Maldives-India-Israel: ವಿವಾದ ಮಧ್ಯೆ ಲಕ್ಷದ್ವೀಪದಲ್ಲಿ ‘ಇಸ್ರೇಲ್’ ಮಹತ್ವದ ಘೋಷಣೆ

Maldives-India-Israel: ವಿವಾದ ಮಧ್ಯೆ ಲಕ್ಷದ್ವೀಪದಲ್ಲಿ ‘ಇಸ್ರೇಲ್’ ಮಹತ್ವದ ಘೋಷಣೆ

ಬೆಂಗಳೂರು, ಜನವರಿ 09: ಭಾರತದ ಪ್ರಧಾನಿ ಕುರಿತು ಮಾಲ್ಡೀವ್ಸ್ ಆಕ್ಷೇಪಾರ್ಹ ಹೇಳಿಕೆ, ಬಹಿಷ್ಕಾರ ಬೆಳವಣಿಗೆ ಮಧ್ಯೆ ಇಸ್ರೇಲ್ ದೇಶವು ದ್ವೀಪ ಸಮೂಹದಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಹೆಚ್ಚಿಸುವತ್ತ ಗಮನ ಹರಿಸಿದೆ. ಅದರಲ್ಲೂ ಲಕ್ಷದ್ವೀಪದಲ್ಲಿ ಡಿಸಲೀಕರಣ ಕಾರ್ಯಕ್ರಮ ಆರಂಭಿಸುವುದಾಗಿ ಪ್ರಾರಂಭಿಸುವುದಾಗಿ ಮಂಗಳವಾರ ಇಸ್ರೇಲ್ ಘೋಷಿಸಿದೆ. ಸಾಮಾಜಿಕ ಜಾಲತಾಣ X ನಲ್ಲಿ ಈ ಬಗ್ಗೆ ಇಸ್ರೇಲ್ ರಾಯಭಾರಿ ಕಚೇರಿ ಪೋಸ್ಟ್ ಹಾಕಿದೆ. ಡಿಸಲೀಕರಣ ಕಾರ್ಯಕ್ರಮವನ್ನು ಪ್ರಾರಂಭಿಸಲು ಫೆಡರಲ್ ಸರ್ಕಾರದ ಕೋರಿಕೆಯ ಮೇರೆಗೆ ನಾವು ಕಳೆದದಿಂದಲೂ ಲಕ್ಷದ್ವೀಪನಲ್ಲಿದ್ದೇವೆ ಎಂದು ಮಾಹಿತಿ ನೀಡಿದೆ. ಈ ಮೂಲಕ ಮಾಲ್ಡೀವ್ಸ್‌ಗೆ ಮತ್ತಷ್ಟು ಸಂಕಷ್ಟ ಶುರುವಾಗಿದೆ.

ಲಕ್ಷದ್ವೀಪದಲ್ಲಿ ಒಂದು ವರ್ಷದಿಂದ ಯೋಜನೆ ಆರಂಭಿಸಲು ಯೋಜಿಸಿದ್ದು, ಇದೀಗ 2024 ಕ್ಕೆ ಪರಿಣಾಮಕಾರಿಯಾಗಿ ಯೋಜನೆ ಅನುಷ್ಠಾನಕ್ಕೆ ತರಲು ಸಜ್ಜಾಗಿದ್ದೇವೆ. ಲಕ್ಷದ್ವೀಪದಲ್ಲಿ ಇಸ್ರೇಲ್ ಡಸಲೀಕರಣ ಅಂದರೆ ಸಮುದ್ರ ನೀರು ಶುದ್ಧೀಕರಣ ಮಾಡುವ ಯೋಜನೆ ಅನುಷ್ಠಾನ ಮಾಡುವುದಾಗಿ ತಿಳಿಸಿದೆ.

ಲಕ್ಷದ್ವೀಪದ ಫೋಟೊ ಹಂಚಿಕೊಂಡ ಇಸ್ರೇಲ್ ಪೋಸ್ಟ್‌ ನಲ್ಲಿ ಲಕ್ಷದ್ವೀಪದಲ್ಲಿರುವ ಪ್ರಾಚೀನ ಭಾರತೀಯ ಕಡಲತೀರಗಳ ಫೋಟೊಗಳನ್ನು ಇಸ್ರೇಲ್ ಹಂಚಿಕೊಂಡಿದೆ. ಲಕ್ಷದ್ವೀಪಗಳ ಪ್ರಾಚೀನ ಮತ್ತು ಭವ್ಯವಾದ ನೀರೊಳಗಿನ ಸೌಂದರ್ಯವನ್ನು ಇನ್ನೂ ವೀಕ್ಷಿಸಲು ಸಾಧ್ಯವಾಗದವರಿಗೆ, ಈ ದ್ವೀಪದ ಮೋಡಿಮಾಡುವ ಆಕರ್ಷಣೆಯನ್ನು ತೋರಿಸುವ ಕೆಲವು ಚಿತ್ರಗಳು ಇಲ್ಲಿವೆ ಎಂದು ಇಸ್ರೇಲ್ ತಿಳಿಸಿದೆ. ಲಕ್ಷದ್ವೀಪದ ಭೇಟಿ ಬಳಿಕ ಪ್ರಧಾನಿ ಮೋದಿ ವಿರುದ್ಧ ಮಾಲ್ಡೀವ್ಸ್ ಮೊಹಮ್ಮದ್ ಮುಯಿಜ್ಜು ಸರ್ಕಾರದ ಕೆಲವು ಮಂತ್ರಿಗಳು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದು ಭಾರತ ಮತ್ತು ಮಾಲ್ಡೀವ್ಸ್ ನಡುವೆ ರಾಜತಾಂತ್ರಿಕ ಉದ್ವಿಗ್ನತೆಗೆ ಕಾರಣವಾಗಿತ್ತು.

ಮಾಲ್ಡೀವ್ಸ್ ಟೀಕೆ ಬೆನ್ನಲ್ಲೆ ಮಹತ್ವದ ಬೆಳವಣಿಗೆ ಮೋದಿ ಅವರು ಲಕ್ಷದ್ವೀಪ್‌ಗೆ ಭೇಟಿ ನೀಡಿದ ಫೋಟೊಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಮಾಲ್ಡೀವ್ಸ್ ಸಚಿವರು ಟೀಕಿಸಿದ್ದರು. ಮಾಲ್ಸೀವ್ಸ್‌ಗೆ ಪರ್ಯಾಯವಾಗಿ ಲಕ್ಷದ್ವೀಪವನ್ನು ಪ್ರವಾಸಿ ತಾಣವಾಗಿ ಪ್ರದರ್ಶಿಸುವ ಪ್ರಯತ್ನ ಇದು ಎಂದು ಆರೋಪ ಮಾಡಿದ್ದರು. ಸಚಿವ ಹೇಳಿಕೆಗಳಿಂದ ಮಾಲ್ಡೀವ್ಸ್ ಸರ್ಕಾರವು ದೂರವಿತ್ತು. ಅದು ಅವರ ವೈಯಕ್ತಿಕ ಹೇಳಿಕೆ ಎಂದು ತಿಳಿಸಿತು. ಅಲ್ಲದೇ ಪ್ರಧಾನಿ ಟೀಕಿಸಿದ್ದ ಮೂವರನ್ನು ವಜಾಗೊಳಿಸುವ ಮೂಲಕ ಸಂಬಂಧ ಹಾಳಾಗದಂತೆ ಇಟ್ಟುಕೊಳ್ಳಲು ಯತ್ನಿಸಿತು. ಇದರ ಮಧ್ಯೆ ಮಾಲ್ಡೀವ್ಸ್ ರಾಯಭಾರಿಯನ್ನು ಭಾರತದ ದೆಹಲಿಯಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕರೆಸಲಾಗಿತ್ತು.

ಭಾರತದ ಕಡಲತೀರದ ಹುಡುಕಾಟದಲ್ಲೂ ಏರಿಕೆ ಇದೆಲ್ಲ ಬೆಳವಣಿಗೆಗಳ ಮಧ್ಯೆ ಲಕ್ಷದ್ವೀಪ (Lakshdweep) ಅನ್ನು ಗೂಗಲ್ ನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸರ್ಚ್ ಮಾಡಿರುವುದು ಬೆಳಕಿಗೆ ಬಂದಿದೆ. ಕಳೆದ 20 ವರ್ಷಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಲಕ್ಷದ್ವೀಪದ ಬಗ್ಗೆ ಗೂಗಲ್ ನಲ್ಲಿ ತಡಕಾಡಿದ್ದಾರೆ. ಪ್ರಧಾನಿ ಮೋದಿ ಭೇಟಿ ಬಳಿಕ ಲಕ್ಷದ್ವೀಪದಲ್ಲಿ ವೇದಿಕೆಯಲ್ಲಿ ಸರ್ಚ್ ಆಗಿರುವುದು ಶೇಕಡಾ 3,400 ರಷ್ಟು ಹೆಚ್ಚಳವಾಗಿದೆ ಎಂದು ಟ್ರಾವೆಲ್ ಏಜೆನ್ಸಿ MakeMyTrip ಮಾಹಿತಿ ನೀಡಿದೆ. ಮಾಲ್ಡೀವ್ಸ್ ನಿಂದ ಉಂಟಾದ ಈ ಪ್ರಮಾದದಿಂದಾಗಿ ಭಾರತದ ಕಡಲತೀರಗಳ ಪ್ರವಾಸೋದ್ಯಮತ್ತ ಪ್ರವಾಸಿಗರ ಒಲವು ಹೆಚ್ಚಾಗುತ್ತಿದೆ. ಗೂಗಲ್ ಹುಡುಕಾಟಗಳು ಸಹ ಹೆಚ್ಚಾಗಿದೆ. ಇದಕ್ಕೆ ಮಾಲ್ಡೀವ್ಸ್ ವಿರುದ್ಧ ಆನ್‌ಲೈನ್ ಅಭಿಯಾನ ಸಹ ಕಾರಣವಾಗಿದೆ.

Previous Post
ಲೈಂಗಿಕ ಕಿರುಕುಳದ ಆರೋಪ: 500 ವಿದ್ಯಾರ್ಥಿನಿಯರಿಂದ ಪ್ರಧಾನಿ, ಹರಿಯಾಣ ಸಿಎಂಗೆ ಪತ್ರ
Next Post
ಬಾಂಗ್ಲಾ & ಭಾರತ ಬ್ರದರ್ಸ್, ಹೊಸ ರಣತಂತ್ರ ರೂಪಿಸಿದ ಭಾರತ!

Recent News