ಮಿತಿ ಮೀರಿದ ಮಾತು, ಕಾಂಗ್ರೇಸ್ ಬಿಜೆಪಿ ಸ್ಟಾರ್ ಪ್ರಚಾರಕರ ವಿರುದ್ಧ ಚು.ಆಯೋಗ ಗರಂ

ಮಿತಿ ಮೀರಿದ ಮಾತು, ಕಾಂಗ್ರೇಸ್ ಬಿಜೆಪಿ ಸ್ಟಾರ್ ಪ್ರಚಾರಕರ ವಿರುದ್ಧ ಚು.ಆಯೋಗ ಗರಂ

ನವದೆಹಲಿ : ಲೋಕಸಭೆಗೆ ನಡೆಯುತ್ತಿರುವ ಏಳು ಹಂತಗಳ ಮತದಾನದ ಪೈಕಿ ಐದು ಹಂತದ ಚುನಾವಣೆ ಮುಕ್ತಾಯವಾಗಿದ್ದು ಇನ್ನೇರಡು ಹಂತಗಳು ಮಾತ್ರ ಬಾಕಿ ಉಳಿದಿವೆ ಈ ಹಂತದಲ್ಲಿ ಕಾಂಗ್ರೇಸ್ ಬಿಜೆಪಿ ಪಕ್ಷಗಳ ಸ್ಟಾರ್ ಪ್ರಚಾರಕ ವಿರುದ್ಧ ಚುನಾವಣಾ ಆಯೋಗ ಗರಂ ಆಗಿದ್ದು ಅವರ ಭಾಷಣಗಳಿಗೆ ಅಮಸಧಾನ ವ್ಯಕ್ತಪಡಿಸಿದೆ.

ಬಿಜೆಪಿ ಮತ್ತು ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷರಿಗೆ ನೋಟಿಸ್ ನೀಡಿರುವ ಕೇಂದ್ರ ಚುನಾವಣಾ ಆಯೋಗ, ಸರಿಯಾದ ಮಾತು, ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು, ಎರಡು ಪ್ರಮುಖ ರಾಜಕೀಯ ಪಕ್ಷಗಳು ಜಾತಿ, ಸಮುದಾಯ, ಭಾಷೆ ಮತ್ತು ಕೋಮುಗಳ ಉಲ್ಲೇಖಿಸಿ ಪ್ರಚಾರ ಮಾಡುವುದನ್ನು ನಿಲ್ಲಿಸಬೇಕು, ದೇಶದ ಸಾಮಾಜಿಕ-ಸಾಂಸ್ಕೃತಿಕ ಪರಿಸರವು ಚುನಾವಣೆಗಾಗಿ ಬಲಿಯಾಗಲು ಸಾಧ್ಯವಿಲ್ಲ ಎಂದು ಚುನಾವಣಾ ಸಂಸ್ಥೆ ಎಚ್ಚರಿಸಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ನಿಮ್ಮ ಪಕ್ಷಗಳ ಸ್ಟಾರ್ ಪ್ರಚಾರಕರಿಗೆ ಅವರ ಭಾಷಣವನ್ನು ಸರಿಪಡಿಸಿಕೊಳ್ಳಲು, ಅದರ ಕಾಳಜಿ ವಹಿಸಲು ಮತ್ತು ಸಜ್ಜನಿಕೆಯನ್ನು ಕಾಪಾಡಿಕೊಳ್ಳಲು ಔಪಚಾರಿಕ ಟಿಪ್ಪಣಿಗಳನ್ನು ನೀಡುವಂತೆ ಚುನಾವಣಾ ಸಮಿತಿಯು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸೂಚಿಸಿದೆ.

ಭಾರತೀಯ ಮತದಾರರ ಗುಣಮಟ್ಟದ ಚುನಾವಣಾ ಅನುಭವದ ಪರಂಪರೆಯನ್ನು ದುರ್ಬಲಗೊಳಿಸಲು ಎರಡು ದೊಡ್ಡ ಪಕ್ಷಗಳಿಗೆ ಅವಕಾಶ ನೀಡಲಾಗುವುದಿಲ್ಲ, ಚುನಾವಣಾ ಪ್ರಚಾರದ ಸಮಯದಲ್ಲಿ ಧಾರ್ಮಿಕ ಮತ್ತು ಕೋಮುವಾದದ ಮಾತುಗಳಿಂದ ದೂರವಿರಬೇಕು ಎಂದು ಚುನಾವಣಾ ಸಂಸ್ಥೆ ಬಿಜೆಪಿ ಮತ್ತು ಅದರ ಪ್ರಚಾರಕರಿಗೆ ಸೂಚಿಸಿದೆ. ವಿಭಜಕ ಪ್ರಚಾರ ನಡೆಸುತ್ತಿದೆ ಎಂದು ಆರೋಪಿಸಿ ಬಿಜೆಪಿ ವಿರುದ್ಧ ಕಾಂಗ್ರೆಸ್ ದೂರು ನೀಡಿದ ನಂತರ ಚುನಾವಣಾ ಆಯೋಗದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ.

Previous Post
ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ ಉದ್ಯಮಿ ವಿಶಾಲ್ ಅಗ್ರವಾಲ್ ಪೋಲಿಸ್ ಕಸ್ಟಡಿಗೆ
Next Post
ದೆಹಲಿಯಲ್ಲಿ ಕರ್ನಾಟಕ ಎಎಪಿ ಮುಖಂಡರಿಂದ ಚುನಾವಣಾ ಪ್ರಚಾರ

Recent News