ಚುನಾವಣಾ ಖರ್ಚಿಗೆ ಹಣವಿಲ್ಲ, ಪಕ್ಷವೂ ಕೊಡ್ತಿಲ್ಲ ಟಿಕೆಟ್ ಮರಳಿಸಲು ನಿರ್ಧರಿಸಿದ ಕೈ ಅಭ್ಯರ್ಥಿ

ಚುನಾವಣಾ ಖರ್ಚಿಗೆ ಹಣವಿಲ್ಲ, ಪಕ್ಷವೂ ಕೊಡ್ತಿಲ್ಲ ಟಿಕೆಟ್ ಮರಳಿಸಲು ನಿರ್ಧರಿಸಿದ ಕೈ ಅಭ್ಯರ್ಥಿ

ಭುವನೇಶ್ವರ್ : ಚುನಾವಣಾ ಪ್ರಚಾರಗಳಿಗೆ ಹಣಕಾಸಿನ ನೆರವು ನೀಡಿಲ್ಲ ಎಂದು ಆರೋಪಿಸಿರುವ ಒಡಿಶಾದ ಪುರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುಚರಿತಾ ಮೊಹಂತಿ ತಮ್ಮ ಟಿಕೆಟ್ ಅನ್ನು ಪಕ್ಷಕ್ಕೆ ಹಿಂತಿರುಗಿಸಲು ನಿರ್ಧರಿಸಿದ್ದಾರೆ. ಇದೇ ವೇಳೆ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅವರು, ನನಗೆ ಪಕ್ಷದಿಂದ ಹಣ ನೀಡಲು ನಿರಾಕರಿಸಲಾಗಿದೆ, ವಿಧಾನಸಭೆ ಕ್ಷೇತ್ರಗಳಲ್ಲಿ ದುರ್ಬಲ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ, ಬಿಜೆಪಿ ಮತ್ತು ಬಿಜೆಡಿ ಹಣದ ಬೆಟ್ಟದ ಮೇಲೆ ಕುಳಿತಿವೆ. ಸಾರ್ವಜನಿಕ ದೇಣಿಗೆ ಅಭಿಯಾನದಂತಹ ಪ್ರಯತ್ನಗಳು ಖರ್ಚುಗಳನ್ನು ಕಡಿಮೆ ಮಾಡಿದರೂ, ಆರ್ಥಿಕವಾಗಿ ಹೆಣಗಾಡುವ ಪರಿಸ್ಥಿತಿ ಬಂದಿದೆ, ಪರಿಣಾಮಕಾರಿ ಪ್ರಚಾರವನ್ನು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

10 ವರ್ಷಗಳ ಹಿಂದೆ ಚುನಾವಣಾ ರಾಜಕೀಯಕ್ಕೆ ಪ್ರವೇಶಿಸಿದ ಸಂಬಳದ ವೃತ್ತಿಪರ ಪತ್ರಕರ್ತೆಯಾಗಿದ್ದೆ. ಪುರಿಯಲ್ಲಿ ಪ್ರಚಾರಕ್ಕೆ ನನ್ನ ಬಳಿ ಇರುವ ಎಲ್ಲವನ್ನೂ ನೀಡಿದ್ದೇನೆ. ಪ್ರಗತಿಪರ ರಾಜಕೀಯಕ್ಕಾಗಿ ನನ್ನ ಅಭಿಯಾನವನ್ನು ಬೆಂಬಲಿಸಲು ನಾನು ಸಾರ್ವಜನಿಕ ದೇಣಿಗೆ ಅಭಿಯಾನವನ್ನು ಪ್ರಯತ್ನಿಸಿದೆ, ಹೆಚ್ಚು ಯಶಸ್ವಿಯಾಗಲಿಲ್ಲ. ನಾನು ಯೋಜಿತ ಪ್ರಚಾರದ ವೆಚ್ಚವನ್ನು ಕನಿಷ್ಠಕ್ಕೆ ಕಡಿತಗೊಳಿಸಲು ಪ್ರಯತ್ನಿಸಿದೆ.

ಮೇ 3 ರಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ಈ ಬಗ್ಗೆ ಪತ್ರ ಬರೆದೆ. ರಾಜ್ಯದ ಕಾಂಗ್ರೆಸ್ ಮುಖ್ಯಸ್ಥ ಅಜೋಯ್ ಕುಮಾರ್ ನಿಮ್ಮ ಖರ್ಚುಗಳನ್ನು ನೀವೇ ನಿಭಾಯಿಸಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ‌. ನನಗೆ ಜನಪರ ಪ್ರಚಾರ ಬೇಕಿತ್ತು, ಆದರೆ ಹಣದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ, ಇದಕ್ಕೆ ಪಕ್ಷವೂ ಜವಾಬ್ದಾರರಲ್ಲ ಬಿಜೆಪಿ ಸರ್ಕಾರವು ಕಾಂಗ್ರೇಸ್ ಪಕ್ಷವನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿದರು.

ಪುರಿಯಲ್ಲಿನ ಗೆಲುವಿನ ಪ್ರಚಾರಕ್ಕೆ ನಿಧಿಯ ಕೊರತೆ ಮಾತ್ರ ನಮ್ಮನ್ನು ತಡೆಯುತ್ತಿದೆ ಎಂಬುದು ಸ್ಪಷ್ಟವಾಗಿದೆ. ಪಕ್ಷದ ನಿಧಿಯಿಲ್ಲದೆ ನಾನು ಚುನಾವಣಾ ಸ್ಪರ್ಧಿಸಲು ಕಷ್ಟವಾಗಲಿದೆ ಎಂದು ಹೇಳಲು ವಿಷಾದಿಸುತ್ತೇನೆ, ನನಗೆ ಪ್ರಚಾರವನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಆದ್ದರಿಂದ ನಾನು ಕಾಂಗ್ರೇಸ್ ನೀಡಿದ ಟಿಕೆಟ್ ಅನ್ನು ಹಿಂತಿರುಗಿಸುತ್ತೇನೆ ಎಂದು ಹೇಳಿದರು‌.

Previous Post
ಜಾಗತಿಕ ವೇದಿಕೆಯಲ್ಲಿ ಭಾರತವಲ್ಲ ಈಗ ಪಾಕಿಸ್ತಾನ ಅಳುತ್ತಿದೆ ಕಾಂಗ್ರೇಸ್‌ನದು ಹೇಡಿ ಸರ್ಕಾರ ಎಂದ ಪ್ರಧಾನಿ ಮೋದಿ
Next Post
ಬಿಜೆಪಿ ಸೇರ್ಪಡೆಯಾದ ಅರವಿಂದರ್ ಸಿಂಗ್ ಲವ್ಲಿ

Recent News