IDA: ಐವರು ಮಹಿಳಾ ರೈತರಿಗೆ ‘ಅತ್ಯುತ್ತಮ ಮಹಿಳಾ ಹೈನುಗಾರ್ತಿ ಪ್ರಶಸ್ತಿ’

IDA: ಐವರು ಮಹಿಳಾ ರೈತರಿಗೆ ‘ಅತ್ಯುತ್ತಮ ಮಹಿಳಾ ಹೈನುಗಾರ್ತಿ ಪ್ರಶಸ್ತಿ’

ಬೆಂಗಳೂರು, ಜನವರಿ 22: ಪುರುಷನಂತೆ ಹೆಣ್ಣುಮಕ್ಕಳು ಸ್ವಾವಲಂಬಿ ಜೀವನ ಕಟ್ಟಿಕೊಂಡಿದ್ದು, ಸಾಕಷ್ಟು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಹೈನುಗಾರಿಕೆಯಲ್ಲೂ ಸಹ ಉತ್ತಮ ಸಾಧನೆ ಮಾಡಿರುವ ಕರ್ನಾಟಕ ಸೇರಿ ಐದು ರಾಜ್ಯಗಳ ಐದು ಮಹಿಳೆಯರಿಗೆ ಭಾರತ ಡೈರಿ ಅಸೋಸಿಯೇಷನ್ (IDA) ‘ಅತ್ಯುತ್ತಮ ಮಹಿಳಾ ಹೈನುಗಾರ್ತಿ ಪ್ರಶಸ್ತಿ ನೀಡಿ ಗೌರವಿಸಿದೆ. ಇದು ಸಾಕಷ್ಟು ಮಹಿಳೆಯರಿಗೆ ಈ ಕ್ಷೇತ್ರದಲ್ಲಿ ಪ್ರೋತ್ಸಾಹಿಸುವಂತೆ ಮಾಡಿದೆ. ಭಾರತೀಯ ಹೈನುಗಾರಿಕೆ ಒಕ್ಕೂಟದ ದಕ್ಷಿಣ ವಲಯದಿಂದ ಬೆಂಗಳೂರಿನ ಹೆಬ್ಬಾಳ ಪಶುಸಂಗೋಪನಾ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳು ನಾಡು ಮತ್ತು ತೆಲಂಗಾಣ ರಾಜ್ಯಗಳ ಐದು ಹೈನುಗಾರಿಕೆ ಮಹಿಳಾ ರೈತರನ್ನು ಅವರ ಉದ್ಯಮಶೀಲತೆಯ ಉತ್ಸಾಹವನ್ನು ಗುರುತಿಸಿ ಮತ್ತು ದಿನಕ್ಕೆ 60 ಲೀಟರ್‌ನಿಂದ 400 ಲೀಟರ್‌ರೆಗೆ ಹಾಲು ಉತ್ಪಾದಿಸುವವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಆದಾಯ ಹೆಚ್ಚಿಸುವ ಪಶುಸಂಗೋಪನಾ ಕ್ಷೇತ್ರ ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ.ಸಿ. ವೀರಣ್ಣ, ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಪಶುಸಂಗೋಪನಾ ಕ್ಷೇತ್ರ ಬಹುಮುಖ್ಯ ಪಾತ್ರ ವಹಿಸುತ್ತದೆ. ಹಾಲು ಮತ್ತು ಮಾಂಸ ಉತ್ಪಾದನೆಯ ದಕ್ಷತೆಯನ್ನು ಸುಧಾರಿಸಲು ಮತ್ತು ಇದನ್ನು ಉದ್ಯಮಶೀಲ ಚಟುವಟಿಕೆ ಎಂದು ಪರಿಗಣಿಸಲು ವಿನೂತನ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ರೈತರು ಡೈರಿ ಉತ್ಪಾದಕತೆಯನ್ನು ಹೆಚ್ಚಿಸಲು ಸಂಪನ್ಮೂಲಗಳನ್ನು ವಿವೇಚನೆಯಿಂದ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸರ್ಕಾರಗಳು ನೀಡುತ್ತಿರುವ ವಿವಿಧ ರೀತಿಯ ಬೆಂಬಲಗಳ ಬಗ್ಗೆಯೂ ಚರ್ಚಿಸಲಾಯಿತು.

ಬೆಂಗಳೂರಿನ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಮತ್ತು ಪ್ರಸ್ತುತ ಭಾರತೀಯ ಡೈರಿ ಅಸೋಸಿಯೇಷನ್ (ದಕ್ಷಿಣ ವಲಯ) ಅಧ್ಯಕ್ಷ ಡಾ. ಸತೀಶ್ ಕುಲಕರ್ಣಿ ಅವರು, ಗ್ರಾಮೀಣ ಆರ್ಥಿಕತೆಯ ಕೊಡುಗೆಗೆ ಹೈನುಗಾರಿಕೆಯ ಮಹತ್ವ ಮತ್ತು ಸನ್ಮಾನ ಕಾರ್ಯಕ್ರಮದ ಹಿಂದಿನ ತಾರ್ಕಿಕತೆಯ ಕುರಿತು ಸಭೆಗೆ ವಿವರಿಸಿದರು. ಹಾಲಿನ ಉತ್ಪಾದಣೆ ಶೇ.4.5 ಹೆಚ್ಚಳ ಕೃಷಿ ಉತ್ಪಾದನೆಯಲ್ಲಿ ಶೇಕಡಾ 1.5ರಷ್ಟು ಹೆಚ್ಚಳಕ್ಕೆ ಹೋಲಿಸಿದರೆ ಪ್ರಸ್ತುತ ಹಾಲಿನ ಉತ್ಪಾದನೆಯು ವಾರ್ಷಿಕವಾಗಿ ಶೇಕಡಾ 4.5ರಷ್ಟು ಹೆಚ್ಚಳವಾಗುತ್ತಿದೆ. ಹಾಲು ಆಧಾರಿತ ಪ್ರೊಟೀನ್ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಮತ್ತು ಉದ್ಯಮವು ರೈತರಿಗೆ ಲಾಭದಾಯಕ ಬೆಲೆಗಳನ್ನು ನೀಡುವ ಮೂಲಕ ಉತ್ಪಾದನೆಯನ್ನು ಪಡೆಯಲು ಸಂಘಟಿತವಾಗಿರುವುದರಿಂದ ಹೆಚ್ಚು ಹೆಚ್ಚು ಗ್ರಾಮೀಣ ಮಹಿಳೆಯರು ಹೈನುಗಾರಿಕೆ ಕೃಷಿಯನ್ನು ಉದ್ಯಮಶೀಲ ಚಟುವಟಿಕೆಯಾಗಿ ತೆಗೆದುಕೊಳ್ಳುವಂತೆ ಪ್ರೇರೇಪಿಸಬೇಕಾಗಿದೆ ಎಂದು ಹೇಳಿದರು.

50ನೇ ವರ್ಷದ ಸುವರ್ಣ ಸಮ್ಮೇಳನ ಭಾರತೀಯ ಹೈನುಗಾರಿಕೆ ಒಕ್ಕೂಟದ ಅಧ್ಯಕ್ಷ ಡಾ ಆರ್ ಎಸ್ ಸೋಧಿ ಅವರು, ಸಂಘದ ಚಟುವಟಿಕೆಗಳನ್ನು ವಿವರಿಸಿದರು. ಸಂಘವು 1985ರಲ್ಲಿ ಬೆಂಗಳೂರಿನಲ್ಲಿ ಭಾರತೀಯ ಹೈನುಗಾರಿಕೆ ವಿಜ್ಞಾನ ಒಕ್ಕೂಟವಾಗಿ ಪ್ರಾರಂಭವಾಗಿ ವಜ್ರ ಮಹೋತ್ಸವ ಆಚರಿಸುತ್ತಿದೆ. ಅದರ 50ನೇ ವರ್ಷದ ಸುವರ್ಣ ಸಮ್ಮೇಳನವನ್ನು ಹೈದರಾಬಾದ್‌ನಲ್ಲಿ ಮಾರ್ಚ್ 4 ರಿಂದ 6, 2024ರವರೆಗೆ ನಡೆಸುತ್ತಿದೆ. ಸಮ್ಮೇಳನದ ವಿಷಯವು ನಾವೀನ್ಯತೆ ಮತ್ತು ಉದ್ಯಮಶೀಲತೆಯಾಗಿದ್ದು, ನಾವು ರೈತರ ಆದಾಯವನ್ನು ದ್ವಿಗುಣಗೊಳಿಸುವ ಅಗತ್ಯತೆ ಇದೆ ಎಂದರು. ಹೈನುಗಾರಿಕೆಯು ಅರವತ್ತರ ದಶಕದಲ್ಲಿ ಹಾಲಿನ ಕೊರತೆಯ ಪರಿಸ್ಥಿತಿಯಿಂದ ಹಾಲಿನ ದಕ್ಷತೆಯ ಪರಿಸ್ಥಿತಿಗೆ ಹೇಗೆ ರೂಪಾಂತರಗೊಂಡಿದೆ. ಹೈನುಗಾರಿಕೆಯ ಕೊಡುಗೆಯು ಜಿಡಿಪಿಯ ಸುಮಾರು ಶೇಕಡಾ 4ರಷ್ಟು ಕೊಡುಗೆ ನೀಡುತ್ತದೆ ಮತ್ತು ಪ್ರಸ್ತುತ ಭಾರತವು ವಿಶ್ವ ಹಾಲು ಉತ್ಪಾದನೆಯ ಶೇಕಡಾ 25ರಷ್ಟನ್ನು ಹೊಂದಿದೆ. ಮುಂದಿನ ದಶಕದಲ್ಲಿ ಇದರ ಕೊಡುಗೆಯು ವಿಶ್ವ ಹಾಲು ಉತ್ಪಾದನೆಯಲ್ಲಿ ಶೇಕಡಾ 40ಕ್ಕೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ವಿವರಿಸಿದರು. ಪುರಸ್ಕೃತರ ಹೆಸರು ಕರ್ನಾಟಕದ ಎ.ಎನ್. ರಾಜೇಶ್ವರಿ, ಆಂಧ್ರಪ್ರದೇಶದಿಂದ ಅಳಿಗೇನಿ ಪದ್ಮಾ, ತೆಲಂಗಾಣದಿಂದ ಡಬ್ಬು ಪದ್ಮ, ಕೇರಳದ ಶ್ರೀಮತಿ. ಲೀಮಾ ರೋಸ್ಲಿನ್ ಮತ್ತು ತಮಿಳುನಾಡಿನ ಪರಿಮಳಾ ವಿಜಯ ರಮೇಶ್ ಅವರು ಹೈನುಗಾರಿಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸದರಿ ಪ್ರಶಸ್ತಿಯು ಇಪ್ಪತ್ತು ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಯನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ ಒಕ್ಕೂಟದ ಸದಸ್ಯರೊಬ್ಬರಾದ ಎಸ್.ಕೆ. ಭಟ್ ಅವರನ್ನು, 50 ವರ್ಷಗಳ ಸದಸ್ಯತ್ವವನ್ನು ಪೂರೈಸಿದ್ದಕ್ಕಾಗಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

Read more at: https://kannada.oneindia.com/agriculture/ida-distributed-best-women-dairy-farmer-award-to-5-states-women-include-karnatakas-339559.html

Previous Post
ಕರ್ನಾಟಕ ರಾಜ್ಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ದೇಶದಲ್ಲೇ ಮೂರನೇ ಸ್ಥಾನವನ್ನು – 2 ನೇ ರಾಜ್ಯ ಗಣಿಗಾರಿಕೆ ಮಂತ್ರಿಗಳ ಸಮ್ಮೇಳನದಲ್ಲಿ ಕೇಂದ್ರ ಸರಕಾರದಿಂದ ಶ್ಲಾಘನೆ
Next Post
ಏಪ್ರಿಲ್ 16ರಂದು ಲೋಕಸಭಾ ಚುನಾವಣೆ?

Recent News