ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ ! ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ

ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ

ನವ ದೆಹಲಿ – ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಲಾಗುತ್ತಿದೆ. ನಾವು ಅವರ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದೇವೆ. ಅನೇಕ ನಗರಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಂಗಡಿಗಳು ಮತ್ತು ಮನೆಗಳನ್ನು ಗುರಿಯಾಗಿರಿಸಿಕೊಂಡಿವೆ ಎಂಬುದು ಚಿಂತೆಯ ವಿಷಯವಾಗಿದೆ. ಹಿಂಸಾಚಾರ ಎಷ್ಟರ ಮಟ್ಟಿಗೆ ಹಬ್ಬಿದೆ ಎಂಬುದು ಇನ್ನೂ ನಮಗೆ ತಿಳಿದಿಲ್ಲ. ಅವರ ರಕ್ಷಣೆಗಾಗಿ ಹಲವು ಸಂಘಟನೆಗಳು ಮುಂದೆ ಬಂದಿವೆಯೆನ್ನುವ ಸುದ್ದಿಯಿದೆ. ನಾವು ಅದನ್ನು ಸ್ವಾಗತಿಸುತ್ತೇವೆ; ಆದರೆ ಕಾನೂನು ಮತ್ತು ಸುವ್ಯವಸ್ಥೆ ಸುಧಾರಿಸುವವರೆಗೆ ನಾವು ಚಿಂತೆಯಲ್ಲಿದ್ದೇವೆ. ಈ ಪರಿಸ್ಥಿತಿಯಿಂದಾಗಿ ಗಡಿ ಭದ್ರತಾ ಪಡೆಗಳಿಗೆ ವಿಶೇಷವಾಗಿ ಜಾಗರೂಕತೆಯಿಂದ ಇರುವಂತೆ ಸೂಚನೆ ನೀಡಲಾಗಿದೆ ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ರಾಜ್ಯಸಭೆಯಲ್ಲಿ ಬಾಂಗ್ಲಾದೇಶದ ಪರಿಸ್ಥಿತಿ ಕುರಿತು ಮಾತನಾಡುವಾಗ ಹೇಳಿದರು. ಎಸ್. ಜೈಶಂಕರ ಇವರು ಮಾತು ಮುಂದುವರೆಸಿ, ಬಾಂಗ್ಲಾದೇಶದಲ್ಲಿ ಜುಲೈನಿಂದ ಹಿಂಸಾಚಾರ ಮುಂದುವರಿದಿದೆ. ಸರ್ವೋಚ್ಚ ನ್ಯಾಯಾಲಯದ ನಿರ್ಣಯದ ಬಳಿಕವೂ ಅಲ್ಲಿ ಹಿಂಸಾಚಾರ ಮುಂದುವರಿದಿದೆ. ಭಾರತ ಸರಕಾರ ಬಾಂಗ್ಲಾದೇಶದ ಅಧಿಕಾರಿಗಳ ಸಂಪರ್ಕದಲ್ಲಿದೆ. ಅಲ್ಲಿ ಪೊಲೀಸರ ಮೇಲೆಯೂ ದಾಳಿಗಳು ನಡೆಯುತ್ತಿವೆ. ಶೇಖ್ ಹಸೀನಾ ಇವರು ಭಾರತಕ್ಕೆ ಬರುವ ಬಗ್ಗೆ ವಿನಂತಿ ಮಾಡಿದ್ದರು. ಹಾಗೆಯೇ ಬಾಂಗ್ಲಾದೇಶದ ಅಧಿಕಾರಿಗಳಿಂದ ವಿಮಾನ ಹಾರಾಟಕ್ಕೆ ಅನುಮತಿಗಾಗಿ ನಮಗೆ ಮನವಿ ಮಾಡಲಾಗಿತ್ತು. ತದನಂತರ ಶೇಖ್ ಹಸೀನಾ ಭಾರತ ತಲುಪಿದರು. ನಾವು ನಮ್ಮ ರಾಜಕೀಯ ವ್ಯವಸ್ಥೆಗಳ ಮೂಲಕ ಬಾಂಗ್ಲಾದೇಶದಲ್ಲಿರುವ ಭಾರತೀಯ ಸಮುದಾಯದೊಂದಿಗೆ ನಿಕಟ ಮತ್ತು ನಿರಂತರ ಸಂಪರ್ಕದಲ್ಲಿದ್ದೇವೆ. ಒಂದು ಅಂದಾಜಿನ ಪ್ರಕಾರ, 19 ಸಾವಿರ ಭಾರತೀಯ ನಾಗರಿಕರು ಅಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಸುಮಾರು 9 ಸಾವಿರ ವಿದ್ಯಾರ್ಥಿಗಳಿದ್ದಾರೆ. ಜುಲೈನಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮರಳಿದ್ದರು ಎಂದು ಹೇಳಿದರು. ಸಂಪಾದಕೀಯ ನಿಲುವು ಬಾಂಗ್ಲಾದೇಶದಲ್ಲಿ 1947 ರಿಂದ ಅಲ್ಪಸಂಖ್ಯಾತರನ್ನು ಅಂದರೆ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ. ಹಾಗಾಗಿ, ಶೇ. 28 ರಷ್ಟು ಇದ್ದ ಹಿಂದೂಗಳು ಈಗ ಕೇವಲ ಶೇ. 8 ರಷ್ಟೂ ಉಳಿದಿಲ್ಲ. ಈ ಅವಧಿಯಲ್ಲಿ ಭಾರತವು ಅವರ ಭದ್ರತೆಗಾಗಿ ಏನನ್ನೂ ಮಾಡಿಲ್ಲ ಮತ್ತು ಈಗಲೂ ಏನೂ ಮಾಡುತ್ತುಲ್ಲ ! ಇದು ಭಾರತದ ಇಲ್ಲಿಯವರೆಗಿನ ಎಲ್ಲಾ ಪಕ್ಷಗಳ ಸರಕಾರಕ್ಕೆ ಮತ್ತು ಹಿಂದೂಗಳಿಗೆ ನಾಚಿಕೆಗೇಡು !

Previous Post
ದಲಿತರ ಮೀಸಲಾತಿಯ ‘ಸುರಕ್ಷತಾ ಕ್ರಮ’ಕ್ಕೆ ರಾಜಾ ಮನವಿ
Next Post
ಕರ್ನಾಟಕ, ಹಿಮಾಚಲ್‌, ಅಸ್ಸಾಂಗೆ ಹೆಚ್ಚಿನ ಪರಿಹಾರ ನೀಡಲಾಗಿದೆ- ಕೇಂದ್ರ

Recent News