ಹೇಮಂತ್ ಸೊರೇನ್ ಜೈಲಿನಿಂದ ಬಿಡುಗಡೆ

ಹೇಮಂತ್ ಸೊರೇನ್ ಜೈಲಿನಿಂದ ಬಿಡುಗಡೆ

ನವದೆಹಲಿ, ಜೂ. ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರಿಗೆ ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡಿದ ನಂತರ, ಇಂದು ಇಲ್ಲಿನ ಬಿರ್ಸಾ ಮುಂಡಾ ಜೈಲಿನಿಂದ ಬಿಡುಗಡೆಯಾದರು. ನ್ಯಾಯಮೂರ್ತಿ ರೊಂಗೋನ್ ಮುಖೋಪಾಧ್ಯಾಯ ಅವರ ಪೀಠವು ಸಾಮಾನ್ಯ ಜಾಮೀನು ನೀಡಿತು.
ಸೊರೇನ್ ಜೈಲಿನಿಂದ ಹೊರಬರುತ್ತಿದ್ದಂತೆ, ಹೆಚ್ಚಿನ ಸಂಖ್ಯೆಯ ಜೆಎಂಎಂ ಬೆಂಬಲಿಗರು ಹರ್ಷೋದ್ಗಾರ ವ್ಯಕ್ತಪಡಿಸಿ, ಅವರ ಪರವಾಗಿ ಘೋಷಣೆಗಳನ್ನು ಕೂಗಿದರು. ಜೂನ್ 13 ರಂದು, ಜಾರಿ ನಿರ್ದೇಶನಾಲಯ (ಇಡಿ) ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಮತ್ತು ಸೊರೇನ್ ಪರವಾಗಿ ವಕೀಲ ಎಸ್ ವಿ ರಾಜು ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿತ್ತು.
ಜನವರಿ 31, 2024ರಂದು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಇಡಿ ಸೊರೇನ್ ಅವರನ್ನು ಬಂಧಿಸಿತ್ತು. ಶ್ಬಂಧನ ಖಚಿತವಾಗುತ್ತಿದ್ದಂತೆಯೆ ರಾಜಭವನಕ್ಕೆ ಹೋಗಿ ತಮ್ಮ ಉನ್ನತ ಹುದ್ದೆಗೆ ರಾಜೀನಾಮೆ ನೀಡಿದರು. ಅವರ ರಾಜೀನಾಮೆಯ ನಂತರ ಚಂಪೈ ಸೊರೇನ್ ಅವರು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು ಮತ್ತು ಫೆಬ್ರವರಿ 5ರಂದು, ಹೊಸ ಸರ್ಕಾರವು 47 ಶಾಸಕರು ಮೋಷನ್ ಪರವಾಗಿ ಮತ ಚಲಾಯಿಸುವುದರೊಂದಿಗೆ ವಿಶ್ವಾಸವನ್ನು ಗಳಿಸಿತು.
ರಾಂಚಿಯ ಬದ್ಗೈ ಪ್ರದೇಶದಲ್ಲಿ 8.5 ಎಕರೆ ಸರ್ಕಾರಿ ಜಮೀನಿಗೆ ನಕಲಿ ಭೂ ದಾಖಲೆಗಳನ್ನು ಸೃಷ್ಠಿಸಿ, ಹಣ ವರ್ಗಾವಣೆ ಮಾಡಿದ ಪ್ರಕರಣ ಇದಾಗಿದೆ. ಸರ್ಕಾರಿ ಅಧಿಕಾರಿಗಳು ಸೇರಿದಂತೆ ಹಲವಾರು ವ್ಯಕ್ತಿಗಳ ವಿರುದ್ಧ ಜಾರ್ಖಂಡ್ ಪೊಲೀಸರು ದಾಖಲಿಸಿದ ಬಹು ಎಫ್‌ಐಆರ್‌ಗಳ ಆಧಾರದ ಮೇಲೆ ಇಡಿ ಐದು ಭೂ ಹಗರಣದ ಪ್ರಕರಣಗಳಲ್ಲಿ ತನಿಖೆಯನ್ನು ಪ್ರಾರಂಭಿಸಿದೆ. ಜಾರ್ಖಂಡ್‌ನಲ್ಲಿ ರಾಂಚಿ ಮತ್ತು ಕೋಲ್ಕತ್ತಾದಲ್ಲಿ ಭೂ ದಾಖಲೆಗಳನ್ನು ತಿದ್ದುವ ದಂಧೆಯಲ್ಲಿ ತೊಡಗಿರುವ ಭೂ ಮಾಫಿಯಾದ ದಂಧೆ ಸಕ್ರಿಯವಾಗಿದೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.

Previous Post
ದೆಹಲಿ ವಿಮಾನ ನಿಲ್ದಾಣದ ಮೇಲ್ಛಾವಣಿ ಕುಸಿತ; ಓರ್ವ ಸಾವು
Next Post
ನೀಟ್ ವಿರುದ್ಧ ನಿರ್ಣಯ ತಮಿಳುನಾಡು ವಿಧಾನಸಭೆ ಅಂಗೀಕಾರ

Recent News