ರಾಜತಾಂತ್ರಿಕ ಪಾಸ್‌ಪೊರ್ಟ್ ರದ್ದಿಗೆ ಕೋರ್ಟ್ ಆದೇಶ ಅಗತ್ಯ

ರಾಜತಾಂತ್ರಿಕ ಪಾಸ್‌ಪೊರ್ಟ್ ರದ್ದಿಗೆ ಕೋರ್ಟ್ ಆದೇಶ ಅಗತ್ಯ

ನವದೆಹಲಿ : ಲೈಗಿಂಕ ಕಿರುಕುಳ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೊರ್ಟ್ ಸಹಾಯದಿಂದ ಜರ್ಮನಿಗೆ ತೆರಳಿದ್ದಾರೆ, ವಿಶೇಷ ಪಾಸ್‌ಪೊರ್ಟ್ ಹೊಂದಿರುವ ಅವರಿಗೆ ಯಾವುದೇ ವೀಸಾದ ಅಗತ್ಯ ಇಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವಾಲಯದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಸಾಪ್ತಾಹಿತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಕ್ತಾರ ರಣಧೀರ್ ಜೈಸ್ವಾಲ್, ರಾಜತಾಂತ್ರಿಕ ಪಾಸ್ ಪೊರ್ಟ್ ಅನ್ನು ರದ್ದು ಮಾಡಲು ಕೋರ್ಟ್ ಆದೇಶದ ಅಗತ್ಯವಿದೆ, ಯಾವುದೇ ನ್ಯಾಯಲಯದಿಂದ ಆದೇಶ ಇರದ ಹಿನ್ನಲೆ ಈವರೆಗೂ ಅವರ ಪಾಸ್ ಪೊರ್ಟ್ ರದ್ದು ಮಾಡಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೊರ್ಟ್ ರದ್ದು ಮಾಡುವಂತೆ, ಅಂತರಾಷ್ಟ್ರೀಯ ಭದ್ರತಾ ಏಜೇನ್ಸಿಗಳ ಮೂಲಕ ವಾಪಸ್ ಕರೆ ತರಲು ನೆರವು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದ ಬೆನ್ನಲೆ ವಿದೇಶಾಂಗ ಇಲಾಖೆಯಿಂದ ಈ ಪ್ರತಿಕ್ರಿಯೆ ಬಂದಿದೆ. ಸದ್ಯ ಎಸ್‌ಐಟಿ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದ್ದು ಕೋರ್ಟ್ ನಿಂದ ಪಾಸ್ ಪೊರ್ಟ್ ರದ್ದಿಗೆ ಆದೇಶ ತರಲಿದ್ಯಾ ಎನ್ನುವ ಪ್ರಶ್ನೆ ಉದ್ಬವಿಸಿದೆ.

Previous Post
ಕಾಂಗ್ರೇಸ್ ಇಲ್ಲಿ ಸಾಯುತ್ತಿದೆ, ಪಾಕಿಸ್ತಾನ ಅಲ್ಲಿ ಅಳುತ್ತಿದೆ ಗುಜುರಾತ್ ನಲ್ಲಿ ಕೈ ವಿರುದ್ಧ ಮೋದಿ ವಾಗ್ದಾಳಿ
Next Post
ಕಾವೇರಿ ನೀರು -ತಮಿಳುನಾಡು ಅರ್ಜಿಯನ್ನು ತಿರಸ್ಕರಿಸಿದೆ- ನೀರು ನಿಯಂತ್ರಣ ಸಮಿತಿ

Recent News