ಇಂದು 78ನೇ ಸ್ವಾತಂತ್ರ್ಯ ದಿನಾಚರಣೆ ಮೋದಿ ಭಾಷಣ, ಕೆಂಪುಕೋಟೆಯ ಸುತ್ತ ಹದ್ದಿನ ಕಣ್ಣು

ನಾಳೆ 78ನೇ ಸ್ವಾತಂತ್ರ್ಯ ದಿನಾಚರಣೆ ಮೋದಿ ಭಾಷಣ, ಕೆಂಪುಕೋಟೆಯ ಸುತ್ತ ಹದ್ದಿನ ಕಣ್ಣು

ನವದೆಹಲಿ : ಭಾರತದಾದ್ಯಂತ ನಾಳೆ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಿದ್ಧತೆಗಳು ಜೋರಾಗಿವೆ. ಎಲ್ಲರ ಚಿತ್ತ ಕೆಂಪುಕೋಟೆಯ ಮೇಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 7:30 ಕ್ಕೆ ಧ್ವಜಾರೋಹಣ ನಡೆಸಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ದಾಖಲೆ ಬರೆದಿರುವ ಅವರು, ಈ ಅವಧಿಯ ಮೊದಲ ಸ್ವಾತಂತ್ರ್ಯ ದಿನದ ಭಾಷಣವಾಗಿದೆ. ಈ ಭಾಷಣದೊಂದಿಗೆ ಪ್ರಧಾನಿ ಮೋದಿ ಅವರು ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿಯವರ ನಂತರ ಕೆಂಪು ಕೋಟೆಯಲ್ಲಿ ಸತತ 11 ಸ್ವಾತಂತ್ರ್ಯ ದಿನದ ಭಾಷಣ ಮಾಡುವ ಮೂರನೇ ಪ್ರಧಾನಿಯಾಗಲಿದ್ದಾರೆ.

ನೆಹರು, ಇಂದಿರಾ ಬಳಿಕ ಮೋದಿ ಹೊಸ ದಾಖಲೆ

ಮೋದಿಯವರ ಈ ಬಾರಿಯ 11ನೇ ಭಾಷಣದ ಮೂಲಕ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ದಾಖಲೆ ಮೀರಿಸಲಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 10 ಸ್ವಾತಂತ್ರ್ಯ ದಿನದ ಭಾಷಣಗಳನ್ನು ಮಾಡಿರುವ ದಾಖಲೆ ಹೊಂದಿದ್ದಾರೆ. ಭಾರತದ ಮೊದಲ ಪ್ರಧಾನಿ ನೆಹರೂ ಅವರು 17 ಬಾರಿ ನಿರಂತರವಾಗಿ ಸ್ವಾತಂತ್ರ್ಯ ದಿನದ ಭಾಷಣಗಳನ್ನು ಮಾಡಿದ ದಾಖಲೆಯನ್ನು ಹೊಂದಿದ್ದಾರೆ. ಜನವರಿ 1966ರಿಂದ ಮಾರ್ಚ್ 1977ರವರೆಗೆ ಮತ್ತು ಅನಂತರ ಜನವರಿ 1980ರಿಂದ ಅಕ್ಟೋಬರ್ 1984ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಇಂದಿರಾ ಗಾಂಧಿ ಅವರು ಒಟ್ಟು 16 ಬಾರಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣಗಳನ್ನು ಮಾಡಿದ್ದರು. ಈಗ 11 ಬಾರಿಗೆ ಧ್ವಜಾರೋಹಣ ಮಾಡುವ ಮೂಲಕ ನೆಹರು ಇಂದಿರಾ ಬಳಿಕ ಮೋದಿ ಅತಿ ಹೆಚ್ಚು ಬಾರಿ ಧ್ವಜಾರೋಹಣ ಮಾಡುತ್ತಿದ್ದಾರೆ.

ವಿಕಸಿತ ಭಾರತ ಥೀಮ್

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತಿಸುವ ಸರ್ಕಾರದ ದೃಷ್ಟಿಕೋನವನ್ನು ವಿಕಸಿತ್ ಭಾರತದ ಬಗ್ಗೆ ಮೋದಿ ಮಾತಮಾಡಲಿದ್ದಾರೆ. ಕೆಂಪು ಕೋಟೆಯ ಮೇಲೆ ನಿಂತು ಅವರು ಈ ಬಗ್ಗೆ ಮಾತನಾಡಲಿದ್ದು ಶಿಕ್ಷಣ, ಆರೋಗ್ಯ ರಕ್ಷಣೆ, ಮೂಲಸೌಕರ್ಯ ಮತ್ತು ತಂತ್ರಜ್ಞಾನದಲ್ಲಿ ಸಮಗ್ರ ಅಭಿವೃದ್ಧಿಯ ಮೇಲೆ ಭಾಷಣ ಕೇಂದ್ರೀಕರಿಸಲಿದೆ ಎಂದು ಮೂಲಗಳು ಹೇಳಿವೆ.

ʼಹರ್ ಘರ್ ತಿರಂಗʼ ‘ಏಕ್ ಪೇಡ್ ಮಾ ಕೆ ನಾಮ್’
ಅಭಿಯಾನ

ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಈಗಾಗಲೇ ಹರ್ ಘರ್ ತಿರಂಗ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಆಗಸ್ಟ್ 9ರಿಂದ 15ರವರೆಗೆ ಈ ಕಾರ್ಯಕ್ರಮ ನಡೆಯುತ್ತಿದೆ. ಈ ಅಭಿಯಾನ ಪ್ರತಿಯೊಬ್ಬ ಭಾರತೀಯನನ್ನು ರಾಷ್ಟ್ರಧ್ವಜವನ್ನು ಹಾರಿಸಲು ಪ್ರೋತ್ಸಾಹಿಸುವ ಮೂಲಕ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಸ್ವಾತಂತ್ರ್ಯ ದಿನಾಚರಣೆಯ ಜೊತೆಗೆ, ರಕ್ಷಣಾ ಸಚಿವಾಲಯವು ಏಕ್ ಪೇಡ್ ಮಾ ಕೆ ನಾಮ್ ತಾಯಿಯ ಹೆಸರಲ್ಲಿ ಒಂದು ಮರ ಅಭಿಯಾನದ ಅಡಿಯಲ್ಲಿ ರಾಷ್ಟ್ರವ್ಯಾಪಿ ಮರ ನೆಡುವ ಅಭಿಯಾನವನ್ನು ಪ್ರಾರಂಭಿಸಿದೆ.

ಭಯೋತ್ಪಾದಕರ ಕರಿ ನೆರಳು

ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗೆ ಭಯೋತ್ಪಾದಕರ ಕರಿ ನೆರಳು ಬಿದ್ದಿದೆ. ದೆಹಲಿ ಅಥಾವ ಪಂಜಾಬ್ ನಲ್ಲಿ ದಾಳಿ ನಡೆಯಬಹುದು ಎನ್ನುವ ಎಚ್ಚರಿಕೆಯನ್ನು ಗುಪ್ತಚರ ಇಲಾಖೆಯಿಂದ ನೀಡಿದೆ. ಜಮ್ಮು ಕಾಶ್ಮೀರ ಮೂಲದ ಭಯೋತ್ಪಾದಕ ಸಂಘಟನೆಯಿಂದ ಒಬ್ಬರು ಅಥಾವ ಇಬ್ಬರಿಂದ ದಾಳಿ ನಡೆಯಬಹುದು, ಕಥುವಾ ಗಡಿಯಲ್ಲಿರುವ ಹಳ್ಳಿಯೊಂದರಲ್ಲಿ ಶಸ್ತ್ರಾಸ್ತ್ರಗಳೊಂದಿಗೆ ಇವರ ಚಲನವಲನವನ್ನು ಗಮನಿಸಲಾಗಿದೆ ಹೀಗಾಗೀ ಎಚ್ಚರಿಕಡ ವಹಿಸಿ ಎಂದು ಸೂಚನೆ ನೀಡಲಾಗಿದೆ.

ಕೆಂಪುಕೋಟೆಯ ಸುತ್ತ ಹೆಚ್ಚಿದ ಭದ್ರತೆ

ಗುಪ್ತಚರ ಇಲಾಖೆ ಎಚ್ಚರಿಕೆ ಬೆನ್ನಲೆ ದೆಹಲಿಯ ಕೆಂಪುಕೋಟೆಯ ಸುತ್ತ ಹೈಅಲರ್ಟ್ ಘೋಷಿಸಿದೆ. ಕೆಂಪು ಕೋಟೆಯ ಸುತ್ತ ನಾಲ್ಕು ಹಂತದ ಭದ್ರತೆ ನಿಯೋಜಿಸಿದ್ದು ಎಸ್‌ಪಿಸಿ ಇದರ ನೇತೃತ್ವ ತೆಗೆದುಕೊಂಡಿದೆ. ಇದರ ಜೊತೆಗೆ ಶಾರ್ಪ್ ಶೂಟರ್ ಗಳನ್ನು ಎತ್ತರ ಸ್ಥಳಗಳಲ್ಲಿ ನಿಯೋಜನೆ ಮಾಡಿದ್ದು ಚಾಂದನಿ ಚೌಕ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಪರಿಶೀಲಿಸಿ ಪ್ರಮುಖ ಸ್ಥಳಗಳಲ್ಲಿ ಉನ್ನತ ಗುಣಮಟ್ಟದ ಸಿಸಿ ಟಿವಿ ಕ್ಯಾಮೇರಾ ಅಳವಡಿಸಲಾಗಿದೆ‌.

700 ಅಧಿಕ ಎಐ ತಂತ್ರಜ್ಞಾನ ಹೊಂದಿರುವ ಕ್ಯಾಮೇರಾ ಅಳವಡಿಕೆ
2000 ಅಧಿಕ ಹೆಚ್‌ಡಿ ಸಿಸಿಟಿವಿ ಅಳವಡಿಕೆ
ಕೇಂದ್ರದ ಮೀಸಲು ಪಡೆ ಸೇರಿ 10,000 ಅಧಿಕ ಭದ್ರತಾ ಸಿಬ್ಬಂದಿ ನೇಮಕ
ಕೆಂಪು ಕೋಟೆಯ ಸುತ್ತ ಆರು ಹಂತದಲ್ಲಿ ಭದ್ರತೆ
ಸೈಫ್ನರ್ ಗಳನ್ನು ಮತ್ತು ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ನಿಯೋಜಿಸಿದೆ
700 ಅಧಿಕ ಸೂಕ್ಷ್ಮ ಪ್ರದೇಶ ಗುರುತಿಸಿದ್ದು, ಹೋಟೇಲ್ ಗೆಸ್ಟ್ ಹೌಸ್ ಗಳ ಪರಿಶೀಲನೆ ನಡೆಸಿದೆ

Previous Post
ಅಂಡಾಣು, ವೀರ್ಯ ದಾನಿಗೆ ಮಗುವಿನ ಮೇಲೆ ಹಕ್ಕಿಲ್ಲ: ಕೋರ್ಟ್
Next Post
ಬಿಜೆಪಿಯವರು ನೂರು ಜನ್ಮ ಎತ್ತಿ ಬಂದರೂ ಗ್ಯಾರಂಟಿ ಯೋಜನೆ ನಿಲ್ಲುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

Recent News