LPG ಸಿಲಿಂಡರ್‌ಗಳ eKYC ದೃಢೀಕರಣಕ್ಕೆ ಗಡುವು ಇಲ್ಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

LPG ಸಿಲಿಂಡರ್‌ಗಳ eKYC ದೃಢೀಕರಣಕ್ಕೆ ಗಡುವು ಇಲ್ಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ನವದೆಹಲಿ : LPG ಸಿಲಿಂಡರ್‌ಗಳಿಗೆ eKYC ದೃಢೀಕರಣ ಪ್ರಕ್ರಿಯೆಯನ್ನು ಅನುಸರಿಸಲು ಯಾವುದೇ ಗಡುವು ಇಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ಈ ಅಂಶವನ್ನು ಸ್ಪಷ್ಟಪಸಿಸಿದ್ದಾರೆ.

ತೈಲ ಮಾರುಕಟ್ಟೆ ಕಂಪನಿಗಳು ಅಥವಾ OMC ಗಳು ನಕಲಿ ಖಾತೆಗಳನ್ನು ತೊಡೆದು ಹಾಕಲು ಮತ್ತು ವಾಣಿಜ್ಯ ಸಿಲಿಂಡರ್‌ಗಳ ಮೋಸದ ಬುಕಿಂಗ್ ಅನ್ನು ತಡೆಯಲು ಎಲ್‌ಪಿಜಿ ಗ್ರಾಹಕರಿಗೆ ಇಕೆವೈಸಿ ಆಧಾರ್ ದೃಢೀಕರಣವನ್ನು ಕಡ್ಡಾಯವಾಗಿ ಜಾರಿಗೊಳಿಸುತ್ತಿವೆ. ಕಳೆದ ಎಂಟು ತಿಂಗಳಿನಿಂದ ಈ ಪ್ರಕ್ರಿಯೆ ಜಾರಿಯಲ್ಲಿದೆ, ನಿಜವಾದ ಗ್ರಾಹಕರು ಮಾತ್ರ ಎಲ್‌ಪಿಜಿ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವ ಈ ನಿಯಮ ಮಾಡಿದೆ ಎಂದು ಪುರಿ ಸ್ಪಷ್ಟಪಡಿಸಿದ್ದಾರೆ.

ಎಲ್‌ಪಿಜಿ ಸಿಲಿಂಡರ್‌ಗಳನ್ನು ಗ್ರಾಹಕರಿಗೆ ತಲುಪಿಸುವಾಗ ಎಲ್‌ಪಿಜಿ ವಿತರಣಾ ಸಿಬ್ಬಂದಿ ರುಜುವಾತುಗಳನ್ನು ಪರಿಶೀಲಿಸುತ್ತಾರೆ. ವಿತರಣಾ ಸಿಬ್ಬಂದಿ ತಮ್ಮ ಮೊಬೈಲ್ ಫೋನ್ ಬಳಸಿ ಗ್ರಾಹಕರ ಆಧಾರ್ ಮಾಹಿತಿಯನ್ನಯ ಅಪ್ಲಿಕೇಶನ್ ಮೂಲಕ ಅಪ್ಲೋಡ್ ಮಾಡುತ್ತಾರೆ. ಗ್ರಾಹಕರು ಸ್ವೀಕರಿಸುವ OTPಯನ್ನು ಬಳಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ. ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ವಿತರಕರ ಶೋರೂಮ್ ಅನ್ನು ಸಹ ಸಂಪರ್ಕಿಸಬಹುದು ಎಂದು ಅವರು ಹೇಳಿದರು.

ಪರ್ಯಾಯವಾಗಿ ಗ್ರಾಹಕರು OMC ಅಪ್ಲಿಕೇಶನ್‌ಗಳನ್ನು ಸ್ಥಾಪಿಸಬಹುದು ಮತ್ತು e KYC ಅನ್ನು ಖುದ್ದು ಪೂರ್ಣಗೊಳಿಸಬಹುದು. ಈ ಚಟುವಟಿಕೆಗೆ ತೈಲ ಮಾರುಕಟ್ಟೆ ಕಂಪನಿಗಳು ಅಥವಾ ಕೇಂದ್ರ ಸರ್ಕಾರದಿಂದ ಯಾವುದೇ ಗಡುವು ಇಲ್ಲ. LPG ವಿತರಕರ ಶೋರೂಮ್‌ಗಳಲ್ಲಿ ಗ್ರಾಹಕರ “ಮಸ್ಟರಿಂಗ್” ಇಲ್ಲ ಎಂದು OMC ಗಳು ಸ್ಪಷ್ಟಪಡಿಸಿವೆ ಎಂದು ಪುರಿ ಹೇಳಿದರು.

Previous Post
ಸವಾಲಿಗೆ ಸವಾಲು ಹಾಕುವುದು ನನ್ನ ಡಿಎನ್‌ಎಯಲ್ಲಿದೆ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮೋದಿ ಮಾತು
Next Post
ಪ್ರಧಾನಿ ಮೋದಿಗೆ ರಷ್ಯಾದ ಅತ್ಯುನ್ನತ ನಾಗರಿಕ ಪ್ರಶಸ್ತಿ: ಭಾರತೀಯರಿಗೆ ಪ್ರಶಸ್ತಿ ಅರ್ಪಿಸಿದ PM

Recent News