ಪತಂಜಲಿ ಆಯುರ್ವೇದ್ ವಿರುದ್ಧದ ಕ್ರಮ ಕೈಗೊಳ್ಳದ ಉತ್ತರಾಖಂಡ ಸರ್ಕಾರಕ್ಕೆ ಚಾಟಿ

ಪತಂಜಲಿ ಆಯುರ್ವೇದ್ ವಿರುದ್ಧದ ಕ್ರಮ ಕೈಗೊಳ್ಳದ ಉತ್ತರಾಖಂಡ ಸರ್ಕಾರಕ್ಕೆ ಚಾಟಿ

ನವದೆಹಲಿ : ತಪ್ಪುದಾರಿಗೆಳೆಯುವ ಜಾಹೀರಾತು ಪ್ರಕರಣದಲ್ಲಿ ಪತಂಜಲಿ ಆಯುರ್ವೇದ್ ವಿರುದ್ಧದ ಕ್ರಮ ಕೈಗೊಳ್ಳದೆ ನಿಷ್ಕಿಯತೆ ತೋರಿದ ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರಕ್ಕೆ ಸುಪ್ರೀ‌ಂಕೋರ್ಟ್ ಚಾಟೀ ಬೀಸಿದೆ. ನ್ಯಾಯಲಯದ ಆದೇಶಗಳನ್ನು ಪರನಾನಿಗೆ ಪ್ರಾಧಿಕಾರ ಪಾಲಿಸುತ್ತಿಲ್ಲ ಎಂದು ಹೇಳಿದೆ.

ನ್ಯಾ. ಹಿಮಾ ಕ್ಲೊಹಿ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿತು‌. ಸರ್ಕಾರದ ಪರ ವಾದ ಮಂಡಿಸಿದ ವಕೀಲರು ಪತಂಜಲಿ ಮತ್ತು ಅದರ ಸಹೋದರ ಸಂಸ್ಥೆ ದಿವ್ಯಾ ಫಾರ್ಮಸಿಯ 14 ಉತ್ಪನ್ನಗಳ ಉತ್ಪಾದನಾ ಪರವಾನಗಿಗಳನ್ನು ಏಪ್ರಿಲ್ 15 ರಂದು “ತಕ್ಷಣದ ಪರಿಣಾಮ” ದೊಂದಿಗೆ ಅಮಾನತುಗೊಳಿಸಲಾಗಿದೆ ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪತಂಜಲಿ ಉತ್ಪನಗಳನ್ನು ಯಾವಗ ನಿಷೇಧಿಸಲಾಗಿದೆ ಎಂದು ಪ್ರಶ್ನಿಸಿತು. ನಾವು ಆಕ್ಷೇಪ ವ್ಯಕ್ತಪಡಿಸಿದ ಮೇಲೆ ನಿಷೇಧ ಹೇರಲಾಯಿತೆ ಅಥಾವ ಅದಕ್ಕೂ ಮುನ್ನ ನಿಷೇಧ ಮಾಡಲಾಗಿತ್ತೆ ಎಂದು ಸ್ಪಷ್ಟನೆ ಕೇಳಿತು. ಪತಂಜಲಿ ವಿರುದ್ಧ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿತು.

ಬಳಿಕ ಪತಂಜಲಿ ಬೇಷರತ್ ಕ್ಷಮೆ ಬಗ್ಗೆ ಆಲಿಸಿದ ಕೋರ್ಟ್ ನಮ್ಮಗೆ ಇ ಪ್ರತಿಗಳ ಬೇಡ, ಮುದ್ರಣವಾಗಿರುವ ಅಸಲಿ ಪ್ರತಿಗಳನ್ನು ನಮ್ಮಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿತು. ಇದೇ ವೇಳೆ ಮುಂದಿ‌ನ ವಿಚಾರಣೆಗೆ ಖುದ್ದು ಹಾಜರಾತಿಯಿಂದ ಯೋಗ ಗುರು ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ವಿನಾಯತಿ ನೀಡಲಾಯಿತು.

Previous Post
ದೆಹಲಿ ಕಾಂಗ್ರೇಸ್‌ಗೆ ದೇವೇಂದ್ರ ಯಾದವ್ ಹಂಗಾಮಿ ಅಧ್ಯಕ್ಷ
Next Post
ಕೋವಿಶೀಲ್ಡ್‌ ಲಸಿಕೆ ಅಡ್ಡಪರಿಣಾಮ ಬೀರಬಹುದು

Recent News