ಇಂದು ರಾಜ್ಯ ಕಾಂಗ್ರೇಸ್ ಎರಡನೇ ಪಟ್ಟಿ ಬಿಡುಗಡೆ 17 ಕ್ಕೆ ಗ್ರೀನ್ ಸಿಗ್ನಲ್, ಕಗ್ಗಾಂಟಾದ 4 ಕ್ಷೇತ್ರಗಳು

ಇಂದು ರಾಜ್ಯ ಕಾಂಗ್ರೇಸ್ ಎರಡನೇ ಪಟ್ಟಿ ಬಿಡುಗಡೆ 17 ಕ್ಕೆ ಗ್ರೀನ್ ಸಿಗ್ನಲ್, ಕಗ್ಗಾಂಟಾದ 4 ಕ್ಷೇತ್ರಗಳು

ನವದೆಹಲಿ : ಕಾಂಗ್ರೇಸ್ ಟಿಕೆಟ್ ಹಂಚಿಕೆ ಕಗ್ಗಂಟು ಮುಂದುವರಿದಿದೆ, ಬಾಕಿ ಉಳಿದ 21 ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳನ್ನು ಅಂತಿಮಗೊಳಿಸಿರುವ ಕಾಂಗ್ರೇಸ್ ನಾಯಕರು ನಾಲ್ಕು ಸ್ಥಾನಗಳಿಗ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹರ ಸಾಹಸ ಪಡುತ್ತಿದ್ದಾರೆ. ಮಂಗಳವಾರದ ಸಭೆಯಲ್ಲಿ 17 ಹೆಸರುಗಳು ಅಂತಿಮವಾಗಿದ್ದು ಬುಧವಾರ ನಾಲ್ಕು ಕ್ಷೇತ್ರಗಳಿಗೆ ಅಂತಿಮಗೊಳಿಸುವಲ್ಲಿ ವಿಫಲರಾದರು. ಈ‌ ನಡುವೆ 17 ಅಭ್ಯರ್ಥಿಗಳ ಹೆಸರು ಇಂದು ಘೋಷಣೆಯಾಗುವ ಸಾಧ್ಯತೆ ಇದೆ.

ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರ ಮತ್ತು ಬಳ್ಳಾರಿ ಕ್ಷೇತ್ರಗಳಲ್ಲಿ ಗೊಂದಲ ಮುಂದುವರಿದಿದೆ. ಕೋಲಾರ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ದೆಹಲಿಯ ಡಿ‌ಕೆ ಸುರೇಶ್ ನಿವಾಸದಲ್ಲಿ ಮಹತ್ವದ ಸಭೆ ನಡೆಸಲಾಯಿತು. ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ಕೋಲಾರ ನಾಯಕರಾದ ಕೆ. ಹೆಚ್.ಮುನಿಯಪ್ಪ, ರಮೇಶ್ ಕುಮಾರ್, ಎಲ್. ಹನುಂತಯ್ಯ, ಸಚಿವ ಸುಧಾಕರ್, ಕೊತ್ತನೂರು ಮಂಜು ಭಾಗಿಯಾಗಿ ಚರ್ಚೆ ನಡೆಸಿದರು.

ತಮ್ಮ ಅಳಿಯ ಚಿಕ್ಕ ಪೆದ್ದಣ್ಣನಿಗೆ ಟಿಕೆಟ್ ನೀಡುವಂತೆ ಸಚಿವ ಕೆಹೆಚ್ ಮುನಿಯಪ್ಪ ಪಟ್ಟು ಹಿಡಿದಿದ್ದಾರೆ. ಆದರೆ ಇತರೆ ಎಲ್ಲ ಶಾಸಕರು ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರದಲ್ಲೂ ಎರಡು ಗುಂಪುಗಳ ನಡುವೆ ತೀವ್ರ ಪೈಪೊಟಿ ಏರ್ಪಟ್ಟಿದ್ದು ಯಾರಿಗೆ ಟಿಕೆಟ್ ನೀಡಬೇಕು ಎನ್ನುವ ಗೊಂದಲದಲ್ಲಿದ್ದಾರೆ ವರಿಷ್ಠರು.

ಈ ಹಿನ್ನಲೆ ಬೆಂಗಳೂರಿಗೆ ತೆರಳಿ ಮತ್ತೊಂದು ಸಭೆ ನಡೆಸಲು ತಿರ್ಮಾನಿಸಿರುವ ನಾಯಕರು ಎಲ್ಲ ನಾಯಕರಿಗೆ ಬೆಂಗಳೂರಿಗೆ ಬುಲಾವ್ ಕೊಟ್ಟಿದ್ದಾರೆ. ಶುಕ್ರವಾರ ಉಸ್ತುವಾರಿ ರಣದೀಪ್ ಸುರ್ಜೆವಾಲ‌ ಬೆಂಗಳೂರಿಗೆ ತೆರಳಿಲಿದ್ದು ಅಂದು ಸಿಎಂ ಡಿಸಿಎಂ ಸಮ್ಮುಖದಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲು ತಿರ್ಮಾನಿಸಿದೆ. ಬಳಿಕ ಹೈಕಮಾಂಡ್ ಗೆ ಪಟ್ಟಿ ಕಳಿಹಿಸಲಿದ್ದು ಬಳಿಕ ನಾಲ್ಕು ಕ್ಷೇತ್ರಗಳ ಪಟ್ಟಿ ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಇಂದು 17 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೇಸ್ ಬಿಡುಗಡೆ ಮಾಡಲಿದೆ.

ಇನ್ನು ಈ ಬಗ್ಗೆ ಮಾತನಾಡಿದರು ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್, ಒಟ್ಟು 17 ಅಭ್ಯರ್ಥಿಗಳನ್ನ ಅಂತಿಮಗೊಳಿಸಲಾಗಿದೆ ಇನ್ನು ನಾಲ್ಕು ಕ್ಷೇತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ ಬೆಂಗಳೂರಿಗೆ ಹೋಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಾಲ್ಕು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುತ್ತದೆ. ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು 5 ಹೆಣ್ಣು ಮಕ್ಕಳಿಗೆ ಟಿಕೆಟ್ ನೀಡಿದ್ದೇವೆ ಜೊತೆಗೆ ಶೇಕಡ 50ರಷ್ಟು ಹೆಚ್ಚು ಟಿಕೆಟ್‌ಗಳನ್ನು ಯುವಕರಿಗೆ ನೀಡಿದ್ದೇವೆ ಎಂದರು.

ಕೋಲಾರ ಲೋಕಸಭೆಯಲ್ಲಿ ಗೊಂದಲ ಇರುವ ವಿಚಾರ ಬಗ್ಗೆ ಮಾತನಾಡಿ ಎರಡು ಕಡೆಯ ಬೆಂಬಲಿಗರು ಬಂದು ಭೇಟಿಯನ್ನ ಮಾಡಿದ್ದಾರೆ ಅಂತಿಮವಾಗಿ ನಾವು ನಿರ್ಧಾರವನ್ನ ಕೈಗೊಳ್ಳುತ್ತೇವೆ. ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ವೀಣಾ ಕಾಶಪ್ಪನವರ ಹೆಸರು ಸ್ಕ್ರೀನಿಂಗ್ ಕಮಿಟಿಯಲ್ಲಿ ಕೈಬಿಟ್ಟಿದ್ದಾರೆ ಎಂಬ ವಿಚಾರ ಮಾತನಾಡಿ ಸ್ಕ್ರೀನಿಂಗ್ ಕಮಿಟಿಯಲ್ಲಿ ಅವರ ಹೆಸರು ಇತ್ತು ಅದು ಅವರಿಗೆ ಗೊತ್ತಿಲ್ಲ ಎಂದರು‌. ಕಾಂಗ್ರೆಸ್ ನಿಂದ ಬಿಜೆಪಿ ನಾಯಕರಿಗೆ ಗಾಳ ಹಾಕುತ್ತಿರುವ ಬಗ್ಗೆ ಬಹಿರಂಗವಾಗಿ ಮಾತನಾಡಲು ಮಾತನಾಡಲು ಸಾಧ್ಯವಿಲ್ಲ ಹೈಕಮಾಂಡ್ ಜೊತೆಗೆ ಚರ್ಚಿಸಿ ಮುಂದಿನ ನಿರ್ಧಾರ ಎಂದರು‌.

Previous Post
ಬೆಂಗಳೂರು ಸೆಂಟ್ರಲ್ ಟಿಕೆಟ್ ಗೆ ಭರ್ತೋಲಮ್ ಲಾಬಿ
Next Post
ಜಾಗೃತ ನಾಗರಿಕರು ಕರ್ನಾಟಕ ವತಿಯಿಂದ ಚುನಾವಣಾ ಆಯುಕ್ತರಿಗೆ ದೂರು

Recent News