ಮೂರನೇ ಹಂತದ ಮತದಾನ ಬಿಜೆಪಿಗೆಷ್ಟು ಮುಖ್ಯ?

ಮೂರನೇ ಹಂತದ ಮತದಾನ ಬಿಜೆಪಿಗೆಷ್ಟು ಮುಖ್ಯ?

ನವದೆಹಲಿ : ಲೋಕಸಭೆ ಚುನಾವಣೆಗೆ ಇನ್ನು ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಕರ್ನಾಟಕವೂ ಸೇರಿ 13 ರಾಜ್ಯಗಳ 95 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಮೂರನೇ ಹಂತದ ಮತದಾನ ಕೇಸರಿ ಪಡೆಗೆ ಅತಿ ಮುಖ್ಯವಾಗಿದ್ದು ಚಾರ್ ಸೌ ಫಾರ್ ಗುರಿ ಹೊಂದಿರುವ ಬಿಜೆಪಿ ನಾಯಕರಿಗೆ ಈ ಹಂತ ನಿರ್ಣಾಯಕವಾಗಿದೆ.

ಹೌದು, ಮತ್ತೊಮ್ಮೆ ಮೋದಿ ಸರ್ಕಾರ, ಚಾರ್ ಸೌ ಫಾರ್ ಅಂತಾ ಘೋಷಣೆಯೊಂದಿಗೆ ಚುನಾವಣಾ ರಣಕ್ಕಿಳಿದಿರುವ ಬಿಜೆಪಿ ನಾಯಕರು ಎಡೆಬಿಡದೆ ಪ್ರಚಾರ ಮಾಡುತ್ತಿದ್ದಾರೆ. ಹಗಲು ರಾತ್ರಿ ಎನ್ನದೇ ತಂತ್ರಗಾರಿಕೆ ಮಾಡುತ್ತಿದ್ದಾರೆ. ಈಗಾಗಲೇ ಎರಡು ಹಂತದ ಮತದಾನ ಮುಕ್ತಾಯಗೊಂಡಿದ್ದು ಮೂರನೇ ಹಂತದ ಮೇಲೆ ಬಿಜೆಪಿ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಕೂತಿದೆ.

ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ 13 ರಾಜ್ಯಗಳ 95 ಕ್ಷೇತ್ರಗಳಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಈ ಮತದಾನ ಮೇಲೆ ಬಿಜೆಪಿ ಹೆಚ್ಚು ಕೇಂದ್ರಿಕರಿಸಿದೆ. ಈ 95 ಸ್ಥಾನಗಳಲ್ಲಿ 2009 ರಲ್ಲಿ ಬಿಜೆಪಿಯು 47 ಸ್ಥಾನಗಳನ್ನು ಗೆದ್ದುಕೊಂಡಿತು, 2014 ರಲ್ಲಿ ಇದು 67 ಕ್ಕೆ ಏರಿದೆ, 2019 ರಲ್ಲಿ 72 ಕ್ಕೆ ತಲುಪಿದೆ. ಇಷ್ಟು ಮಾತ್ರವಲ್ಲದೇ ಇಲ್ಲಿ ಪಕ್ಷದ ಮತಗಳ ಪಾಲು ಕೂಡ ನಿರಂತರವಾಗಿ ಹೆಚ್ಚುತ್ತಿದೆ, 78 ಸ್ಥಾನಗಳಲ್ಲಿ ಬಿಜೆಪಿ ಶೇಕಡಾ 40 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದೆ. ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ 2009 ರಲ್ಲಿ 27 ಸ್ಥಾನಗಳಿಂದ 2014 ರಲ್ಲಿ 9 ಮತ್ತು 2019 ರಲ್ಲಿ ಕೇವಲ ನಾಲ್ಕು ಸ್ಥಾನಗಳಿಗೆ ಕುಸಿತ ಕಂಡಿದೆ

ಮೂರನೇ ಹಂತದಲ್ಲಿ ಕರ್ನಾಟಕ ಮತ್ತು ಗುಜುರಾತ್ ನಿರ್ಯಣಾಯಕವಾಗಿದೆ. ಉತ್ತರ ಪ್ರದೇಶದಲ್ಲಿ ಕ್ಷೇತ್ರ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಬಿಜೆಪಿ ನಾಯಕರ ಲೆಕ್ಕಚಾರದ ಪ್ರಕಾರ 95 ಕೇತ್ರಗಳ ಪೈಕಿ 42 ಕ್ಷೇತ್ರಗಳಲ್ಲಿ ಅತ್ಯಂತ ಬಲಿಷ್ಠವಾಗಿದೆ. ಹೀಗಾಗೀ ಬಾಕಿ ಕ್ಷೇತ್ರಗಳ ಬಗ್ಗೆ ತಲೆ ಕೆಡಿಸಿಕೊಂಡಿರುವ ಬಿಜೆಪಿ ನಿರ್ಣಾಯಕ ಹೋರಾಟ ಮಾಡುತ್ತಿದೆ. ಹೆಚ್ಚುವರಿ ಸೀಟಿನ ನೀರಿಕ್ಷೆಗಳಿದ್ದರು ಕರ್ನಾಟಕ ಮತ್ತು ಮಹರಾಷ್ಟ್ರದಂತಹ ರಾಜ್ಯಗಳಲ್ಲಿ ಕಳೆದ ಬಾರಿ ಗೆದ್ದ ಕೆಲವು ಕ್ಷೇತ್ರಗಳನ್ನು ಈ ಬಾರಿ ಗೆಲ್ಲುವುದು ಹೊಸ ಸವಾಲು ಕೂಡಾ ಆಗಿದೆ. ಹೀಗಾಗೀ ಹೆಚ್ಚಿನ ಸಾಧನೆಯಾಗದಿದ್ದರೂ ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವ ಲೆಕ್ಕಚಾರದಲ್ಲಿದೆ‌. ಈ ಹಂತದಲ್ಲಿ ಸಣ್ಣ ವ್ಯತಾಸವಾದರೂ ಬಿಜೆಪಿಯ 400 ಗುರಿಗೆ ದೊಡ್ಡ ಹಿನ್ನಡೆಯಾಗಲಿದೆ.

Previous Post
ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌
Next Post
ಜಾಗತಿಕ ವೇದಿಕೆಯಲ್ಲಿ ಭಾರತವಲ್ಲ ಈಗ ಪಾಕಿಸ್ತಾನ ಅಳುತ್ತಿದೆ ಕಾಂಗ್ರೇಸ್‌ನದು ಹೇಡಿ ಸರ್ಕಾರ ಎಂದ ಪ್ರಧಾನಿ ಮೋದಿ

Recent News