Maldives-India Row: ಮಾಲ್ಡೀವ್ಸ್ ರಾಯಭಾರಿ ಕರೆಸಿದ ಭಾರತ, ಆ ಸರ್ಕಾರದ ಪ್ರತಿನಿಧಿ ಹೇಳಿದ್ದೇನು?

Maldives-India Row: ಮಾಲ್ಡೀವ್ಸ್ ರಾಯಭಾರಿ ಕರೆಸಿದ ಭಾರತ, ಆ ಸರ್ಕಾರದ ಪ್ರತಿನಿಧಿ ಹೇಳಿದ್ದೇನು?

ನವದೆಹಲಿ, ಜನವರಿ 08: ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪದ ಭೇಟಿಯ ಕುರಿತು ಮಾತನಾಡಿದ ಮಾಲ್ಡೀವ್ಸ್ ಸಚಿವರ ಹೇಳಿಕೆ ಅದು ಅವರ ವೈಯಕ್ತಿಕ ಎಂದು ಮಾಲ್ಡೀವ್ಸ್ ಸರ್ಕಾರದ ಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದಾರೆ. ಸೋಮವಾರ ಭಾರತದಲ್ಲಿರುವ ಮಾಲ್ಡೀವ್ಸ್ ರಾಯಭಾರಿಯನ್ನು ದೆಹಲಿಯ ವಿದೇಶಾಂಗ ಸಚಿವಾಲಯಕ್ಕೆ ಕರೆಸಲಾಯಿತು. ಮಾಲ್ಡೀವ್ಸ್‌ನ ಹಲವಾರು ಮಂತ್ರಿಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಟೀಕೆಗಳ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಭಾರತೀಯ ಹೈಕಮಿಷನ್ ಭಾನುವಾರ ಮಾಲ್ಡೀವಿಯನ್ ವಿದೇಶಾಂಗ ಸಚಿವಾಲಯದೊಂದಿಗೆ ಈ ವಿಷಯವನ್ನು ಬಲವಾಗಿ ಪ್ರಸ್ತಾಪಿಸಿತ್ತು. ಅದರ ಬೆನ್ನಲ್ಲೆ ಇಂದು ರಾಯಭಾರಿಯನ್ನು ಸಚಿವಾಲಯಕ್ಕೆ ಆಹ್ವಾನಿಸಲಾಗಿತ್ತು. ಟೀಕೆಗೆ ಮಾಲ್ಡೀವ್ ಸರ್ಕಾರ ಪ್ರತಿಕ್ರಿಯೆ ಮಾಲ್ಡೀವ್ಸ್ ವಿದೇಶಾಂಗ ಸಚಿವಾಲಯ, ರಾಯಭಾರಿಗಳು ವಿದೇಶಿ ನಾಯಕರ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವಹೇಳನಕಾರಿ ಮಾಡಿ ಟೀಕೆಗಳು ನಮ್ಮ ಸರ್ಕಾರದ ಗಮನಕ್ಕೆ ಬಂದಿವೆ. ಇವುಗಳ ಆಯಾ ಸಚಿವರ ವೈಯಕ್ತಿಕ ಅಭಿಪ್ರಾಯಗಳೇ ಹೊರತು ಅವುಗಳನ್ನು ಸರ್ಕಾರ ಬೆಂಬಲಿಸುವುದಿಲ್ಲ ಎಂದು ಮಾಲ್ಡಿವ್ಸ್ ಪ್ರತಿನಿಧಿಗಳು ತಿಳಿಸಿದ್ದಾರೆ. ಒಂದು ದೇಶದ ಪ್ರಧಾನಮಂತ್ರಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಮಾಲ್ಡೀವ್ಸ್ ಸಚಿವರ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಯಿತು. ಇದು ಬಹಿರಂಗವಾಗುತ್ತಿದ್ದಂತೆ ಟೀಕೆಯ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಲಾಗಿದೆ.

ಆನ್‌ಲೈನ್‌ನಲ್ಲಿ ಮಾಲ್ಡೀವ್ಸ್ ವಿರುದ್ಧ ಸಮರ ಭಾರತದ ವಿರುದ್ಧ ಮಾತನಾಡಿದ್ದೇ ತಡ ನಟ-ನಟಿಯರು, ಕ್ರಿಕೇಟಿಗರು ಸೇರಿದಂತೆ ಭಾರತೀಯರು ಮಾಲ್ಡೀವ್ಸ್‌ಗೆ ಹೋಗುವ ಬದಲು ದೇಶೀಯ ಪ್ರವಾಸಿ ತಾಣಗಳನ್ನು ಅನ್ವೇಷಿಸಿ ಎಂದು ಕರೆ ನೀಡಿದ್ದಾರೆ. ನಾವು ಸಹ ಲಕ್ಷದ್ವೀಪ ಅನ್ವೇಷಿಸುತ್ತೇವೆ ಒಗ್ಗಟ್ಟಾಗಿ ಮಾಲ್ಡೀವ್ಸ್ ವಿರುದ್ಧ ಸಮರ ಸಾರಿದ್ದಾರೆ. ಇನ್ನೂ ಕೆಲವು ಭಾರತೀಯರು ಮಾಲ್ಡೀವ್ಸ್‌ಗೆ ಪ್ಲಾನ್ ಹಾಗೂ ಈಗಾಗಲೇ ಕಾಯ್ದಿರಿಸಿದ್ದ ವಿಮಾನ ಟಿಕೆಟ್‌ಗಳನ್ನು ಸ್ವಯಂ ಪ್ರೇರಿತವಾಗಿ ರದ್ದು ಮಾಡಿದ್ದಾರೆ. ಮಾಲ್ಡೀವ್ಸ್‌ ಬಹಿಷ್ಕಾರ (Maldivesboycott) ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ.

ಮಾಲ್ಡೀವ್ಸ್‌ಗೆ ಪರ್ಯಾಯ ತಾಣ ಎಂದು ಊಹೆ ಭಾರತದ ಪ್ರಧಾನಿ ಮೋದಿ ಅವರ ಲಕ್ಷದ್ವೀಪ್‌ಗೆ ಭೇಟಿ ನೀಡಿದ ನಂತರ ಅವರನ್ನು ಮಾಲ್ಡೀವ್ಸ್ ಸರ್ಕಾರದ ಮೂವರು ಸಚಿವರು ಟೀಕಿಸಿ ಟ್ವೀಟ್ ಮಾಡಿದ್ದರು. ಇದು ಕೇಂದ್ರಾಡಳಿತ ಪ್ರದೇಶವನ್ನು ಮಾಲ್ಡೀವ್ಸ್‌ಗೆ ಪರ್ಯಾಯ ಪ್ರವಾಸಿ ತಾಣವಾಗಿ ಬಿಂಬಿಸುವ ಪ್ರಯತ್ನವಾಗಿದೆ ಎಂದು ಊಹಿಸಿ ಅವರು ಆರೋಪಿಸಿದ್ದರು. ಭಾರತದ ವಿರುದ್ಧ ಅವಹೇಳನಕಾರಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಮಾಲ್ಡೀವ್ಸ್ ಸರ್ಕಾರ ಮೂರು ಉಪ ಮಂತ್ರಿಗಳನ್ನು ಅಮಾನತು ಮಾಡಿದೆ. ಮಾಲ್ಡೀವ್ಸ್ ಮಾಧ್ಯಮ ವರದಿಗಳ ಪ್ರಕಾರ, ಸಚಿವಾಲಯದ ಉಪ ಮಂತ್ರಿಗಳಾದ ಮಲ್ಶಾ ಶರೀಫ್, ಮರಿಯಮ್ ಶಿಯುನಾ ಮತ್ತು ಅಬ್ದುಲ್ಲಾ ಮಹಜೂಮ್ ಮಜಿದ್ ಅವರನ್ನು ತಮ್ಮ ಹುದ್ದೆಗಳ ಮೇಲೆ ಅಮಾನತುಗೊಳಿಸಲಾಗಿದೆ.

Previous Post
ಬಾಂಗ್ಲಾದಲ್ಲಿ ಶೇಖ್ ಹಸೀನಾ ನೇತೃತ್ವಕ್ಕೆ ದಾಖಲೆಯ ಜಯ
Next Post
Guinness World: 33 ಸೆಕೆಂಡ್‌ಗಳಲ್ಲಿ ವಿಶ್ವದ 10 ಖಾರದ ಮೆಣಸಿನಕಾಯಿಗಳನ್ನು ತಿಂದು ಗಿನ್ನಿಸ್ ದಾಖಲೆ ನಿರ್ಮಿಸಿದ ವ್ಯಕ್ತಿ!

Recent News