ಬರ ಪರಿಹಾರ ಬಿಡುಗಡೆ ವಿಚಾರ ಅಫಿಡೆವಿಟ್ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಕಾಲಾವಕಾಶ

ಬರ ಪರಿಹಾರ ಬಿಡುಗಡೆ ವಿಚಾರ ಅಫಿಡೆವಿಟ್ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಕಾಲಾವಕಾಶ

ನವದೆಹಲಿ : ಬರ ಪರಿಹಾರ ಬಿಡುಗಡೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೌಂಟರ್ ಅಫಿಡೆವಿಟ್ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ ಮೂರು ವಾರಗಳ ಕಾಲಾವಕಾಶ ನೀಡಿದೆ. ಕೇಂದ್ರ ಸರ್ಕಾರದ ಮನವಿ ಮೇರೆಗೆ ನ್ಯಾ. ಬಿಆರ್ ಗವಾಯಿ ನೇತೃತ್ವದ ಪೀಠ ಈ ಸಮಯ ನೀಡಿದೆ.

ಇಂದು ಪ್ರಕರಣದ ವಿಚಾರಣೆ ನಡೆಸಲಾಯಿತು, ರಾಜ್ಯ ಸರ್ಕಾರ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ಈ ವೇಳೆ ಈಗಾಗಲೇ ಬರ ಪರಿಹಾರ ಬಿಡುಗಡೆ ಮಾಡಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದಿಯಲ್ಲ ಎಂದು ನ್ಯಾ.ಬಿಆರ್ ಗವಾಯಿ ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್ ಹೌದು ಬರ ಪರಿಹಾರ ಬಿಡುಗಡೆಯಾಗಿದೆ ಆದರೆ ಕೆಲವು ವಲಯಗಳಲ್ಲಿ ಹಣ ನೀಡಿಲ್ಲ ಜೊತೆಗೆ ಎನ್‌ಡಿಆರ್‌ಎಫ್ ನಿಯಮಗಳಲ್ಲಿ ಮಾರ್ಪಾಡಗಾಬೇಕಿದೆ ಎಂದರು.

ಕರ್ನಾಟಕ ಈಗಾಗಲೇ ಅಫಿಡೆವಿಟ್ ಸಲ್ಲಿಸಿದೆ ಇದಕ್ಕೆ ಕೌಂಟರ್ ನೀಡಲು ನಮ್ಮಗೆ ಸಮಯ ಬೇಕು ಎಂದು ಕದ್ರ ಸರ್ಕಾರದ ಪರ ವಕೀಲರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾ.ಬಿ.ಆರ್ ಗವಾಯಿ ಮೂರು ವಾರಗಳ ಸಮಯ ನೀಡಿ, ವಿಚಾರಣೆ ಮುಂದೂಡಿದರು.

Previous Post
ಅರವಿಂದ್ ಕೇಜ್ರಿವಾಲ್ ಗೆ ಮಧ್ಯಂತರ ಜಾಮೀನು
Next Post
ಕೇಜ್ರಿವಾಲ್ ನ್ಯಾಯಾಂಗ ಬಂಧನ ಜು. 25ರವರೆಗೆ ವಿಸ್ತರಣೆ

Recent News