ನಿನ್ನ ತಂಗಿಯಾಗಿರಲು ಹೆಮ್ಮೆ: ರಾಹುಲ್‌ ಗಾಂಧಿ ಕುರಿತು ಪ್ರಿಯಾಂಕಾ ಗಾಂಧಿ ಪೋಸ್ಟ್

ನಿನ್ನ ತಂಗಿಯಾಗಿರಲು ಹೆಮ್ಮೆ: ರಾಹುಲ್‌ ಗಾಂಧಿ ಕುರಿತು ಪ್ರಿಯಾಂಕಾ ಗಾಂಧಿ ಪೋಸ್ಟ್

ನವದೆಹಲಿ, ಜೂ. 5: ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಹೋದರ ರಾಹುಲ್ ಗಾಂಧಿಯವರಿಗೆ ಭಾವನಾತ್ಮಕ ಪೋಸ್ಟ್ ಹಾಕಿದ್ದು, ಈ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಮೋಘ ಪ್ರದರ್ಶನದಲ್ಲಿ ಅವರ ಪಾತ್ರವನ್ನು ಶ್ಲಾಘಿಸಿದ್ದಾರೆ. ‘ನಾನು ನಿಮ್ಮ ಹೆಮ್ಮೆಯ ಸಹೋದರಿ’ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಪಕ್ಷದ ಉತ್ತಮ ಪ್ರದರ್ಶನದಲ್ಲಿ ತಮ್ಮ ಸಹೋದರಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ರಾಹುಲ್ ಗಾಂಧಿ ಮಾಧ್ಯಮಗಳಿಗೆ ಹೇಳಿದ ಒಂದು ದಿನದ ನಂತರ ಪ್ರಿಯಾಂಕಾ ಗಾಂಧಿ ಅವರಿಂದ ಮೆಚ್ಚುಗೆಯ ಪೋಸ್ಟ್ ಬಂದಿದೆ. “ಅವರು (ಬೀಜೇಪಿಯವರು) ನಿಮಗೆ ಏನು ಹೇಳಿದರೂ ಮತ್ತು ಮಾಡಿದರೂ ನೀವು ಧೃಡವಾಗಿ ನಿಂತಿದ್ದೀರಿ.  ನೀವು ಯಾವುದೇ ವಿರೋಧಗಳಿಗೂ ಧೃತಿಗೆಡಲಿಲ್ಲ. ನಿಮ್ಮ ನಂಬಿಕೆಯನ್ನು ಎಷ್ಟು ಅನುಮಾನಿಸಿದರೂ ನೀವು ವಿಮುಖರಾಗಲಿಲ್ಲ. ಅವರು ಹರಡಿದ ಸುಳ್ಳುಗಳ ಅಗಾಧ ಪ್ರಚಾರದ ಹೊರತಾಗಿಯೂ ನೀವು ಸತ್ಯಕ್ಕಾಗಿ ಹೋರಾಡುವುದನ್ನು ನಿಲ್ಲಿಸಲಿಲ್ಲ. ನೀವು ಕೋಪ ಮತ್ತು ದ್ವೇಷಗಳು ಜಯಿಸಲು ಬಿಡಲಿಲ್ಲ. ಪ್ರತಿದಿನ ಪ್ರೀತಿ, ಸತ್ಯ ಮತ್ತು ದಯೆಯಿಂದ ಹೋರಾಟ ಮಾಡಿದಿರಿ. ನಿಮ್ಮನ್ನು ನೋಡಲು ಸಾಧ್ಯವಾಗದವರು ಈಗ ನಿಮ್ಮನ್ನು ನೋಡುತ್ತಾರೆ; ನಿಮ್ಮನ್ನು ಯಾವಾಗಲೂ ನೋಡಿದ ಮತ್ತು ತಿಳಿದಿರುವ ನಾನು ನಿಮ್ಮ ಸಹೋದರಿ ಎಂದು ಹೆಮ್ಮೆಪಡುತ್ತೇನೆ” ಎಂದು ಪ್ರಿಯಾಂಕಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಗಾಂಧಿ ಬಂಧುಗಳು ಪಕ್ಷವನ್ನು ಒಂದು ದಶಕದಲ್ಲಿ ಅತ್ಯುತ್ತಮ ಲೋಕಸಭಾ ಚುನಾವಣೆಯ ಸಾಧನೆಗೆ ಕಾರಣರಾಗಿದ್ದಾರೆ. ಪಕ್ಷವು ಈ ಬಾರಿ 99 ಸ್ಥಾನಗಳನ್ನು ಗೆದ್ದಿದೆ. ಅದರ 2019ರ 52ರ ಲೆಕ್ಕಾಚಾರದಿಂದ ದೊಡ್ಡ ಜಿಗಿತವಾಗಿದೆ. ಕಾಂಗ್ರೆಸ್ ಭಾಗವಾಗಿರುವ ಇಂಡಿಯಾ ಬ್ಲಾಕ್, ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳನ್ನು ಧಿಕ್ಕರಿಸಿ, 232 ಅಂಕಿಗಳನ್ನು ತಲುಪಿತು, ಬಿಜೆಪಿಗೆ ಬಹುಮತ ತಲುಪುವುದನ್ನು ತಡೆಯಿತು. ಫಲಿತಾಂಶಗಳು ಸ್ಪಷ್ಟವಾಗುತ್ತಿದ್ದಂತೆ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ, ರಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಪಕ್ಷದ ಪ್ರಚಾರದ ಅಡಿಪಾಯವನ್ನು ರೂಪಿಸಿತು ಎಂದು ಹೇಳಿದ್ದಾರೆ. ಮತ್ತೊಂದೆಡೆ, ಪ್ರಧಾನಿ ಸೇರಿದಂತೆ ಬಿಜೆಪಿ ನಾಯಕರ ಮಾತಿನ ದಾಳಿಯನ್ನು ಎದುರಿಸುವಲ್ಲಿ ಪ್ರಿಯಾಂಕಾ ಗಾಂಧಿ ಪ್ರಮುಖ ಪಾತ್ರ ವಹಿಸಿದರು. ಅವರು ಉತ್ತರ ಪ್ರದೇಶದ ಎರಡು ಪ್ರತಿಷ್ಠಿತ ಸ್ಥಾನಗಳಾದ ಅಮೇಥಿ ಮತ್ತು ರಾಯ್ಬರೇಲಿ ಪಕ್ಷದ ಪ್ರಚಾರವನ್ನು ಮುನ್ನಡೆಸಿದರು. ಕಳೆದ ಬಾರಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಸೋತಿದ್ದ ಅಮೇಥಿಯನ್ನು ಕಾಂಗ್ರೆಸ್‌ನ ಕೆಎಲ್ ಶರ್ಮಾ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರೆ. ರಾಹುಲ್ ಗಾಂಧಿ ರಾಯ್‌ಬರೇಲಿಯನ್ನು 3.9 ಲಕ್ಷ ಮತಗಳ ಅಂತರದಿಂದ ಗೆದ್ದರು.

Previous Post
ಒಡಿಶಾ ಸಿಎಂ ಸ್ಥಾನಕ್ಕೆ ನವೀನ್ ಪಟ್ನಾಯಕ್ ರಾಜೀನಾಮೆ
Next Post
ಹಿಮಾಚಲ ಸರಕಾರ ಕೆಡವಲು ಬಿಜೆಪಿ ಸೇರಿದ್ದ 6 ಜನರಲ್ಲಿ ನಾಲ್ವರಿಗೆ ಸೋಲು

Recent News