ರಾಜ್ಯಸಭೆಯಲ್ಲಿ ವಿರೋಧ ಪಕ್ಷ ನಾಯಕರಿಗೆ ನರೇಂದ್ರ ಮೋದಿ ತಿರುಗೇಟು

ರಾಜ್ಯಸಭೆಯಲ್ಲಿ ವಿರೋಧ ಪಕ್ಷ ನಾಯಕರಿಗೆ ನರೇಂದ್ರ ಮೋದಿ ತಿರುಗೇಟು

ನವದೆಹಲಿ: ವಿಪಕ್ಷಗಳ ವಿರುದ್ಧ ಲೋಕಸಭೆಯಲ್ಲಿ ಗುಡುಗಿದ್ದ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ರಾಜ್ಯಸಭೆಯಲ್ಲಿ ವಾಗ್ದಾಳಿ ಮುಂದುವರಿಸಿದರು. ಇಂದು ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ಉತ್ತರ ನೀಡುತ್ತಿದ್ದಾರೆ. ಕಳೆದ ಎರಡು ದಿನಗಳಲ್ಲಿ 70 ಸಂಸದರು ವಿಚಾರ ಮಂಡಿಸಿದ್ದಾರೆ. ಚರ್ಚೆಯಲ್ಲಿ ಭಾಗಿಯಾದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಬಹು ದಶಕಗಳ ಬಳಿಕ ಒಂದೇ‌ ಸರ್ಕಾರಕ್ಕೆ ಮೂರನೇ ಬಾರಿಗೆ ಅವಕಾಶ ನೀಡಲಾಗಿದೆ. 10 ವರ್ಷಗಳ ಬಳಿಕ ಮತ್ತೆ ಅಧಿಕಾರದ ಬರುವುದು ಸಾಮಾನ್ಯವಲ್ಲ ಎಂದರು.

ಅಂಬೇಡ್ಕರ್ ಸಂವಿಧಾನದ ಪರಿಣಾಮ ನಾವು ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಮತ್ತೆ ಗೆದ್ದು ಬರಲು ಸಾಧ್ಯವಾಗಿದೆ. ಸಂವಿಧಾನ ಕೇವಲ ಪುಸ್ತಕವಲ್ಲ, ಸ್ಫೂರ್ತಿಯ ಸಂಕೇತವಾಗಿದೆ. ಸಂವಿಧಾನ ನಮಗೆ ಮಾರ್ಗದರ್ಶನ ನೀಡುತ್ತದೆ. ಕೆಲವರು ಸಂವಿಧಾನ ಪುಸ್ತಕ ಹಿಡಿದು ಮಾತ್ರ ತಿರುಗುತ್ತಾರೆ ಎಂದು ವಿಪಕ್ಷಕ್ಕೆ ಟಾಂಗ್‌ ಕೊಟ್ಟರು.

ಸಂವಿಧಾನ ದಿವಸ ಆಚರಣೆಯನ್ನು ನಾವು ತಂದಿದ್ದೇವೆ. ಶಾಲಾ-ಕಾಲೇಜುಗಳಿಗೆ ಸಂವಿಧಾನದ ಮಹತ್ವ ತಿಳಿಸಲಾಗುತ್ತಿದೆ. ಸಂವಿಧಾನ ನಮಗೆ ನಂಬಿಕೆಯ ಭಾಗ ಮತ್ತು ಪ್ರೇರಣೆಯಾಗಿದೆ. 75 ನೇ ವರ್ಷಾಚರಣೆಯನ್ನು ನಾವು ಉತ್ಸವವಾಗಿ ಆಚರಣೆ ಮಾಡಿದ್ದೇವೆ. ಮೂರನೇ ಬಾರಿ ನಮಗೆ ಅವಕಾಶ ನೀಡಿ ದೇಶದ ಜನ ಆಶೀರ್ವಾದ ಮಾಡಿದ್ದಾರೆ ಎಂದರು.

ಈ ವೇಳೆ ಕಾಂಗ್ರೆಸ್‌ ಮಲ್ಲಿಕಾರ್ಜುನ ಖರ್ಗೆಯವರು, ಮೋದಿ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ಪ್ರಧಾನಿ ಮೋದಿ ಭಾಷಣದ ಮಧ್ಯೆ ಖರ್ಗೆ ಘೋಷಣೆಗಳನ್ನು ಕೂಗಿದರು. ಆದರೂ ಮಾತು ಮುಂದುವರಿಸಿದ ಮೋದಿ, ಕೊರೊನಾ ಕಠಿಣ ಸಂದರ್ಭದಲ್ಲಿಯೂ ನಮ್ಮ ಅಭಿವೃದ್ಧಿ ತೊಡಕಾಗಿಲ್ಲ. ನಮ್ಮ ಆರ್ಥಿಕತೆಯನ್ನು 10 ರಿಂದ ಐದನೇ ಸ್ಥಾನಕ್ಕೆ ತಂದಿದ್ದೇವೆ. ಮೂರನೇ ಆರ್ಥಿಕ ಶಕ್ತಿಯಾಗಿ ರೂಪಿಸಲು ನಮಗೆ ಜನರು ಮತ್ತೆ ಗೆಲ್ಲಿಸಿದ್ದಾರೆ. ಮುಂದೆ ವಿಶ್ವದ 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡುತ್ತೇವೆ ಎಂದು ಮೋದಿ ಭರವಸೆ ನೀಡಿದರು.

ಸಾಮಾನ್ಯ ನಾಗರಿಕರಿಗೆ ಗೌರವಿತ ಜೀವನ ನಡೆಸಲು ಶಕ್ತಿ ತುಂಬಿದ್ದೇವೆ, ಮೂಲಭೂತ ಸೌಕರ್ಯಗಳ ಮೂಲಕ ಗೌರವ ಹೆಚ್ಚಿಸಿದ್ದೇವೆ, ಮುಂದಿನ ಐದು ವರ್ಷಗಳ ಕಾಲ ಬಡತನದ ವಿರುದ್ಧ ಹೋರಾಟ ನಡೆಸಬೇಕು ಬಡವರ ಬಡತನದ ವಿರುದ್ಧ ಹೋರಾಟ ನಡೆಸಬೇಕಿದೆ ಬಡತನದ ವಿರುದ್ಧದ ಹೋರಾಟ ಮುಂದಿನ ಐದು ವರ್ಷಗಳು ನಿರ್ಣಾಯಕ ಇದರಲ್ಲಿ ನಾವು ವಿಜಯಿಯಾಗುತ್ತೇವೆ. ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾದಾಗ ಭಾರತ ಎಲ್ಲಾ ಕ್ಷೇತ್ರಗಳಲ್ಲಿ ಸಕಾರಾತ್ಮಕ ಅಭಿವೃದ್ಧಿಯಾಗಲಿದೆ ನಾವು ಹೊಸ ಸ್ಟಾರ್ಟ್ ಅಪ್ ಆರಂಭಿಸಿದ್ದೇವೆ ಸ್ಟಾರ್ಟ್ ಅಪ್ ಹೊಸ ಯುಗ ಆರಂಭವಾಗಿದೆ ಟೈರ್ 2 ನಗರಗಳು ದೇಶದ ಬೆಳವಣಿಗೆಗೆ ಸಹಕಾರವಾಗಿವೆ ಹೊಸ ಮೈಲುಗಲ್ಲು ಸಾಧಿಸಿದ್ದೇವೆ ಸಾರಿಗೆ ವ್ಯವಸ್ಥೆ ಮುಂದೆ ಬಾರಿ ಬದಲಾವಣೆ ಆಗಲಿದೆ ಭಾರತದ ಕೋಟಿ ಕೋಟಿ ಜನರಿಗೆ ಅನುಕೂಲ ವಾಗಲಿದೆ ಕಳೆದ 10 ವರ್ಷಗಳಲ್ಲಿ ರೈತರಿಗೆ ಅನೇಕ ಅನುಕೂಲಗಳಾಗಿವೆ.

ಗೊಬ್ಬರ, ಬೀಜ, ಬೆಲೆ, ವಿಮೆ ವಿಚಾತದಲ್ಲಿ ಸರಕಾರದಿಂದ ಬೆಂಬಲ ಸಿಕ್ಕಿದೆ ಹಳೆಯ ಎಲ್ಲ ದಾಖಲೆ ಮುರಿದು ಬೆಂಬಲ ಬೆಲೆ ನೀಡಿದ್ದೇವೆ ಬೀಜದಿಂದ ಮಾರುಕಟ್ಟೆವರಗೂ ರೈತರಿಗೆ ಬೆಂಬಲ‌ ನೀಡಿದ್ದೇವೆ ಸಣ್ಣ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಿದ್ದೇವೆ ಕಾಂಗ್ರೆಸ್ ಅಧಿಕಾರ 10 ವರ್ಷಗಳಲ್ಲಿ ರೈತರುಗಾಗಿ ಏನು ಮಾಡಿಲ್ಲ ಸಾಲಮನ್ನ ಹೆಸರಿನಲ್ಲಿ ರೈತರನ್ನು ದಾರಿತಪ್ಪಿಸಲಾಯಿತು ಕೇವಲ 3 ಕೋಟಿ ರೈತರಿಗೆ ಲಾಭ ವಾಗಿತ್ತು ಸಣ್ಣ ರೈತರಿಗೆ ಯಾವುದೆ ಲಾಭವಾಗಿಲ್ಲ ಆದರೆ ನಮ್ಮ ಸರಕಾರ ಕಿಸಾನ್ ಕಲ್ಯಾಣ ಯೋಜನೆ ಅತ್ಯುತ್ತಮವಾಗಿದೆ ಕಿಸಾನ್ ಸಮ್ಮಾನ್ ಯೋಜನೆ ಮೂಲಕ 10 ಕೋಟಿ ರೈತರಿಗೆ ಯೋಜನೆಯ ಲಾಭ ಸಿಕ್ಕಿದೆ ಕಳೆದ 6 ವರ್ಷಗಳಲ್ಲಿ 3ಲಕ್ಷ ಕೋಟಿ ರೂ ಗಳನ್ನು ರೈತರಿಗೆ ನೀಡಿದ್ದೇವೆ

ಸುಳ್ಳು ಹೇಳುವವರನ್ನು ದೇಶ ನೋಡುತ್ತಿದೆ, ಸತ್ಯ ಕೇಳುವುದಕ್ಕೂ ತಾಕತ್ತು ಬೇಕು ಉತ್ತರ ಕೇಳುವುದಕ್ಕು ವಿರೋಧ ಪಕ್ಷಗಳಿಗೆ ದೈರ್ಯವಿಲ್ಲ ರಾಜ್ಯಸಭೆಗೆ ಅಗೌರವವ ತಂದಿದ್ದಾರೆ ಸಭಾತ್ಯಾಗ ಮಾಡಿ ಅಗೌರವ ತಂದಿದ್ದಾರೆ ಗದ್ದಲ ,ಗಲಾಟೆ ಮಾಡಿ ಮೈದಾನದಿಂದ ಓಡಿಹೋಗುವುದೇ ಅವರ ಕೆಲಸ ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳ ಸಭಾತ್ಯಾಗಕ್ಕೆ ಟೀಕೆ ಮಾಡಿದರು.

ಸ್ವಾತಂತ್ರ್ಯ ಬಂದ ಇಷ್ಟು ವರ್ಷಗಳಾದ್ರೂ ಕೆಲವರನ್ನು ಏನು ಕೇಳಿರಲಿಲ್ಲ ನಾವು ಅವರ ಕಷ್ಟ ಕೇಳುತ್ತಿದ್ದೇವೆ ಮತ್ತು ಪೂಜಿಸುತ್ತಿದ್ದೇವೆ ಮಂಗಳಮುಖಿ ಜನರಿಗೂ ಕಾನೂನು ಜಾರಿ ಮಾಡಿದ್ದೇವೆ ಪದ್ಮ ಪ್ರಶ್ತಿಯನ್ನು ನೀಡಿದ್ದೇವೆ. ಪಶ್ಚಿಮ ದೇಶದವರು ಆಶ್ಚರ್ಯದಿಂದ ನೋಡುತ್ತಿದ್ದಾರೆ ಅತೀ ಕೆಳ ಸಮುದಾಯದವನ್ನು ಯಾರು ಗಮನಿಸಿರಲಿಲ್ಲ ಪಿಎಂ ಜನಮನ ಯೋಜನೆಯಿಂದ ಅವರಿನ್ನು ಗಮನಿಸಿದ್ದೇವೆ 25 ಸಾವಿರ ಕೋಟಿ ಯೋಜನೆ ರೂಪಿಸಿದ್ದೇವೆ ವಿಶ್ವಕರ್ಮ ಸಮುದಾಯಕ್ಕೂ ಯೋಜನೆ ರೂಪಿಸಿದ್ದೇವೆ

ಅವರು ಬ್ಯಾಂಕ್ ರಾಷ್ಟ್ರೀಕರಣ ಮಾಡಿದರು ಆದರೆ ಬಡವರು ಬ್ಯಾಂಕ್ ಮುಖವನ್ನೇ ನೋಡಿರಲಿಲ್ಲ ಸಣ್ಣ ಪುಟ ಕೆಲಸ ಮಾಡುವವರಿಗೂ ಈಗ ಬ್ಯಾಂಕ್ ನಿಂದ ಸಾಲ ಸಿಗುತ್ತಿದೆ ಅವರ ಬದುಕು ಸುಧಾರಿಸುತ್ತಿದೆ ಸ್ವಸಹಾಯ ಸಂಘಗಳಿಂದ ಆತ್ಮವಿಶ್ವಾಸ ಹೆಚ್ಚಿದೆ ಇದುವರೆಗೆ ಒಂದು ಕೋಟಿ ಮಹಿಳೆಯರು ಸ್ವಸಹಾಯಗುಂಪಿನಲ್ಲಿ ಗುರುತಿಸಿಕೊಂಡಿದ್ದಾರೆ ಒಂದು ಕೋಟಿ ಮಹಿಳೆಯರು ಲಕ್ ಪತಿ ದಿದಿ‌ಯಾಗಲಿದ್ದಾರೆ ಮುಂದೆ ಮೂರು ಕೋಟಿ ಮಹಿಳೆಯರು ಲಕ್ ಪತಿ‌ದೀದಿ ಅಗಲಿದ್ದಾರೆ ಹೊಸ ತಂತ್ರಜ್ಞಾನವನ್ನು ಮಹಿಳೆಯರು ಬಳಸುತ್ತಿದ್ದಾರೆ. ನಮೋ ಡ್ರೊನ್ ಮೂಲಕ ಮಹಿಳೆಯರು ಡ್ರೋನ್ ಚಲಾಯಿಸುತ್ತಿದ್ದಾರೆ ಸೈಕಲ್ ಚಲಾಯಿಸಲು ಬರದವರು ಇಂದು ಡ್ರೋನ್ ಚಲಾಯಿಸುತ್ತಿದ್ದಾರೆ ಎಂದರು.

ಅತ್ಯಾಚಾರ ವಿಚಾರದಲ್ಲಿ ವಿರೋಧ ಪಕ್ಷಗಳು ಸೆಲೆಕ್ಟಿವ್ ಆಗಿವೆ ಬಂಗಾಳದಲ್ಲಿ ಮಹಿಳೆಯನ್ನು ಹೊಡೆಯುತ್ತಿದ್ದಾರೆ ಆ ಘಟನೆ ಬಂಗಾಳದ ಸಂದೇಶ್ ಕಾಲಿಯಲ್ಲಿ ಆಗಿದೆ. ಅದರ ಬಗ್ಗೆ ವಿಪಕ್ಷಗಳು ಒಂದು ಶಬ್ದವೂ ಮಾತನಾಡಿಲ್ಲ ದಿಗ್ಗಜ ಮಹಿಳೆರೂ ಈ ಬಗ್ಗೆ ಮಾತನಾಡಿಲ್ಲ ಕಾಂಗ್ರೆಸ್ ನವರು ಚುನಾವಣೆ ಬಳಿಕ ಖುಷಿಯಾಗಿದ್ದಾರೆ ಹ್ಯಾಟ್ರಿಕ್ ಸೋಲಿನ ಖುಷಿ ಒಂದು ಕಡೆ ಮತ್ತೊಂದು ಕಡೆ ನರ್ವಸ್ ನೈಂಟಿ‌ ಖುಷಿಯಲ್ಲಿದ್ದಾರೆ

ಮಲ್ಲಿಕಾರ್ಜುನ್ ಖರ್ಗೆ ಯವರು ಪಕ್ಷಕ್ಕೆ ಸೇವೆ ಮಾಡಿದ್ದಾರೆ, ಖರ್ಗೆಯವರು ಗೋಡೆಯ ರೀತಿ ಇದ್ದಾರೆ ಕಾಂಗ್ರೆಸ್ ನವರು ಸೋಲಿನ ಪರಿಸ್ಥಿತಿಯಲ್ಲಿ ದಲಿತರನ್ನು ಮುಂದೆ ಬಿಡುತ್ತಾರೆ ರಾಷ್ಟ್ರಪತಿ ,ಉಪರಾಷ್ಟ್ರಪತಿ ಚುನಾವಣೆಯಲ್ಲಿ ದಲಿತರನ್ನು ಮುಂದೆ ಬಿಟ್ಟರು ಕಾಂಗ್ರೆಸ್ ನ ಎಸ್ಸಿ ಎಸ್ಟಿ ವಿರೋಧಿ ಮನಸ್ಥಿತಿ ಬಯಲಾಗಿದೆ ಆದಿವಾಸಿ ಮಹಿಳಾ ರಾಷ್ಟ್ರಪತಿಗಳುಗೂ ಅಪಮಾನ ಮಾಡಿದ್ದಾರೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಅಪಮಾನ ಮಾಡಿದ್ದಾರೆ

ಕಾಂಗ್ರೆಸ್ ನವರು ಸಂವಿಧಾನ ಉಳಿಸುವ ಬಗ್ಗೆ ಮಾತನಾಡಬಾರದು ರಿಮೋಟ್ ಪೈಲೆಟ್ ಮೂಲಕ ಸರಕಾರ ನಡೆಸಿದ್ದಾರೆ ಕ್ಯಾಬಿನೆಟ್ ನಿರ್ಧಾರವನ್ನು ಹರಿದುಹಾಕಲಾಯ್ತು ಅದ್ಯಾವ ಸಂವಿಧಾನ ಉಳಿಸುವುದು ಪ್ರೋಟೊಕಲ್ ನಲ್ಲಿ ಒಂದು ಕುಟುಂಬಕ್ಕೆ ಮೊದಲ ಅವಕಾಶ ನೀಡಲಾಗುತ್ತಿತ್ತು ಇವರು ಜೈ ಸಂವಿಧಾನ ಎಂದು ಹೇಳುತ್ತಾರೆ. ಇಂಡಿಯಾ ಅಂದರೆ ಇಂದಿರಾ ಅಂತಾ ಹೇಳಿದ್ದರು ಇದ್ಯಾವ ಸಂವಿಧಾನ‌ ಅವರ ಕಣಕಣದಲ್ಲೂ ಸಂವಿದಾನದ ವಿರೋಧಿ ಅಂಶಗಳು ಇವೆ ಎಂದು ಟೀಕಿಸಿದರು.

Previous Post
ಸಿಬಿಐ ಬಂಧನ, ಜಾಮೀನು ಕೋರಿ ಕೇಜ್ರಿವಾಲ್ ಅರ್ಜಿ
Next Post
ವೈಜಾಗ್ ಉಕ್ಕು ಕಾರ್ಖಾನೆ ಪುನಶ್ಚೇತನ ಉನ್ನತ ಅಧಿಕಾರಿಗಳೊಂದಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಭೆ

Recent News