ಕೇಜ್ರಿವಾಲ್ ಮಧ್ಯಂತರ ಜಾಮೀನು ಅರ್ಜಿ ಪರಿಗಣಿಸಬಹುದಾಗಿದೆ – ಸುಪ್ರೀಂ

ಕೇಜ್ರಿವಾಲ್ ಮಧ್ಯಂತರ ಜಾಮೀನು ಅರ್ಜಿ ಪರಿಗಣಿಸಬಹುದಾಗಿದೆ – ಸುಪ್ರೀಂ

ನವದೆಹಲಿ : ಪ್ರಕರಣದ ತನಿಖೆ ವಿಳಂಬವಾಗುವುದಾದರೆ ಲೋಕಸಭೆ ಚುನಾವಣೆ ಉದ್ದೇಶಗಳ ಹಿನ್ನಲೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾತ ವ್ಯಕ್ತಪಡಿಸಿದೆ.

ಹೊಸ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕೊಳ್ಳಪಟ್ಟ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ ಸಂಜೀವ್ ಖನ್ನಾ ನೇತೃತ್ವದ ದ್ವಿ ಸದಸ್ಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸುಧೀರ್ಘ ವಿಚಾರಣೆ ಆಲಿಸಿದ ಪೀಠ ಇಂದು ವಿಚಾರಣೆ ಅಂತ್ಯಗೊಳಿಸಲು ಸಾಧ್ಯವಿಲ್ಲ ಮಂಗಳವಾರ ಈ ಬಗ್ಗೆ ವಿಚಾರಣೆ ಮುಂದುವರಿಸುತ್ತೇವೆ, ನಾವು ಮಧ್ಯಂತರ ಜಾಮೀನಿನ ಪ್ರಶ್ನೆಯನ್ನು ಪರಿಗಣಿಸಬಹುದು. ಚುನಾವಣೆಯ ಕಾರಣದಿಂದಾಗಿ ನಾವು ಆ ಭಾಗದಲ್ಲಿ ಕೇಳಬಹುದು ಎಂದು ನ್ಯಾಯಮೂರ್ತಿ ಖನ್ನಾ ಅವರು ವಾದವನ್ನು ಮುಕ್ತಾಯಗೊಳಿಸುವಾಗ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರಿಗೆ ತಿಳಿಸಿದರು.

ಇದಕ್ಕೂ ಮೊದಲು ಕೇಜ್ರಿವಾಲ್ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 50 ರ ಅಡಿಯಲ್ಲಿ ಸಮನ್ಸ್ ಪಡೆದ ವ್ಯಕ್ತಿಯು ಸ್ವಯಂಚಾಲಿತವಾಗಿ ಆರೋಪಿಯ ಪಾತ್ರವನ್ನು ವಹಿಸುವುದಿಲ್ಲ ಎಂಬುದು ಖುದ್ದು ಇಡಿ ನಿಲುವಾಗಿದೆ‌. ಮಾರ್ಚ್ 16 ರಂದು ಇಡಿ ನೀಡಿದ ಸಮನ್ಸ್ ಪ್ರಕಾರ, ಕೇಜ್ರಿವಾಲ್ ಆರೋಪಿಯಾಗಿರಲಿಲ್ಲ, ಮಾರ್ಚ್ 16 ರವರೆಗೆ ಆರೋಪಿ ಸ್ಥಾನದಲ್ಲಿಲ್ಲ ಇರದ ಕೇಜ್ರಿವಾಲ್ ಏಕಾಏಕಿ ಮಾರ್ಚ್ 21 ರಂದು ಅವರನ್ನು ಬಂಧಿಸಿದಾಗ ಅವರು ಆರೋಪಿ ಹೇಗಾದರು. ಹೇಳಲು ಇಡಿ ಬಳಿ ಯಾವುದೇ ಹೊಸ ವಿಷಯಗಳಿಲ್ಲ ಎಂದು ಹೇಳಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಸಿಬಿಐ ಪರ ವಕೀಲರು ವಾದ ಮಂಡಿಸಿಬೇಕಿದೆ. ಆದರೆ ಜಾಮೀನು ನೀಡುವ ಸುಪ್ರೀಂಕೋರ್ಟ್ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಎಎಸ್‌ಜಿ ರಾಜು, ಸುಪ್ರೀಂ ಕೋರ್ಟ್‌ನಿಂದ ಜಾಮೀನು ಪಡೆದ ನಂತರ ಎಎಪಿ ಸಂಸದ ಸಂಜಯ್ ಸಿಂಗ್ ನೀಡಿದ ಹೇಳಿಕೆಗಳನ್ನು ಗಮನಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆಯಾಯಿತು.

Previous Post
ಗಂಡನ ಸಾಲಕ್ಕೆ ಹೆಂಡತಿ ಅಡ ಇಟ್ಟುಕೊಂಡ ಬ್ಯಾಂಕ್
Next Post
ಗಾಂಧಿ ಕುಟುಂಬದ ಭದ್ರಕೋಟೆ ರಾಯ್ ಬರೇಲಿ

Recent News