ಮೋದಿ ಕ್ಯಾಬಿನೆಟ್‌ನಲ್ಲಿರುವ ಶ್ರೀಮಂತ ಸಚಿವ ಯಾರು ಗೊತ್ತಾ?

ಮೋದಿ ಕ್ಯಾಬಿನೆಟ್‌ನಲ್ಲಿರುವ ಶ್ರೀಮಂತ ಸಚಿವ ಯಾರು ಗೊತ್ತಾ?

ಭಾರತದ ಪ್ರಧಾನಿ ಆಗಿ ಮೂರನೇ ಬಾರಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇವರ ಜೊತೆಗೆ ಎನ್‌ಡಿಎ ಮೈತ್ರಿನ ಕೂಟದ ಸಂಸದರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸುಮಾರು 9 ಸಾವಿರ ಜನರು ನೆರೆದಿದ್ದ ಸಮಾರಂಭದಲ್ಲಿ ಮೋದಿ ಪ್ರಧಾನಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಬಾರಿ ಬಿಜೆಪಿಗೆ ಬಹುಮತಕ್ಕೆ ಬೇಕಿದಷ್ಟು ಸ್ಥಾನಗಳು ಲಭಿಸದ ಕಾರಣ ಎನ್‌ಡಿಎ ಮೈತ್ರಿಕೂಟದೊಂದಿಗೆ ಸರ್ಕಾರ ನಡೆಸಲು ಮುಂದಾಗಿದೆ. ಈ ಮೈತ್ರಿ ಕೂಟದ ಪ್ರಮುಖವಾಗಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ದು ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್‌ ಕುಮಾರ್‌ ತಮ್ಮ ಬೆಂಬಲವನ್ನು ನೀಡಿದ್ದಾರೆ. ಅಲ್ಲದೆ ತಮ್ಮ ಪಕ್ಷಗಳಿಗೂ ಪ್ರಮುಖ ಖಾತೆಯ ಬೇಡಿಕೆಯನ್ನು ಸಹ ಇಟ್ಟಿದ್ದಾರೆ.

ಶ್ರೀಮಂತ ಮಂತ್ರಿ ಯಾರು?

ಪ್ರಮಾಣ ವಚನ ಸಮಾರಂಭದಲ್ಲಿ ಟಿಡಿಪಿ ಹಾಗೂ ಜೆಡಿಯುನ ಸಂಸದರು ಸಹ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮಂತ್ರಿಗಳಲ್ಲಿ ಶ್ರೀಮಂತ ಸಚಿವ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಕ್ಕೆ ಉತ್ತರ ಚಂದ್ರ ಶೇಖರ್ ಪೆಮ್ಮಸಾನಿ. ಚಂದ್ರಬಾಬು ನಾಯ್ಡು ಮುಖ್ಯಸ್ಥರಾಗಿರುವ ತೆಲುಗು ದೇಶಂ ಪಕ್ಷದ (ಟಿಡಿಪಿ) ಆಂಧ್ರಪ್ರದೇಶದ ಗುಂಟೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ.

ಭರ್ಜರಿ ಗೆಲುವು

ಲೋಕಸಭೆ ಚುನಾವಣೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕಿಲಾರಿ ವೆಂಕಟ ರೋಸಯ್ಯ ಅವರನ್ನು ಚಂದ್ರ ಶೇಖರ್ ಪೆಮ್ಮಸಾನಿ 3.4 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಪೆಮ್ಮಸಾನಿ ಅವರಿಗೆ ಇದು ಮೊದಲ ಲೋಕಸಭೆ ಚುನಾವಣೆ ಎಂಬುದು ಗಮನಾರ್ಹ.

ಸದ್ಯ ಇವರು ಟಿಡಿಪಿ ಪಕ್ಷದಿಂದ ಮೋದಿ ಸರ್ಕಾರದ ಭಾಗವಾಗಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದ ಅತ್ಯಂತ ಶ್ರೀಮಂತ ಅಭ್ಯರ್ಥಿಯಾಗಿದ್ದ ಅವರು ಇದೀಗ ಶ್ರೀಮಂತ ಕ್ಯಾಬಿನೆಟ್ ಸಚಿವರೂ ಆಗಲಿದ್ದಾರೆ. ಟಿಡಿಪಿ ಪ್ರಸ್ತುತ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ.

ಘೋಷಿತ ಆಸ್ತಿ ಎಷ್ಟು?

ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಣೆಯ ಪ್ರಕಾರ, ಪೆಮ್ಮಸಾನಿ 5705 ಕೋಟಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.

ಚಂದ್ರ ಶೇಖರ್ ಪೆಮ್ಮಸಾನಿ ಕುಟುಂಬವು ದಶಕಗಳಿಂದ ಟಿಡಿಪಿ ಬೆಂಬಲಿತವಾಗಿದೆ. ತೆನಾಲಿಯ ಬುರ್ರಿಪಾಲೆಂ ಗ್ರಾಮದವರಾದ ಪೆಮ್ಮಸಾನಿ ಯುವರ್ಲ್ಡ್ ಸಂಸ್ಥಾಪಕ. ಇದು ಪ್ರಮುಖ ಪರೀಕ್ಷೆಗಳಿಗೆ ಆನ್‌ಲೈನ್ ಕಲಿಕಾ ಪರಿಕರಗಳನ್ನು ಒದಗಿಸುವ ಜಾಗತಿಕ ವೇದಿಕೆಯಾಗಿದೆ.

Previous Post
J&K ಉಗ್ರರ ಅಟ್ಟಹಾಸ ; ಬಸ್ ಕಣಿವೆಗೆ ಉರುಳಿ 10 ಯಾತ್ರಿಗಳು ಮೃತ್ಯು
Next Post
72 ಸಂಸದರು ಕೇಂದ್ರ ಸಚಿವರಾಗಿ ಪ್ರಮಾಣವಚನ

Recent News