Guinness World: 33 ಸೆಕೆಂಡ್‌ಗಳಲ್ಲಿ ವಿಶ್ವದ 10 ಖಾರದ ಮೆಣಸಿನಕಾಯಿಗಳನ್ನು ತಿಂದು ಗಿನ್ನಿಸ್ ದಾಖಲೆ ನಿರ್ಮಿಸಿದ ವ್ಯಕ್ತಿ!

Guinness World: 33 ಸೆಕೆಂಡ್‌ಗಳಲ್ಲಿ ವಿಶ್ವದ 10 ಖಾರದ ಮೆಣಸಿನಕಾಯಿಗಳನ್ನು ತಿಂದು ಗಿನ್ನಿಸ್ ದಾಖಲೆ ನಿರ್ಮಿಸಿದ ವ್ಯಕ್ತಿ!

ಊಟಕ್ಕೆ ಉಪ್ಪಿನಕಾಯಿ ಹೇಗೋ ಹಾಗೆ ಖಾರ ಇದ್ರೆ ಅದರ ಮಜಾನೇ ಬೇರೆ… ಖಾರ ಇಲ್ಲದ ಊಟ ಊಟವೇ ಅಲ್ಲ. ಕೆಲ ಭಾಗದ ಜನ ಹೆಚ್ಚು ಖಾರವಾದ ಆಹಾರವನ್ನು ತಿನ್ನಲು ಬಯಸುತ್ತಾರೆ. ಇನ್ನೂ ಕೆಲ ಭಾಗದ ಜನ ಕಡಿಮೆ ಖಾರವನ್ನು ತಿನ್ನುತ್ತಾರೆ. ಇನ್ನೂ ಕೆಲವೆಡೆ ಹಸಿ ಮೆಣಸಿನಕಾಯಿಯನ್ನು ಬೇಯಿಸದೇ ಹಾಗೇ ತಿನ್ನುವಷ್ಟು ಖಾರವನ್ನು ಇಷ್ಟಪಡುತ್ತಾರೆ. ಆದರೆ ಯಾರೂ ಕೂಡ ಸುಖಾ ಸುಮ್ಮನೇ ಮೆಣಸಿನಕಾಯಿಯನ್ನು ಬೇಯಿಸದೇ ಮೇಲಿಂದ ಮೇಲೆ ತಿನ್ನುವುದಿಲ್ಲ ಅಲ್ವಾ..? ಆದರೆ ಇಲ್ಲೊಬ್ಬ ವ್ಯಕ್ತಿ 33 ಸೆಕೆಂಡ್‌ಗಳಲ್ಲಿ ವಿಶ್ವದ 10 ಖಾರದ ಮೆಣಸಿನಕಾಯಿಗಳನ್ನು ತಿಂದು ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ. ಹಾಗಾದರೆ ಆ ವ್ಯಕ್ತಿ ಯಾರು? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಮೆಣಸಿನಕಾಯಿ ನಮ್ಮ ದೈನಂದಿನ ಅಡುಗೆಯಲ್ಲಿ ಬಳಸುವ ಒಂದು ಪದಾರ್ಥವಾಗಿದೆ. ಕಟುವಾದ ರುಚಿಯನ್ನು ಹೊಂದಿರುವ ಒಂದು ಮೆಣಸಿನಕಾಯಿಯನ್ನು ಸಣ್ಣದಾಗಿ ಹೆಚ್ಚಿದರೆ ಸಾಕು ಕಣ್ಣಲ್ಲಿ ನೀರು ಧಾರಾಕಾರವಾಗಿ ಹರಿಯುತ್ತದೆ. ಇನ್ನೂ ನಾಲಿಗೆ ಕಥೆಯಂತೂ ಹೇಳಲೇ ಬೇಕಾಗಿಲ್ಲ. ಆದರೆ ಅಂತಹ ಖಾರವಾದ ಮೆಣಸಿನಕಾಯಿಯನ್ನು ಇಲ್ಲೊಬ್ಬ ವ್ಯಕ್ತಿ ಬಾಯಿಚಪ್ಪರಿಸಿ ಮೇಲಿಂದ ಮೇಲೆ ತಿಂದಿದ್ದಾರೆ.

ಸಾಮಾನ್ಯವಾಗಿ ನಾವು ಅಡುಗೆಗೆ ಬಳಸುವ ಮೆಣಸಿನಕಾಯಿ ಕಡಿಮೆ ಖಾರವಾಗಿರುತ್ತದೆ. ಮೆಣಸಿನಕಾಯಿಯಲ್ಲಿ ಹಲವು ವಿಧಗಳಿವೆ. ಭೂತ್ ಜೊಲೊಕಿಯಾ ಮೆಣಸಿನಕಾಯಿ(Bhut Jolokia Chili) ಪ್ರಪಂಚದ ಅತ್ಯಂತ ಖಾರದ ಮೆಣಸಿನಕಾಯಿಗಳಲ್ಲಿ ಒಂದಾಗಿದೆ. ಅಮೆರಿಕದ ವ್ಯಕ್ತಿಯೊಬ್ಬರು ಇಂತಹ ಹೆಚ್ಚು ಖಾರವಾದ ಭೂತ್ ಜೊಲೊಕಿಯಾ ಮೆಣಸಿನಕಾಯಿಯನ್ನು ಅತ್ಯಂತ ಕಡಿಮೆ ಸಮಯದಲ್ಲಿ ಸೇವಿಸುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ.

ಅಂದರೆ 30.01 ಸೆಕೆಂಡ್‌ಗಳಲ್ಲಿ ಸುಮಾರು 10 ಜೊಲೊಕಿಯಾ ಮೆಣಸಿನಕಾಯಿಯನ್ನು ತಿಂದು ಗ್ರೆಗರಿ ಫೋಸ್ಟರ್ (Mr Gregory Foster) ಅವರು ಗಿನ್ನೆಸ್ ದಾಖಲೆ ಬರೆದಿದ್ದಾರೆ. ಈ ದಾಖಲೆಯ ವಿಡಿಯೋ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧಿಕೃತ ಪುಟದಲ್ಲಿ ಪ್ರಕಟವಾಗಿದೆ.

ಈ ವೀಡಿಯೊದಲ್ಲಿ ಫೋಸ್ಟರ್ ಭೂತ್ ಜೊಲೊಕಿಯಾ ಮೆಣಸಿನಕಾಯಿಯನ್ನು ವೇಗವಾಗಿ ತಿನ್ನುವುದನ್ನು ಕಾಣಬಹುದು. ಈ ಮೆಣಸಿನಕಾಯಿಯನ್ನು ತಿಂದ ನಂತರ ಅದನ್ನು ಸಂಪೂರ್ಣವಾಗಿ ತಿಂದಿದ್ದೇನೆ ಎಂದು ತೋರಿಸಲು ಹೆಮ್ಮೆಯಿಂದ ತನ್ನ ನಾಲಿಗೆಯನ್ನು ಚಾಚುವರು. ನಂತರ ಗ್ರೆಗರಿ ಅವರಿಗೆ ಗಿನ್ನೆಸ್ ವಿಶ್ವ ದಾಖಲೆಯ ಪ್ರಮಾಣಪತ್ರವನ್ನು ನೀಡಲಾಯಿತು. ಗ್ರೆಗರಿ ಫೋಸ್ಟರ್ ಅವರು ಈ ರೀತಿ ಮೆಣಸಿನಕಾಯಿ ತಿನ್ನುವ ದಾಖಲೆ ಮಾಡಿರುವುದು ಇದೇ ಮೊದಲಲ್ಲ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಟಿಸಿದ ವರದಿಯ ಪ್ರಕಾರ, ಅವರು ಈಗಾಗಲೇ ಡಿಸೆಂಬರ್ 2021 ರಲ್ಲಿ 8.72 ಸೆಕೆಂಡುಗಳಲ್ಲಿ 3 ಕೆರೊಲಿನಾ ರೀಪರ್ ಮೆಣಸುಗಳನ್ನು (Carolina Reaper Chili) ತಿನ್ನುವ ಮೂಲಕ ದಾಖಲೆಯನ್ನು ಮಾಡಿದ್ದರು. ಅದಕ್ಕೂ ಮೊದಲು 2017 ರಲ್ಲಿ ಅವರು ಒಂದು ನಿಮಿಷದಲ್ಲಿ 120 ಗ್ರಾಂ ಕೆರೊಲಿನಾ ರೀಪರ್ ಮೆಣಸಿನಕಾಯಿಯನ್ನು ತಿಂದು ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. ಚಿಕ್ಕ ವಯಸ್ಸಿನಿಂದಲೂ ಗ್ರೆಗರಿ ಹೆಚ್ಚು ಖಾರದ ಆಹಾರವನ್ನು ತಿನ್ನಲು ಪ್ರೀತಿಸುತ್ತಿದ್ದರು. ಮನೆಯಲ್ಲಿ ಮೆಣಸಿನ ಗಿಡಗಳನ್ನು ಬೆಳಸುತ್ತಿದ್ದರು. ದಶಕಗಳ ಕಾಲ ಖಾರದ ಆಹಾರವನ್ನು ಸೇವಿಸಿ ಅದನ್ನು ಸಹಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದರು. ಈಗ ಅವರು ವಿಶ್ವದ ಅತ್ಯಂತ ಖಾರದ ಮೆಣಸಿನಕಾಯಿಯನ್ನು ತಿನ್ನುವ ಮೂಲಕ ದಾಖಲೆ ಬರೆದಿದ್ದಾರೆ. ಗ್ರೆಗರಿ ಫಾಸ್ಟರ್‌ನಷ್ಟು ವೇಗವಾಗಿ ಮೆಣಸಿನಕಾಯಿಯನ್ನು ತಿನ್ನುವವರು ಯಾರಾದರೂ ನಿಮಗೆ ತಿಳಿದಿದೆಯೇ? ತಿಳಿದಿದ್ದರೆ ನಮಗೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Previous Post
Maldives-India Row: ಮಾಲ್ಡೀವ್ಸ್ ರಾಯಭಾರಿ ಕರೆಸಿದ ಭಾರತ, ಆ ಸರ್ಕಾರದ ಪ್ರತಿನಿಧಿ ಹೇಳಿದ್ದೇನು?
Next Post
ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಿತ್ತು ಎಂದ ಲಕ್ಷ್ಮೀ ಹೆಬ್ಬಾಳ್ಕರ್ ಗೆ ತರಾಟೆಗೆ ತೆಗೆದುಕೊಂಡ ಕುಮಾರಸ್ವಾಮಿ

Recent News