ಚೆನ್ನಾಗಿ ಕೆಲಸ ಮಾಡಿ, ನಂಬರ್ಸ್ ಗೇಮ್ ಚಿಂತೆ ಬೇಡ; ನಿರ್ಗಮಿತ ಸಚಿವರಿಗೆ ಮೋದಿ ಕಿವಿಮಾತು

ಚೆನ್ನಾಗಿ ಕೆಲಸ ಮಾಡಿ, ನಂಬರ್ಸ್ ಗೇಮ್ ಚಿಂತೆ ಬೇಡ; ನಿರ್ಗಮಿತ ಸಚಿವರಿಗೆ ಮೋದಿ ಕಿವಿಮಾತು

ನವದೆಹಲಿ: ರಾಷ್ಟ್ರಪತಿ ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ನಿರ್ಗಮಿತ ಪ್ರಧಾನಿ ನರೇಂದ್ರ ಮೋದಿ ಅವರು, ಕ್ಯಾಬಿನೆಟ್​ ಉದ್ದೇಶಿ ಮಾತನಾಡಿದರು. ಲೋಕಸಭೆ ಚುನಾವಣೆ ಫಲಿತಾಂಶದ ಮೊದಲ ಬಾರಿಗೆ ಕ್ಯಾಬಿನೆಟ್ ಮಂತ್ರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಂಬರ್ ಗೇಮ್ ರಾಜಕೀಯ ಜೀವನದ ಒಂದು ಭಾಗವಾಗಿದೆ.ಉತ್ತಮ ಕೆಲಸ ಮಾಡುವಂತೆ ಕೇಂದ್ರ ಸಚಿವರಿಗೆ ಕಿವಿಮಾತು ಹೇಳಿದರು.10 ವರ್ಷಗಳಿಂದ ಉತ್ತಮ ಕೆಲಸ-ಸಂಖ್ಯೆಗಳ ಆಟ ಮುಂದುವರಿಯುತ್ತದೆ. ರಾಜಕೀಯ ಅಂಕಿ-ಅಂಶಗಳ ಹೊರತಾಗಿಯೂ ನಾಯಕರು ದೇಶ ಮತ್ತು ಅದರ ನಾಗರಿಕರಿಗಾಗಿ ಕೆಲಸ ಮಾಡಬೇಕು ಎಂದು ಮೋದಿ ಕೇಂದ್ರ ಸಚಿವ ಸಂಪುಟಕ್ಕೆ ತಿಳಿಸಿದರು. 10 ವರ್ಷಗಳಿಂದ ಉತ್ತಮ ಕೆಲಸ ಮಾಡಲಾಗಿದೆ. ಅದನ್ನು ಮುಂದಕ್ಕೆ ಕೊಂಡೊಯ್ಯಬೇಕು ಎಂದರು.ಮೋದಿ 3ನೇ ಬಾರಿಗೆ ಪ್ರಧಾನಿಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) 543 ಸ್ಥಾನಗಳ ಪೈಕಿ 292 ಸ್ಥಾನಗಳನ್ನು ಗೆದ್ದು ಬಹುಮತಕ್ಕಿಂತ 20 ಸ್ಥಾನಗಳನ್ನು ಹೆಚ್ಚುವರಿಯಾಗಿ ಗಳಿಸಿದೆ. ಬಿಜೆಪಿ ಸ್ವಂತ ಬಲದಿಂದ 240 ಗಳಿಸಿದೆ. ವಾರಾಂತ್ಯದಲ್ಲಿ ಮೋದಿ ಅವರು ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಬಹುದು, ಎನ್‌ಡಿಎ ಸರ್ಕಾರ ರಚಿಸುವ ನಿರೀಕ್ಷೆಯಿದೆ.ಸರ್ಕಾರ ರಚನೆ ಕಸರತ್ತು-ಇದಕ್ಕೂ ಮುನ್ನ ಪ್ರಧಾನಿ ಮತ್ತು ಅವರ ಕೇಂದ್ರ ಸಂಪುಟದ ಸಚಿವರು ರಾಜೀನಾಮೆ ಸಲ್ಲಿಸಲು ರಾಷ್ಟ್ರಪತಿ ಭವನಕ್ಕೆ ತೆರಳಿದ್ದರು. ನಂತರ, ತೆಲುಗು ದೇಶಂ ಪಕ್ಷದ ಚಂದ್ರಬಾಬು ನಾಯ್ಡು ಮತ್ತು ಜನತಾ ದಳ (ಯುನೈಟೆಡ್) ನ ನಿತೀಶ್ ಕುಮಾರ್ ಸೇರಿದಂತೆ ಎನ್‌ಡಿಎ ಪಾಲುದಾರರು ಮಧ್ಯಾಹ್ನ ಭೇಟಿಯಾಗಲಿದ್ದಾರೆ. 16 ಸ್ಥಾನಗಳನ್ನು ಗೆದ್ದಿರುವ ನಾಯ್ಡು ಮತ್ತು 12 ಸ್ಥಾನಗಳನ್ನು ಗಳಿಸಿದ ನಿತೀಶ್​ ಕುಮಾರ್ ಅವರು ಸರ್ಕಾರ ರಚನೆಯ ಮಾತುಕತೆಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.

Previous Post
ಮೋದಿಯವರಿಗೆ ಎಂತಹ ಪರಿಸ್ಥಿತಿಯನ್ನೂ ನಿಭಾಯಿಸುವ ಮುತ್ಸದ್ದಿತನ ಇದೆ: ಬಸವರಾಜ ಬೊಮ್ಮಾಯಿ
Next Post
ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸುತ್ತೇವೆ: ಜೆಡಿಯು ಸ್ಪಷ್ಟನೆ

Recent News