ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೊಂದುತ್ತಾರೆಯೇ? ನನಗೂ ಐದು ಜನ ಮಕ್ಕಳು, ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೊಂದುತ್ತಾರೆಯೇ? ನನಗೂ ಐದು ಜನ ಮಕ್ಕಳು, ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

ನವದೆಹಲಿ: ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೊಂದುತ್ತಾರೆಯೇ? ನನಗೂ ಐದು ಜನ ಮಕ್ಕಳು ಎಂದು ಪ್ರಧಾನಿ ನರೇಂದ್ರ ಮೋದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟಾಂಗ್‌ ಕೊಟ್ಟಿದ್ದಾರೆ.ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳ ಒಕ್ಕೂಟ ಇಂಡಿಯಾ ಬಣ ಬಹುಮತದತ್ತ ಸಾಗುತ್ತಿದೆ. ಹೀಗಾಗಿ ಪ್ರಧಾನಿ ಮೋದಿ ಹತಾಶರಾಗಿದ್ದಾರೆ. ಪ್ರಧಾನಿ ಈಗ ಮಂಗಳಸೂತ್ರ ಮತ್ತು ಮುಸ್ಲಿಮರ ಬಗ್ಗೆ ಮಾತನಾಡಲು ಇದೇ ಕಾರಣ ಎಂದು ತಿರುಗೇಟು ನೀಡಿದ್ದಾರೆ.

ನಾವು ಬಹುಮತದತ್ತ ಸಾಗುತ್ತಿದ್ದೇವೆ. ಅದಕ್ಕಾಗಿಯೇ ಅವರು (ಮೋದಿ) ಈಗ ‘ಮಂಗಳಸೂತ್ರ’ ಮತ್ತು ಮುಸ್ಲಿಮರ ಬಗ್ಗೆ ಮಾತನಾಡುತ್ತಾರೆ. ನಿಮ್ಮ ಸಂಪತ್ತನ್ನು ಕದ್ದು ಹೆಚ್ಚು ಮಕ್ಕಳಿರುವವರಿಗೆ ಕೊಡುತ್ತೇವೆ ಎನ್ನುತ್ತಿದ್ದಾರೆ. ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೊಂದುತ್ತಾರೆಯೇ? ಬಡವರು ಯಾವಾಗಲೂ ಹೆಚ್ಚು ಮಕ್ಕಳನ್ನು ಹೊಂದಿರುತ್ತಾರೆ ಎಂದು ಖರ್ಗೆ ಹೇಳಿದ್ದಾರೆ.

ಬಡವರು (ಹೆಚ್ಚು) ಮಕ್ಕಳನ್ನು ಹೊಂದಿದ್ದಾರೆ. ಏಕೆಂದರೆ ಅವರ ಬಳಿ ಸಂಪತ್ತು ಇಲ್ಲ. ಆದರೆ ನೀವು (ಪ್ರಧಾನಿ ಮೋದಿ) ಮುಸ್ಲಿಮರ ಬಗ್ಗೆ ಏಕೆ ಮಾತನಾಡುತ್ತಿದ್ದೀರಿ? ಮುಸ್ಲಿಮರು ಈ ದೇಶದವರು ಎಂದು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ. ನನಗೂ ಐವರು ಮಕ್ಕಳು. ಆದರೆ ನನ್ನ ತಂದೆ-ತಾಯಿಗೆ ನಾನೊಬ್ಬನೇ ಮಗ. ನಮ್ಮ ಮನೆಗೆ ಬೆಂಕಿ ಬಿದ್ದಾಗ ತಾಯಿ, ಸಹೋದರಿ ಮತ್ತು ಚಿಕ್ಕಪ್ಪ ಸತ್ತರು ಎಂದು ತಮ್ಮ ಕುಟುಂಬದಲ್ಲಾದ ಪೂರ್ವ ದುರಂತ ನೆನಪಿಸಿಕೊಂಡಿದ್ದಾರೆ. ನೀನು ನನ್ನ ಏಕೈಕ ಮಗ ಎಂದು ನಮ್ಮ ತಂದೆ ನನಗೆ ಹೇಳುತ್ತಿದ್ದರು. ನನ್ನ ಮಕ್ಕಳನ್ನು ನೋಡಲು ಅವರು ಬಯಸಿದ್ದರು ಎಂದು ತಿಳಿಸಿದ್ದಾರೆ.

Previous Post
ದೆಹಲಿಯಲ್ಲಿ ಕಾಂಗ್ರೇಸ್ ಗೆ ಶಾಕ್ ರಾಜ್ಯಧ್ಯಕ್ಷನ ಬೆನ್ನಲೆ ಇಬ್ಬರು ಮಾಜಿ ಶಾಸಕರು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ
Next Post
ಏಪ್ರಿಲ್‌ನಲ್ಲಿ 2.10 ಲಕ್ಷ ಕೋಟಿ ದಾಖಲೆಯ ಜಿಎಸ್‌ಟಿ ಸಂಗ್ರಹ

Recent News