ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ತಪ್ಪಿದ ಟಿಕೆಟ್

ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ತಪ್ಪಿದ ಟಿಕೆಟ್

ನವದೆಹಲಿ : ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಕೈಸರ್‌ಗಂಜ್‌ನ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ಕೋಕ್ ನೀಡಿರುವ ಬಿಜೆಪಿ ಹೈಕಮಾಂಡ್ ಅದೇ ಕ್ಷೇತ್ರದಿಂದ ಅವರ ಪುತ್ರ ಕರಣ್ ಅವರನ್ನು ಕಣಕ್ಕಿಳಿಸಿದೆ. ಕರಣ್ ಭೂಷಣ್ ಸಿಂಗ್ ಅವರು ಉತ್ತರ ಪ್ರದೇಶದಿಂದ ಸತತ ಮೂರು ಬಾರಿ ಗೆದ್ದಿರುವ ಬ್ರಿಜ್ ಭೂಷಣ್ ಸಿಂಗ್ ಅವರ ಕಿರಿಯ ಮಗ. 2019 ರ ಲೋಕಸಭಾ ಚುನಾವಣೆಯಲ್ಲಿ, ಬ್ರಿಜ್ ಭೂಷಣ್ ಅವರು ಕೈಸರ್‌ಗಂಜ್‌ನಿಂದ ಚುನಾವಣೆಯಲ್ಲಿ ಎರಡು ಲಕ್ಷ ಮತಗಳಿಂದ ಗೆದ್ದಿದ್ದರು.

ಕರಣ್ ಭೂಷಣ್ ಸಿಂಗ್ ಪ್ರಸ್ತುತ ಉತ್ತರ ಪ್ರದೇಶದ ಕುಸ್ತಿ ಸಂಘದ ಅಧ್ಯಕ್ಷರಾಗಿದ್ದಾರೆ. ಅವರು ಗೊಂಡಾದ ನವಾಬ್‌ಗಂಜ್‌ನಲ್ಲಿರುವ ಸಹಕಾರಿ ಗ್ರಾಮಾಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷರೂ ಆಗಿದ್ದಾರೆ. ಕೈಸರ್‌ಗಂಜ್‌ನಿಂದ ತಮ್ಮ ಮಗನ ಅಭ್ಯರ್ಥಿಯಾದ ಬಗ್ಗೆ ಪ್ರತಿಕ್ರಿಯಿಸಿರುವ ಬ್ರಿಜ್ ಭೂಷಣ್, ಬಿಜೆಪಿಯ ನಿರ್ಧಾರ ನನಗೆ ಸಂತೋಷ ತಂದಿದೆ. ಪಕ್ಷವು ನನಗಿಂತ ಮೇಲಿದೆ, ನಾನು ಪಕ್ಷಕ್ಕಿಂತ ದೊಡ್ಡವನಲ್ಲ. ಪಕ್ಷದ ನಿರ್ಧಾರದಿಂದ ನನಗೆ ಮತ್ತು ಸಾರ್ವಜನಿಕರಿಗೂ ಸಂತೋಷವಾಗಿದೆ ಎಂದಿದ್ದಾರೆ.

ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದ ಬಳಿಕ ಅವರ ಸ್ಪರ್ಧೆ ಬಗ್ಗೆ ಅನುಮಾನಗಳಿದ್ದವು. ಸುಮಾರು ಒಂದು ದಶಕದ ಕಾಲ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿದ್ದ ಅವರ ವಿರುದ್ಧ ಆರು ಮಹಿಳಾ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದು ಬಿಜೆಪಿಗೆ ಮುಜುಗರ ಉಂಟು ಮಾಡಿತ್ತು.

Previous Post
6 MLC ಸ್ಥಾನಗಳಿಗೆ ಚುನಾವಣೆ ಘೋಷಣೆ
Next Post
ಜಾಮೀನು ಕೋರಿ ಮನೀಶ್ ಸಿಸೋಡಿಯಾ ಹೈಕೋರ್ಟ್ ಮೊರೆ

Recent News