Peenya Flyover: ಜನವರಿ 16ರಿಂದ 4 ದಿನಗಳ ಕಾಲ ವಾಹನ ಸಂಚಾರ ಬಂದ್‌-ಯಾಕೆ ಗೊತ್ತಾ? ಪರ್ಯಾಯ ಮಾರ್ಗಗಳ ಕುರಿತಾಗಿಯೂ ತಿಳಿಯಿರಿ

Peenya Flyover: ಜನವರಿ 16ರಿಂದ 4 ದಿನಗಳ ಕಾಲ ವಾಹನ ಸಂಚಾರ ಬಂದ್‌-ಯಾಕೆ ಗೊತ್ತಾ? ಪರ್ಯಾಯ ಮಾರ್ಗಗಳ ಕುರಿತಾಗಿಯೂ ತಿಳಿಯಿರ

ಬೆಂಗಳೂರು, ಜನವರಿ, 09: ಜನವರಿ 16 ರಂದು ರಾತ್ರಿ 11ರಿಂದ ಜನವರಿ 19ರ ಬೆಳಗ್ಗೆ 11ರವರೆಗೆ ಬೆಂಗಳೂರಿನ ಈ ಮಾರ್ಗದಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗುತ್ತದೆ. ಹಾಗಾದರೆ ಈ ನಿರ್ಬಂಧ ಯಾಕೆ ಹಾಗೂ ಯಾವ ಮಾರ್ಗದಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ. ನಗರದಿಂದ ವಿವಿಧ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪೀಣ್ಯ ಮೇಲ್ಸೇತುವೆ 4 ದಿನಗಳ ಕಾಲ ಬಂದ್ ಆಗಲಿದೆ. ಜನವರಿ 16ರ ರಾತ್ರಿ 11 ಗಂಟೆಯಿಂದ ಜನವರಿ 19ರ ಬೆಳಗ್ಗೆ 11ವರೆಗೆ ಪೀಣ್ಯ ಫ್ಲೈಓವರ್‌ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಲೋಡ್ ಟೆಸ್ಟಿಂಗ್ ಹಿನ್ನೆಲೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ನಿರ್ಧಾರ ತೆಗೆದುಕೊಂಡಿದೆ. ಒಟ್ಟು 4 ದಿನ ಫ್ಲೈಓವರ್ ಬಂದ್ ಆಗುವುದರಿಂದ ಸರ್ವಿಸ್ ರಸ್ತೆ ಬಳಸುವಂತೆ ಟ್ರಾಫಿಕ್ ಪೊಲೀಸರು ವಾಹನ ಸವಾರರಿಗೆ ಮನವಿ ಮಾಡಿದ್ದಾರೆ.

ಪರ್ಯಾಯ ಮಾರ್ಗಗಗಳ ಮಾಹಿತಿ: ನೆಲಮಂಗಲದಿಂದ ಬೆಂಗಳೂರು ನಗರಕ್ಕೆ ತೆರಳುವ ವಾಹನಗಳಿಗೆ 8ನೇ ಮೈಲಿವರೆಗೆ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವಂತೆ ಸೂಚಿಸಿಲಾಗಿದೆ. ಅಲ್ಲಿಂದ ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್‌ಆರ್‌ಎಸ್ ಜಂಕ್ಷನ್ ಮೂಲಕ ಗೊರಗುಂಟೆಪಾಳ್ಯ ತಲುಪಬಹುದಾಗಿದೆ ಎಂದು ತಿಳಿಸಿದ್ದಾರೆ. ಇನ್ನು ಪಾರ್ಲೆ-ಜಿ ಟೋಲ್ ಕಡೆಗೆ ಹೋಗುವ ವಾಹನಗಳು ಪಕ್ಕದ NH4 ಸರ್ವಿಸ್ ರಸ್ತೆಯಲ್ಲಿ ಸಂಚಾರ ಮಾಡಬಹುದಾಗುದೆ. ಎಸ್‌ಆರ್‌ಎಸ್ ಜಂಕ್ಷನ್‌ನಿಂದ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಾಲಹಳ್ಳಿ ಕ್ರಾಸ್ ಮತ್ತು 8ನೇ ಮೈಲಿಯಿಂದ ನೆಲಮಂಗಲ ತಲುಪಬಹುದಾಗಿದ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.

Previous Post
2.50 ಲಕ್ಷ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 170 ಕೋಟಿ ರೂ. ವಿದ್ಯಾರ್ಥಿ ವೇತನ ಬಿಡುಗಡೆ
Next Post
ನಿರೀಕ್ಷೆಯಂತೆ ಸಿಎಂ ಶಿಂಧೆ ಪರ ಸ್ಪೀಕರ್ ತೀರ್ಪು

Recent News