Ind vs Afg: ಮೊದಲ ಟಿ20 ಪಂದ್ಯಕ್ಕೆ ಮುನ್ನ ಭಾರತಕ್ಕೆ ಶಾಕ್: ಕೊಹ್ಲಿ ಆಡಲ್ಲ ಎಂದ ದ್ರಾವಿಡ್

Ind vs Afg: ಮೊದಲ ಟಿ20 ಪಂದ್ಯಕ್ಕೆ ಮುನ್ನ ಭಾರತಕ್ಕೆ ಶಾಕ್: ಕೊಹ್ಲಿ ಆಡಲ್ಲ ಎಂದ ದ್ರಾವಿಡ್

ಅಫ್ಘಾನಿಸ್ತಾನದ ವಿರುದ್ಧದ ಟಿ20 ಸರಣಿ ಭಾರತಕ್ಕೆ ವಿಶೇಷವಾಗಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟಿ20 ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಜೂನ್ 1ರಿಂದ ಟಿ20 ವಿಶ್ವಕಪ್ ಆರಂಭವಾಗುವ ಕಾರಣ ಇವರ ವಾಪಸಾತಿ ಮುಖ್ಯವಾಗಿದೆ. ಟಿ20 ಸರಣಿ ಆರಂಭಕ್ಕೆ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿರುವ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಗುರುವಾರ ಅಫ್ಘಾನಿಸ್ತಾನ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಡುವುದಿಲ್ಲ ಎಂದು ಬಹಿರಂಗಪಡಿಸಿದರು.

ವಿರಾಟ್ ಮತ್ತು ರೋಹಿತ್ ಕೊನೆಯದಾಗಿ 2022 ರ ಟಿ 20 ವಿಶ್ವಕಪ್‌ನಲ್ಲಿ ಟಿ20 ಐ ಪಂದ್ಯವನ್ನು ಆಡಿದ್ದರು, ಅಲ್ಲಿ ಭಾರತ ಸೆಮಿಫೈನಲ್‌ನಲ್ಲಿ ಸೋತಿತು. ಅಂದಿನಿಂದ ಈ ಇಬ್ಬರೂ ಆಟಗಾರರು ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ಗೆ ಸೀಮಿತವಾಗಿದ್ದಾರೆ. 2024 ರ ಟಿ 20 ವಿಶ್ವಕಪ್‌ಗೆ ಮೊದಲು ಭಾರತ ಆಡಲಿರುವ ಕೊನೆಯ ಟಿ20 ಐ ಸರಣಿಗೆ, ಭಾರತೀಯ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್ ಇಬ್ಬರನ್ನೂ ಕರೆತಂದಿದೆ, ಆದರೆ ಮೊದಲ ಪಂದ್ಯದಲ್ಲಿ ಕೊಹ್ಲಿ ಹೊರಗುಳಿಯಲಿದ್ದಾರೆ. ಕೊಹ್ಲಿ ಹೊರಗುಳಿಯಲು ಕಾರಣವೇನು? ಕ್ರಿಕ್‌ಬಜ್‌ನ ವರದಿಯ ಮಾಡಿರುವ ಪ್ರಕಾರ, ಬಿಸಿಸಿಐ ಆಯ್ಕೆಗಾರರು ವಿರಾಟ್ ಕೊಹ್ಲಿ ಅವರ ನಿರೀಕ್ಷೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅವರ ಭವಿಷ್ಯದ ಬಗ್ಗೆ ಈ ಚರ್ಚೆ ನಡೆದಿದೆ. ವಾಸ್ತವವಾಗಿ, ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೊಹ್ಲಿ ಮತ್ತು ರೋಹಿತ್‌ರನ್ನು ಕೇಪ್ ಟೌನ್‌ನಲ್ಲಿ ಭೇಟಿಯಾದರು ಎಂದು ವರದಿ ತಿಳಿಸಿದೆ.

ವೈಯಕ್ತಿಕ ಕಾರಣಗಳಿಂದಾಗಿ ವಿರಾಟ್ ಕೊಹ್ಲಿ ಮೊದಲ ಟಿ20ಐನಿಂದ ಹೊರಗುಳಿಯಲಿದ್ದಾರೆ ಮತ್ತು ಎರಡನೇ ಮತ್ತು ಮೂರನೇ ಟಿ20ಐಗಳಿಗೆ ಲಭ್ಯರಾಗಲಿದ್ದಾರೆ ಎಂದು ರಾಹುಲ್ ದ್ರಾವಿಡ್ ಬುಧವಾರ ಬಹಿರಂಗಪಡಿಸಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ರೋಹಿತ್ ಶರ್ಮಾ ಬ್ಯಾಟಿಂಗ್ ಮೊದಲ ಟಿ20 ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರೊಂದಿಗೆ ಇದೇ ರೀತಿಯ ಚರ್ಚೆ ನಡೆದಿದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ವರದಿ ತಿಳಿಸಿದೆ. ವಿರಾಟ್ ಕೊಹ್ಲಿ 115 ಟಿ20 ಪಂದ್ಯಗಳಲ್ಲಿ 52.73 ಸರಾಸರಿಯಲ್ಲಿ 4008 ರನ್ ಗಳಿಸಿದ್ದಾರೆ. ಅವರ ಸ್ಟ್ರೈಕ್ ರೇಟ್ 137.96 ಆಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ 1ನೇ ಟೆಸ್ಟ್‌ನಲ್ಲಿ ಭಾರತ ಹೀನಾಯವಾಗಿ ಸೋತ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಏಳು ಕ್ಯಾಲೆಂಡರ್ ವರ್ಷಗಳಲ್ಲಿ 2000 ರನ್ ಗಳಿಸಿದ ಮೊದಲ ಬ್ಯಾಟರ್ ಎನಿಸಿಕೊಂಡ ದಾಖಲೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಈ ಮೊದಲು 2012 (2186 ರನ್), 2014 (2286 ರನ್), 2016 (2595 ರನ್), 2017 (2818 ರನ್), 2018 (2735 ರನ್) ಮತ್ತು 2019 (2455 ರನ್) ನಲ್ಲಿ ಈ ಸಾಧನೆ ಮಾಡಿದ್ದರು.

Previous Post
ಇಂದಿನಿಂದ ರಾಜಧಾನಿ ಬೆಂಗಳೂರಿನ ದೇವಾಲಯಗಳಲ್ಲಿ ಅಧಿಕೃತವಾಗಿ ವಸ್ತ್ರಸಂಹಿತೆ ಜಾರಿಯಾಗಿದ್ದು, ದೇವಾಲಯ ಮುಂಭಾಗದಲ್ಲಿಯೇ ಭಕ್ತಾದಿಗಳಿಗೆ ಜಾಗೃತಿ ಮೂಡಿಸುವ ಫಲಕಗಳನ್ನು ಹಾಕಲಾಗುತ್ತಿದೆ.
Next Post
ಚಾಕಲೇಟ್ ತಿಂದು ಶಾಲೆಗೆ ಬಂದ ವಿದ್ಯಾರ್ಥಿಗಳ ವಿಚಿತ್ರ ವರ್ತನೆ

Recent News