ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸಲು CWMA ಸೂಚನೆ

ತಮಿಳುನಾಡಿಗೆ 2.5 ಟಿಎಂಸಿ ನೀರು ಹರಿಸಲು CWMA ಸೂಚನೆ

ನವದೆಹಲಿ : ಕಾವೇರಿ ಕೊಳ್ಳದ ಜಲಾಶಯಗಳಿಂದ 2.5 ಟಿಎಂಸಿ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಕರ್ನಾಟಕಕ್ಕೆ ಸೂಚನೆ ನೀಡಿದೆ. ಇಂದು ನಡೆದ ಸಭೆಯಲ್ಲಿ ಪರಿಸರ ಬಳಕೆಗಾಗಿ ನೀರು ಹರಿಸುವಂತೆ ನಿರ್ದೇಶನ ನೀಡಿದ್ದು, ಬಾಕಿ ಉಳಿಸಿಕೊಂಡ ನೀರು ಹರಿಸುವ ಬಗ್ಗೆ ಯಾವುದೇ ತಿರ್ಮಾನ ಕೈಗೊಂಡಿಲ್ಲ.

ದೆಹಲಿಯಲ್ಲಿ ನಡೆದ CWMA ಸಭೆಯಲ್ಲಿ ವಾದಿಸಿದ ತಮಿಳುನಾಡು ಪರ ಅಧಿಕಾರಿಗಳು, ಮೇ ತಿಂಗಳಲ್ಲಿ 2.5 ಟಿಎಂಸಿ ನೀರು ಹರಿಸಬೇಕು ಈಗಾಗಲೇ 1.5 ಟಿಎಂಸಿಯಷ್ಟು ನೀರು ಬಂದಿದೆ ಬಾಕಿ ಒಂದು ಟಿಎಂಸಿ ನೀರು ಹರಿಸಲು ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಪರ ಅಧಿಕಾರಿಗಳು ಮನವಿ ಮಾಡಿದರು.

ಅವರ ನಾಲ್ಕು ಪ್ರಮುಖ ಅಣೆಕಟ್ಟುಗಳಿಂದ ಕುಡಿಯುವ ನೀರಿನ ಅಗತ್ಯತೆಗಳಿಗೆ ಸಾಕಷ್ಟು ನೀರು ಇದೆ ಎಂಬುದು ಕರ್ನಾಟಕ ಸರ್ಕಾರದ ವಾದಗಳಿಂದ ಸ್ಪಷ್ಟವಾಗಿದೆ. ಈಗಿರುವಂತೆ ಮುಖ್ಯ ಅಣೆಕಟ್ಟುಗಳಲ್ಲಿ 19.17 ಟಿಎಂಸಿ ನೀರಿದ್ದು, ಕುಡಿಯುವ ಅಗತ್ಯಕ್ಕೆ ಕೇವಲ ನಾಲ್ಕು ಟಿಎಂಸಿ ನೀರು ಮಾತ್ರ ಬೇಕಾಗುತ್ತದೆ, ಕಳೆದ ವರ್ಷಕ್ಕಿಂತ ಪರಿಸ್ಥಿತಿ ಈ ಬಾರಿ ಭಿನ್ನವಾಗಿದೆ ಈ ವರ್ಷ ಸಾಕಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಬಾಕಿ ಉಳಿದಿರುವ ಆರು ಟಿಎಂಸಿ ನೀರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ಸರ್ಕಾರ ವಾದಿಸಿದೆ.

ಆದರೆ ಕರ್ನಾಟಕದ ಪರ ಅಧಿಕಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಮಳೆಯ ಬಗ್ಗೆ ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಪರಿಸರಕ್ಕಾಗಿ ಬಾಕಿ ನೀರನ್ನು ಬಿಡಲು ಆಕ್ಷೇಪಗಳಿಲ್ಲ ಬದಲಿಗೆ ಬಾಕಿ ನೀರು ಹರಿಸಲು ಈ ಹಂತದಲ್ಲಿ ಸಾಧ್ಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಅಂತಿಮವಾಗಿ CWMA ಸದ್ಯ ಪರಿಸರ ಹರಿವು ಖಚಿತಪಡಿಸಿಕೊಳ್ಳಿ ಬಾಕಿ ನೀರಿನ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿತು‌.

Previous Post
ಫೋನ್ ಟ್ಯಾಪ್ ಮಾಡಲು ಕುಮಾರಸ್ವಾಮಿ, ರೇವಣ್ಣ ಭಯೋತ್ಪಾದಕರೇ: ಡಿಸಿಎಂ ಡಿ. ಕೆ. ಶಿವಕುಮಾರ್ ಪ್ರಶ್ನೆ
Next Post
ಮಮತಾ ಬ್ಯಾನರ್ಜಿಗೆ ನಿಮ್ಮ ಬೆಲೆ ಎಷ್ಟು ಎಂದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ 24 ಗಂಟೆ ಪ್ರಚಾರದಿಂದ ನಿಷೇಧ

Recent News