Vande bharat ಮಾದರಿ 40 ಸಾವಿರ ಬೋಗಿ ಅಭಿವೃದ್ಧಿ

Vande bharat ಮಾದರಿ 40 ಸಾವಿರ ಬೋಗಿ ಅಭಿವೃದ್ಧಿ

ಬೆಂಗಳೂರು, ಫೆಬ್ರವರಿ 01: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ಸಾಮಾನ್ಯ ಬಜೆಟ್‌ನಲ್ಲಿಯೇ ರೈಲ್ವೆ ಬಜೆಟ್ ವಿಲೀನಗೊಂಡಿದೆ. ಆದ್ದರಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳ ಕುರಿತು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ದೇಶದಲ್ಲಿ ವಂದೇ ಭಾರತ್ ರೈಲುಗಳಿಗೆ ಭಾರೀ ಬೇಡಿಕೆ ಇದೆ. ಬಜೆಟ್‌ನಲ್ಲಿ ಹೊಸ ವಂದೇ ಭಾರತ್ ರೈಲುಗಳು ಘೋಷಣೆ ಬಗ್ಗೆ ಇಲಾಖೆ ಪತ್ರಿಕಾಗೋಷ್ಠಿ ನಡೆಸಿದ ಮೇಲೆ ತಿಳಿಯಲಿದೆ. ಆದರೆ ಪ್ರಯಾಣಿಕರ ಸುರಕ್ಷತೆ, ಸಂಚಾರ ದಟ್ಟಣೆ ತಪ್ಪಿಸಲು ಅನೇಕ ಕ್ರಮಗಳನ್ನು ಘೋಷಣೆ ಮಾಡಲಾಗಿದೆ.

ಬಜೆಟ್‌ ಭಾಷಣದಲ್ಲಿ ಸಚಿವರು ವಂದೇ ಭಾರತ್ ಎಕ್ಸ್‌ಪ್ರೆಸ್ ಮಾದರಿಯಲ್ಲಿ ಸಾಮಾನ್ಯ ಬೋಗಿಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ ಎಂದು ಘೋಷಣೆ ಮಾಡಿದ್ದಾರೆ. ಪ್ರಯಾಣಿಕರಿಗೆ ಐಷಾರಾಮಿ ಸೌಲಭ್ಯಗಳನ್ನು ನೀಡುವ ವಂದೇ ಭಾರತ್ ರೈಲು ಮಾದರಿಯಲ್ಲಿ ಸಾಮಾನ್ಯ ಬೋಗಿ ಅಭಿವೃದ್ಧಿಯಾಗಲಿದೆ.

ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ 40 ಸಾವಿರ ರೈಲು ಬೋಗಿಯನ್ನು ವಂದೇ ಭಾರತ್ ರೈಲಿನ ಮಾದರಿ ಬೋಗಿಯಾಗಿ ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಇದರಿಂದಾಗಿ ಪ್ರಯಾಣಿಕರಿಗೆ ಉತ್ತಮ ದರ್ಜೆಯ ಪ್ರಯಾಣ ಅನುಭವ ದೊರೆಯಲಿದೆ.

ರೈಲು ಬೋಗಿಯ ವಿಶೇಷತೆಗಳು; ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಪ್ರಯಾಣಿಕರಿಗೆ ಉತ್ತಮ ದರ್ಜೆಯ ಸೌಲಭ್ಯಗಳನ್ನು ಒದಗಿಸುತ್ತವೆ. ಈ ರೈಲು ಬೋಗಿಗಳು ಕಾರ್ಯಾಚರಣೆ ಸಂದರ್ಭದಲ್ಲಿ ಸುರಕ್ಷತೆಯನ್ನು ಹೆಚ್ಚಿಸಲು ಕವಚ (ರೈಲು ಅವಘಡ ತಪ್ಪಿಸುವ ವ್ಯವಸ್ಥೆ)ಯನ್ನು ಹೊಂದಿದೆ.

ಸುರಕ್ಷತೆಯಲ್ಲಿ ಸುಧಾರಣೆಯಾಗಿದ್ದು, ಪ್ರತಿಯೊಂದು ಕೋಚ್‌ನಲ್ಲಿಯೂ 4 ತುರ್ತು ಕಿಟಕಿಗಳಿವೆ. ಕೋಚ್‌ನ ಹೊರಗಡೆ ಹಿಂಭಾಗದಿಂದ ವೀಕ್ಷಣೆಯ ಕ್ಯಾಮರಾಗಳು ಸೇರಿದಂತೆ ನಾಲ್ಕು ಪ್ಲಾಟ್ ಫಾರ್ಮ್‌ಗಳ ಬದಿಯಲ್ಲಿ ಕ್ಯಾಮರಾಗಳಿವೆ. ವಿದ್ಯುತ್ ಕ್ಯುಬಿಕಲ್‌ಗಳು ಮತ್ತು ಶೌಚಾಲಯಗಳಲ್ಲಿ ಏರೋಸಾಲ್ ಆಧಾರಿತ ಬೆಂಕಿ ಪತ್ತೆ ಮತ್ತು ನಿಗ್ರಹ ವ್ಯವಸ್ಥೆಯೊಂದಿಗೆ ಉತ್ತಮ ಅಗ್ನಿ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದೆ. 650 ಮಿಲಿಮೀಟರ್ ಎತ್ತರದವರೆಗೆ ಪ್ರವಾಹ ತಡೆದುಕೊಳ್ಳಬಲ್ಲ, ಕೆಳ ಭಾಗದಲ್ಲಿ ಸ್ಲಂಗ್ ಎಲೆಕ್ಟ್ರಿಕಲ್ ಉಪಕರಣಗಳೊಂದಿಗೆ ಪ್ರವಾಹ ತಡೆ ವ್ಯವಸ್ಥೆಇದೆ. ವಿದ್ಯುತ್ ವ್ಯವಸ್ಥೆ ವಿಫಲವಾದಲ್ಲಿ ಪ್ರತಿಯೊಂದು ಕೋಚ್‌ನಲ್ಲಿಯೂ 4 ತುರ್ತು ದೀಪಗಳಿರಲಿವೆ. ರೈಲಿನ ಬೋಗಿಯೊಳಗೆ 32 ಇಂಚಿನ ಎಲ್‌ಸಿಡಿ ಟಿವಿ ಮತ್ತು ಪ್ರಯಾಣಿಕರ ಮಾಹಿತಿ ಹಾಗೂ ಸಂರ್ಪಕ ವ್ಯವಸ್ಥೆಯನ್ನು ಹೊಂದಿದೆ. ಎಲ್ಲ ದರ್ಜೆ ಪ್ರಯಾಣಿಕರಿಗೆ ಸೈಡ್ ರೀಕ್ಲೈನರ್ ಆಸನ ಸೌಲಭ್ಯ ಒದಗಿಸಲಾಗಿದೆ. ಎಕ್ಸಿಕ್ಯೂಟಿವ್ ಕೋಚ್‌ಗಳಲ್ಲಿ ಆಸನಗಳು 180 ಡಿಗ್ರಿ ತಿರುಗುವ ವಿಶೇಷತೆ ಹೊಂದಿವೆ. ಜೈವಿಕವಾಗಿ ಸ್ವಚ್ಛವಾಗುವ ಟಚ್ ಫ್ರೀ ಸೌಲಭ್ಯವಿರುವ ಶೌಚಾಲಯಗಳು ಮತ್ತು ಬೇಡಿಕೆಗೆ ಅನುಗುಣವಾಗಿ ವೈ-ಫೈ ವ್ಯವಸ್ಥೆಯನ್ನು ರೈಲು ಬೋಗಿಗಳು ಒಳಗೊಂಡಿವೆ. ಮುಕ್ತ ಗಾಳಿಯ ಪೂರೈಕೆಗಾಗಿ ಅಲ್ಟ್ರಾ ವೈಲೆಟ್ ದೀಪದೊಂದಿಗೆ ಹೆಚ್ಚಿನ ದಕ್ಷತೆಯ ಮೂಲಕ ಉತ್ತಮವಾದ ಶಾಖ ಹೊಂದಿರುವ ಗಾಳಿ ಮತ್ತು ಹವಾನಿಯಂತ್ರಿತ ವ್ಯವಸ್ಥೆಯಿರುವ ಸೌಲಭ್ಯವನ್ನು ಬೋಗಿ ಒಳಗೊಂಡಿದೆ. ವಂದೇ ಭಾರತ್ ರೈಲನ್ನು ಪ್ರತಿ ಗಂಟೆಗೆ 160 ಕಿಲೋಮೀಟರ್ ನಷ್ಟು ವೇಗವಾಗಿ ಸಂಚರಿಸುವ ಸಾಮರ್ಥ್ಯದಂತೆ ರೂಪಿಸಲಾಗಿದೆ. ಚಾಲಕರಿಗೆ ಧ್ವನಿಯನ್ನು ರೆಕಾರ್ಡ್ ಮಾಡುವ ರಕ್ಷಣಾ ಸಂಪರ್ಕ ವ್ಯವಸ್ಥೆಯನ್ನು ರೈಲು ಹೊಂದಿದೆ.

Previous Post
ನಿರ್ಮಲಾ ಸೀತಾರಾಮನ್ ಅವರ 28 ಪುಟಗಳ ಭಾಷಣ ಸುಳ್ಳುಗಳ ಸರಮಾಲೆಯಿಂದ ಕೂಡಿದೆ’: ಸಿದ್ದರಾಮಯ್ಯ ಟೀಕೆ
Next Post
ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಬಂಪರ್: ಕೇಂದ್ರದ ವಾಗ್ದಾನ ಏನು ತಿಳಿಯಿರಿ!

Recent News