ನಿಮಗೆ ವರ್ಷಕ್ಕೊಬ್ಬ ಪ್ರಧಾನಿ ಬೇಕೋ, ಓರ್ವ ವ್ಯಕ್ತಿ ಪಧಾನಿಯಾಗಬೇಕು: ‘ನಮೋ’ ಪ್ರಶ್ನೆ

ನಿಮಗೆ ವರ್ಷಕ್ಕೊಬ್ಬ ಪ್ರಧಾನಿ ಬೇಕೋ, ಓರ್ವ ವ್ಯಕ್ತಿ ಪಧಾನಿಯಾಗಬೇಕು: ‘ನಮೋ’ ಪ್ರಶ್ನೆ

ದಾವಣಗೆರೆ, ಏಪ್ರಿಲ್ 28: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಇಲ್ಲಿ ಎರಡೂವರೆ ವರ್ಷ ಒಬ್ಬೊಬ್ಬರು ಆಡಳಿತ ಮಾಡಬೇಕು ಎಂಬುದಿದೆ. ಈ ಚುನಾವಣೆಯಲ್ಲಿ ಇಂಡಿ ಒಕ್ಕೂಟಕ್ಕೆ ಅಧಿಕಾರ ಕೊಟ್ಟರೆ ವರ್ಷಕ್ಕೊಬ್ಬರು ಪ್ರಧಾನಿ ಆಗಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ದಾವಣಗೆರೆಯಲ್ಲಿ ಬೃಹತ್ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಇಂಡಿ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಸ್ಪಷ್ಟತೆಯೇ ಇಲ್ಲ. ಎಲ್ಲರನ್ನು ಸಂತೈಸಲು ಈ ಮೈತ್ರಿಕೂಟದಲ್ಲಿ ವರ್ಷಕ್ಕೊಬ್ಬರನ್ನು ಪ್ರಧಾನಿ ಮಾಡುವ ಚಿಂತನೆ ಇದೆ. ಇಂಥವರಿಗಾಗಿ ನೀವು ಮತವನ್ನು ಹಾಳು ಮಾಡಬೇಕೇ? ಮೌಲ್ಯಯುತ ಮತವನ್ನು ಹಾಳು ಮಾಡಬೇಡಿ ಎಂದು ಅವರು ಮನವಿ ಮಾಡಿದರು.

ನೀವು ಇಂಡಿಯಾ ಮೈತ್ರಿಕೂಟಕ್ಕೆ ಅವಕಾಶ, ಅಧಿಕಾರ ಕೊಟ್ಟರೆ ದೇಶಕ್ಕೆ ವರ್ಷಕ್ಕೆ ಒಬ್ಬರು ಪ್ರಧಾನಿ ಆಗುತ್ತಾರೆ. ನಿಮಗೆ ಐದು ವರ್ಷಕ್ಕೆ ಐದು ಪ್ರಧಾನಿ ಮಂತ್ರಿ ಬೇಕಾ?, ಇಲ್ಲ ಪೂರ್ಣ ಅವಧಿಗೆ ಒಬ್ಬರು ಪ್ರಧಾನಿಯಾಗಬೇಕಾ? ಎಂದು ನರೇಂದ್ರ ಮೋದಿ ಪ್ರಶ್ನಿಸಿದರು. ಬಿಜೆಪಿ ಯೋಜನೆ ನಿಲ್ಲಿಸಿದ ಕಾಂಗ್ರೆಸ್‌: ನಮೋ ಕಿಡಿ ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ ಎಸ್‌ಸಿ, ಎಸ್‌ಟಿ ಮೀಸಲಿಟ್ಟ 11 ಸಾವಿರ ಕೋಟಿ ಹಣವನ್ನು ಬೇರೆಡೆ ವರ್ಗಾಯಿಸಿದೆ. ಕಿಸಾನ್ ಸಮ್ಮಾನ್ ನಿಧಿಯಡಿ ಬಿಜೆಪಿ ಸರಕಾರ 4 ಸಾವಿರ ಕೊಡುತ್ತಿತ್ತು. ಆ 4 ಸಾವಿರ ಕೊಡುವುದನ್ನು ಕಾಂಗ್ರೆಸ್ ಸರ್ಕಾರ ನಿಲ್ಲಿಸಿದೆ. ರಾಜ್ಯದ ರೈತರಿಗೆ ಬರೀ 6,000 ಸಿಗುತ್ತಿದೆ. ಕಾಂಗ್ರೆಸ್ಸಿನವರಿಗೆ ರೈತರ ಮೇಲೆ ದ್ವೇಷ ಇದೆಯೇ? ಎಂದು ಅವರು ಪ್ರಶ್ನಿಸಿದರು. ಪಿತ್ರಾರ್ಜಿ ಆಸ್ತಿ ತೆರಿಗೆ ಜಾರಿಗೆ ಕಾಂಗ್ರೆಸ್ ಚಿಂತನೆ? ಕಾಂಗ್ರೆಸ್ ನಾಯಕರು ಪಿತ್ರಾರ್ಜಿತ ಆಸ್ತಿಗೂ ತೆರಿಗೆ ಕಟ್ಟುವಂತೆ ಸೂಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ನೀವೂ ಕೂಡಿಟ್ಟ ಹಣದ ಮೇಲೆ ಶೇ 55 ತೆರಿಗೆ ಕಟ್ಟಿಸಿಕೊಳ್ಳುವ ಚಿಂತನೆಯಲ್ಲಿ ಕಾಂಗ್ರೆಸ್ ಇದೆ. ಆ ಹಣವನ್ನು ಬೇರೆಯವರಿಗೆ ಹಂಚುವ ಪ್ರಯತ್ನ ಇವರದ್ದು ಎಂದು ಪ್ರಧಾನಿ ವಿಶ್ಲೇಷಿಸಿದರು.

ಕಾನೂನು- ಸುವ್ಯವಸ್ಥೆ ಇಲ್ಲದಿದ್ದರೆ ಬಂಡವಾಳ ಹೂಡಿಕೆ ಬರಲು ಸಾಧ್ಯವೇ? ಕರ್ನಾಟಕದ ಕಾನೂನು- ಸುವ್ಯವಸ್ಥೆ ಗಂಭೀರ ಸ್ಥಿತಿಗೆ ತಲುಪಿದೆ. ರಾಜ್ಯದ ನಾಗರಿಕರು ಅಸುರಕ್ಷಿತತೆಯ ಚಿಂತೆಯಲ್ಲಿದ್ದಾರೆ. ಕೆಫೆಯಲ್ಲಿ ಬಾಂಬ್ ಸ್ಫೋಟವಾದರೆ ಗ್ಯಾಸ್ ಸಿಲಿಂಡರ್ ಸ್ಫೋಟ ಎನ್ನುತ್ತಾರೆ.

ಅಪರಾಧ ಘಟನೆಗಳಲ್ಲಿ ಕಾಂಗ್ರೆಸ್ ವೋಟ್ ಬ್ಯಾಂಕ್ ಬಾಂಬ್ ಸ್ಪೋಟ ಬಿಸಿನೆಸ್ ಸಂಬಂಧ ವೈಷಮ್ಯ ಎನ್ನುತ್ತಾರೆ. ಹುಬ್ಬಳ್ಳಿಯಲ್ಲಿ ಕಾಲೇಜು ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿನಿ ಹತ್ಯೆ ನಡೆದಿದೆ. ಅದರಲ್ಲೂ ಕಾಂಗ್ರೆಸ್ ವೋಟ್‍ಬ್ಯಾಂಕ್ ಹುಡುಕಿತು ಎಂದು ಕಾಂಗ್ರೆಸ್ ಆಡಳಿತವನ್ನು ಟೀಕಿಸಿದರು.

ನೇಹಾ ಹತ್ಯೆ ಸಾಮಾನ್ಯ ಘಟನೆ ಅಲ್ಲ. ಪ್ರತಿಬಂಧಿತ ಪಿಎಫ್‍ಐ, ಎಸ್‍ಡಿಪಿಐ ಜೊತೆ ಕಾಂಗ್ರೆಸ್ ಪಕ್ಷ ಒಪ್ಪಂದ ಮಾಡಿಕೊಂಡಿದೆ ಎಂದು ಅವರು ಆರೋಪಿಸಿದರು. ಕರ್ನಾಟಕದ ಪ್ರತಿ ಕಡೆಯಿಂದ ನರೇಂದ್ರ ಮೋದಿ ಮತ್ತೊಮ್ಮೆ ಎಂಬ ಸ್ವರ ಕೇಳಿಸುತ್ತಿದೆ. ಕರ್ನಾಟಕದಲ್ಲಿ ಜೂನ್ 4ರಂದು ವಿಜೃಂಭಣೆಯಿಂದ ವಿಜಯೋತ್ಸವ ನಡೆಯಲಿದೆ. ಜನರಿಗಾಗಿ ನಾವು ಶಾಶ್ವತ ಗ್ಯಾರೆಂಟಿ ನೀಡಿದ್ದೇವೆ. ದಾವಣಗೆರೆಯಲ್ಲಿ ಬೆಣ್ಣೆದೋಸೆಯ ಸಂಭ್ರಮ ಇರಲಿದೆ. 2047ರ ವಿಕಸಿತ ಭಾರತದ ಸಂಕಲ್ಪ ದೇಶಕ್ಕಾಗಿ 24-7 ಗಂಟೆಗಳ ನಿರಂತರ ಕೆಲಸ ಮಾಡುತ್ತಿದ್ದು, 2047ರ ವಿಕಸಿತ ಭಾರತದ ಸಂಕಲ್ಪ ಬಿಜೆಪಿ ಹೊಂದಿದೆ. ಕರ್ನಾಟಕದಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿಯವರ ಪ್ರಯತ್ನವನ್ನು ಕಾಂಗ್ರೆಸ್ ಹಾಳು ಮಾಡಿದೆ ಎಂದು ಕುಟುಕಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೂತನ ಶಿಕ್ಷಣ ನೀತಿಗೆ (ಎನ್‍ಇಪಿ) ಬ್ರೇಕ್ ಹಾಕಿದೆ. ಇದರಿಂದ ಯುವಜನರಿಗೆ ದೊಡ್ಡ ನಷ್ಟ ಉಂಟಾಗಿದೆ. ರಾಜಕೀಯ ಮತಭೇದ ಇರಲಿ. ಆದರೆ ಯುವಜನರ ಭವಿಷ್ಯದ ಮೇಲೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಲ್ಲವೇ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಜಿ.ಎಂ.ಸಿದ್ದೇಶ್ವರ್, ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಸಂಸದರು, ಮಾಜಿ ಸಚಿವರು, ಶಾಸಕರು, ಜಿಲ್ಲಾಧ್ಯಕ್ಷರು, ಇನ್ನಿತರ ಮುಖಂಡರು ಪಾಲ್ಗೊಂಡಿದ್ದರು.

Previous Post
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಮಹಿಳೆಯೊಬ್ಬರು ರಾಜ್ಯ ಮಹಿಳಾ ಆಯೋಗಕ್ಕೆ ದೂರು
Next Post
ಇಡಿ ಬಂಧನ ಪ್ರಶ್ನಿಸಿ ಹೇಮಂತ್ ಸೂರೇನ್ ಅರ್ಜಿ ಇಡಿಗೆ ನೋಟಿಸ್, ಆದೇಶ ಪ್ರಕಟಿಸಲು ಹೈಕೋರ್ಟ್‌ಗೆ ನಿರ್ದೇಶನ

Recent News