Swachh Survekshan-2023: ಸ್ವಚ್ಛತೆಯಲ್ಲಿ ಬೆಂಗಳೂರಿಗೆ ಮತ್ತೊಂದು ಗೌರವ, ಎಷ್ಟನೇ ಸ್ಥಾನ?

Swachh Survekshan-2023: ಸ್ವಚ್ಛತೆಯಲ್ಲಿ ಬೆಂಗಳೂರಿಗೆ ಮತ್ತೊಂದು ಗೌರವ, ಎಷ್ಟನೇ ಸ್ಥಾನ?

ಬೆಂಗಳೂರು, ಜನವರಿ 12: ಜನಸಂಖ್ಯೆಯಲ್ಲಿ ಬೃಹತ್ ನಗರವಾಗಿರುವ ರಾಜಧಾನಿ ಬೆಂಗಳೂರು ತನ್ನದೇ ಆದ ವೈಶಿಷ್ಟ್ಯದಿಂದ ವಿಶ್ವದಲ್ಲಿ ಸ್ಥಾನ ಮಾನ ಪಡೆದಿದೆ. ಇದೀಗ ಕಳೆದ ವರ್ಷದ ಸಮೀಕ್ಷೆಯೊಂದರಲ್ಲಿ ಬೆಂಗಳೂರಿಗೆ ಮತ್ತೊಂದು ಸ್ಥಾನಕ್ಕೆ ಪಾತ್ರವಾಗಿದೆ. ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ವಾರ್ಷಿಕ ಸ್ಚಚ್ಛತಾ ಸಮೀಕ್ಷೆ ನಡೆಸಿದೆ. ಕಳೆದ ವರ್ಷದ ಸ್ವಚ್ಛ ಸರ್ವೇಕ್ಷಣ್-2023ರ ಸಮೀಕ್ಷೆಯಲ್ಲಿ ನಗರಗಳನ್ನು 1 ಲಕ್ಷ ಜನಸಂಖ್ಯೆಯ ಒಳಗೆ ಹಾಗೂ 1 ಲಕ್ಷ ಜನಸಂಖ್ಯೆ ಮೇಲ್ಪಟ್ಟ ನಗರಗಳು ಎಂಬುದಾಗಿ ವರ್ಗೀಕರಿಸಿ ಅದರಂತೆ ಶ್ರೇಯಾಂಕಗಳನ್ನು ನೀಡಲಾಗಿರುತ್ತದೆ.

ಇದರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪ್ರಸ್ತುತ ಸಾಲಿನಲ್ಲಿ 1 ಲಕ್ಷ ಜನಸಂಖ್ಯೆ ಮೇಲ್ಪಟ್ಟ ನಗರಗಳಲ್ಲಿ ವರ್ಗೀಕರಿಸಲಾಗಿದ್ದು, ಸಮೀಕ್ಷೆಯಲ್ಲಿ ಭಾಗವಹಿಸಿದ 446 ನಗರಗಳ ಪೈಕಿ 125ನೇ ಸ್ಥಾನವನ್ನು ಪಡೆದಿದೆ. ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳಿಗೆ ಹೋಲಿಸಿದಾಗ ಪಾಲಿಕೆಯು ಮೈಸೂರು, ಹುಬ್ಬಳ್ಳಿ ಧಾರವಾಡ ನಂತರ 3ನೇ ಸ್ಥಾನದಲ್ಲಿದ್ದು ,ರಾಜ್ಯದಲ್ಲಿಯೇ 3ನೇ ಸ್ವಚ್ಛ ನಗರವಾಗಿದೆ. ಇದೇ ಪ್ರಥಮ ಬಾರಿಗೆ ಬೆಂಗಳೂರು ನಗರಕ್ಕೆ ನೈರ್ಮಲ್ಯ ಸಮೀಕ್ಷೆಯಲ್ಲಿ ಉನ್ನತ ಶ್ರೇಯಾಂಕ ದೊರೆತಿದೆ.. ಕಳೆದ ಸಾಲಿನ (2022ರಲ್ಲಿ) ಸಮೀಕ್ಷೆಯಲ್ಲಿ ನಗರಗಳನ್ನು 10 ಲಕ್ಷ ಮೇಲ್ಪಟ್ಟ ನಗರ ಅಡಿಯಲ್ಲಿ ವರ್ಗೀಕರಿಸಲಾಗಿತ್ತು. ಸದರಿ ಸಮೀಕ್ಷೆಯಲ್ಲಿ ನಗರವು 45 ನಗರಗಳ ಪೈಕಿ 43ನೇ ನಗರವಾಗಿತ್ತು.

ವಿವಿಧ ವರ್ಷಗಳ ಸಮೀಕ್ಷೆ: ಬೆಂಗಳೂರಿನ ಸ್ಥಾನದ ಮಾಹಿತಿ 1 ಲಕ್ಷ ಜನಸಂಖ್ಯೆ ಮೇಲ್ಪಟ್ಟ ನಗರಗಳ ಮಾನದಂಡವನ್ನು 2017ನೇ ಸಾಲಿನಿಂದ 2020ನೇ ಸಾಲಿನ ವರೆಗೆ ಅನ್ವಯಿಸಲಾಗಿರುತ್ತದೆ. 2017ನೇ ಸಾಲಿನಲ್ಲಿ 210ನೇ ಸ್ಥಾನ, 2018ನೇ ಸಾಲಿನಲ್ಲಿ 216ನೇ ಸ್ಥಾನ, 2019ನೇ ಸಾಲಿನಲ್ಲಿ 194ನೇ ಸ್ಥಾನ ಮತ್ತು 2020ನೇ ಸಾಲಿನಲ್ಲಿ 214ನೇ ಸ್ಥಾನ ಪಡೆದಿದ್ದು, ಈ ಬಾರಿ 125ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಸರ್ವೀಸ್ ಲೆವೆಲ್ ಪ್ರೋಗ್ರೆಸ್, ಸಿಟಿಜನ್ ವೈಸ್ ಅಡಿಯಲ್ಲಿ ಪಾಲಿಕೆಯು ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಸಾರ್ವಜನಿಕರು ಪಾಲಿಕೆ ಜೊತೆಗೆ ಸಮೀಕ್ಷೆಯಲ್ಲಿ ಭಾಗವಹಿಸಿರುವುದು ಸಹ ಉತ್ತಮ ಆಡಳಿತಕ್ಕೆ ಸ್ಫೂರ್ತಿ ಆಗಿದೆ ಬಿಬಿಎಂಪಿಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

Previous Post
‘ಅಟಲ್ ಸೇತು’ ಬ್ರೀಡ್ಜ್ ಉದ್ಘಾಟನೆ
Next Post
ರಾಮಮಂದಿರ ಉದ್ಘಾಟನಾ ಸಮಾರಂಭದಿಂದ ದೂರ ಉಳಿಯಲು ಪ್ರಮುಖ ಹಿಂದೂ ಸ್ವಾಮೀಜಿಗಳು ನಿರ್ಧಾರ

Recent News