕೊಳ್ಳಲು ನೂರಾರು ಕಿಲೋ ಮೀಟರ್ ದೂರ ಓಡಿ ಹೋಗಿದ್ದಾರೆ. ಈ ಮೂಲಕ ಇಸ್ರೇಲ್‌ ದಾಳಿಯ ಪರಿಣಾಮ ಗಾಜಾ ಪಟ್ಟಿಯ ಶೇ 35ರಷ್ಟು ಕಟ್ಟಡಗಳು ಪೂರ್ತಿ ಅಥವಾ ಭಾಗಶಃ ಹಾನಿಯಾಗಿವೆ. ಗಾಜಾ ಪಟ್ಟಿಯಲ್ಲಿ ಒಟ್ಟು 88,868 ಕಟ್ಟಡ ಪೂರ್ಣ ಅಥವಾ ಭಾಗಶಃ ಹಾನಿ ಆಗಿವೆಯಂತೆ. ಆದರೆ ಹೀಗೆ ಇಸ್ರೇಲ್ ದಾಳಿಯಲ್ಲಿ ಕುಸಿದು ಬಿದ್ದಿರುವ ಕಟ್ಟಡಗಳ ಅವಶೇಷ ತೆರವು ಮಾಡಲು ಎಷ್ಟು ವರ್ಷ ಬೇಕು ಗೊತ್ತಾ? ಮುಂದೆ ಓದಿ.

3.70 ಕೋಟಿ ಟನ್‌ ತ್ಯಾಜ್ಯ! ಅಂದಹಾಗೆ ಈಗಿರುವ ಮಾಹಿತಿ ಪ್ರಕಾರ ಇಸ್ರೇಲ್ ದಾಳಿಯಲ್ಲಿ ಗಾಜಾಪಟ್ಟಿ ಕಟ್ಟಡಗಳೆಲ್ಲಾ ನೆಲಕ್ಕೆ ಉರುಳಿ ಉರುಳಿ ಬೀಳುತ್ತಿವೆ. ಹೀಗಾಗಿ ಈ ಕಟ್ಟಡಗಳ ಅವಶೇಷ ತೆರವು ಮಾಡಲು, ಸುಮಾರು 14 ವರ್ಷ ಬೇಕು ಎನ್ನಲಾಗಿದೆ. ಇಸ್ರೇಲ್ & ಹಮಾಸ್ ನಡುವಿನ ಯುದ್ಧದಿಂದಾಗಿ ಹತ್ತಿರ ಹತ್ತಿರ 3.70 ಕೋಟಿ ಟನ್‌ ತ್ಯಾಜ್ಯ ಸಂಗ್ರಹ ಆಗಿದೆಯಂತೆ. ಹೀಗಾಗಿ ಈಗಿನಿಂದಲೇ 100 ಟ್ರಕ್‌ಗಳನ್ನು ಬಳಸಿದರೂ ಗಾಜಾ ಪಟ್ಟಿಯಲ್ಲಿ ಬಿದ್ದಿರುವ ಅವಶೇಷ ವಿಲೇವಾರಿ ಮಾಡಲು 14 ವರ್ಷಗಳೇ ಬೇಕಾಗುತ್ತದೆ ಎನ್ನಲಾಗಿದೆ. ಇದಿಷ್ಟು ಮಾತ್ರವಲ್ಲ ಈಗಾಗಲೇ ಪ್ಯಾಲೆಸ್ತೀನ್ ನಗರದ ತುಂಬಾ ಬರೀ ಶವಗಳೇ ಬಿದ್ದಿವೆ. ಇಸ್ರೇಲ್ ಸೇನೆ ದಾಳಿಯಿಂದ ಈವರೆಗೆ 34,305 ಪ್ಯಾಲೆಸ್ತೀನ್ ಪ್ರಜೆಗಳು ಮೃತಪಟ್ಟು, 77,293 ಮಂದಿ ಗಾಯಗೊಂಡು 23 ಲಕ್ಷ ಜನ ನಿರಾಶ್ರಿತರಾಗಿದ್ದಾರೆ.

ಯುದ್ಧ ಶುರುವಾಗಿದ್ದು ಹೇಗೆ? ಹಮಾಸ್ ಉಗ್ರರು ಎಸಗಿದ ಕೃತ್ಯಕ್ಕೆ ಗಾಜಾಪಟ್ಟಿ ಸಾಮಾನ್ಯ ಜನರು ನಲುಗಿದ್ದು ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್‌ ವಿರುದ್ಧ 5000 ರಾಕೆಟ್‌ ಉಡಾಯಿಸಿದ್ದರು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್‌ ಹಿಡಿದು ಇಸ್ರೇಲ್ ಒಳ ನುಗ್ಗಿದ್ರು. ರೊಚ್ಚಿಗೆದ್ದಿದ್ದ ಇಸ್ರೇಲ್, ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಘಟನೆ ನಡೆದು ಭರ್ಜರಿ 6 ತಿಂಗಳು ಕಳೆದಿದ್ದು, 7 ತಿಂಗಳು ಕೂಡ ತುಂಬುವ ಭಯ ಕಾಡುತ್ತಿದೆ. ಇದೇ ಸಮಯದಲ್ಲಿ ಜನ ಅನ್ನ & ನೀರು ಇಲ್ಲದೆ ಪರದಾಡಿ ಹೋಗಿದ್ದಾರೆ.

Previous Post
ರಾಜಕೀಯಕ್ಕೆ ಎಂಟ್ರಿಯಾಗ್ತಾರಾ ಡಿ ಕೆ ಶಿವಕುಮಾರ್‌ ಪುತ್ರಿ: ಐಶ್ವರ್ಯಾ ಹೇಳಿದ್ದೇನು?
Next Post
ಉಕ್ರೇನ್‌ಗೆ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆ ನೀಡಲಿದೆ ಅಮೆರಿಕ!

Recent News