ಮೋದಿ ಮೊದಲ ಸಂಪುಟ ಸಭೆ

ಮೋದಿ ಮೊದಲ ಸಂಪುಟ ಸಭೆ

ನವದೆಹಲಿ, ಜೂ. 10: ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ತಮ್ಮ ನಿವಾಸದಲ್ಲಿ ಇದೀಗ ತಮ್ಮ ಮೊದಲ ಸಂಪುಟ ಸಭೆ ನಡೆಸುತ್ತಿದ್ದಾರೆ. ಭಾನುವಾರ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಒಟ್ಟು 71 ಸಚಿವರು ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದ್ದರು. ಯಾವ ಸಚಿವರಿಗೆ ಯಾವ ಖಾತೆ ಎಂಬುದು ಇನ್ನೂ ಗುಟ್ಟಾಗಿಯೇ ಉಳಿದಿದೆ.

ಮೋದಿ 3.0 ಸಚಿವ ಸಂಪುಟದ ಮೊದಲ ಸಭೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಮತ್ತು ನಗರ ಬಡವರಿಗೆ 3 ಕೋಟಿ ಮನೆಗಳನ್ನು ನಿರ್ಮಿಸುವ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇಂದು ಬೆಳಗ್ಗೆ ಪ್ರಧಾನಿ ಮೋದಿ ಅವರು ಸುಮಾರು 9.3 ಕೋಟಿ ರೈತರಿಗೆ ಸುಮಾರು 20,000 ಕೋಟಿ ರೂ. ಬಿಡುಗಡೆ ಮಾಡಲು ಅಧಿಕಾರ ನೀಡುವ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು.

ಹೊಸ ಮತ್ತು ಹಳೆಯ 30 ಕ್ಯಾಬಿನೆಟ್ ಸಚಿವರು ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸ್ವತಂತ್ರ ಉಸ್ತುವಾರಿ ಹೊಂದಿರುವ ಐವರು ರಾಜ್ಯ ಸಚಿವರು ಮತ್ತು 36 ಕಿರಿಯ ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸಿದರು.

Previous Post
ನೀಟ್‌ ವಿದ್ಯಾರ್ಥಿಗಳ ಧ್ವನಿಯಾಗುವೆ: ರಾಹುಲ್ ಗಾಂಧಿ
Next Post
ಮೋದಿ ಸಂಪುಟದಿಂದ ಹೊರಬರಲಿದ್ದಾರಾ ಸುರೇಶ್ ಗೋಪಿ?

Recent News