ರಾಯ್ಬರೇಲಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ

ರಾಯ್ಬರೇಲಿಯಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ

ರಾಯ್ಬರೇಲಿ, ಮೇ 3: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲೋಕಸಭಾ ಚುನಾವಣೆಗೆ ತಮ್ಮ ತಾಯಿ ಸೋನಿಯಾ ಗಾಂಧಿ ಅವರು ಪ್ರತಿನಧಿಸುತ್ತಿದ್ದ ಉತ್ತರ ಪ್ರದೇಶದ ರಾಯ್ಬರೇಲಿಯಿಂದ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ರಾಬರ್ಟ್ ವಾದ್ರಾ ಉಪಸ್ಥಿತರಿದ್ದರು.

ಇದೇ ವೇಳೆ ರಾಹುಲ್ ಗಾಂಧಿ ಅವರು ಪ್ರತಿನಿಧಿಸುತ್ತಿದ್ದ ಅಮೇಥಿ ಕ್ಷೇತ್ರದಿಂದ ಕೆಎಲ್ ಶರ್ಮಾ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಮೇಥಿಯಿಂದ ನಾಮಪತ್ರ ಸಲ್ಲಿಸಿದ ನಂತರ ಶರ್ಮಾ, ಚುನಾವಣೆ ಕೇವಲ ಔಪಚಾರಿಕತೆಯಾಗಿದೆ ಮತ್ತು ಜನರು ತಮ್ಮ ಪರವಾಗಿ ಕೆಲಸ ಮಾಡುವವರನ್ನು ನಿರ್ಧರಿಸುತ್ತಾರೆ ಎಂದು ಹೇಳಿದರು. ಇಲ್ಲಿಂದ ಯಾರು ಗೆಲ್ಲುತ್ತಾರೆ ಅಥವಾ ಸೋಲುತ್ತಾರೆ, ಅದು ಜನರ ಕೈಯಲ್ಲಿದೆ, ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ. ಚುನಾವಣೆ ಕೇವಲ ಔಪಚಾರಿಕತೆ, ಜನರು ತಮ್ಮ ಪರವಾಗಿ ಕೆಲಸ ಮಾಡುವವರತ್ತ ತಮ್ಮ ಚಿತ್ತ ಹರಿಸುತ್ತಾರೆ. ಜನರು ಈ ಹಿಂದೆ ಆಯ್ಕೆ ಮಾಡಿದವರನ್ನು ಒಳ್ಳೆಯವರು ಎಂದು ಭಾವಿಸಿ ತಪ್ಪು ಮಾಡಿದ್ದರು. ಈ ಸಲ ನಮಗೆ ಬೆಂಬಲ ನೀಡಲಿದ್ದಾರೆ. ಏಕೆಂದರೆ ನಾನು ಕಳೆದ 40 ವರ್ಷಗಳಿಂದ ಅಮೇಥಿ ಜನರಿಗಾಗಿ ದುಡಿದಿದ್ದೇನೆ. ಉನ್ನತ ನಾಯಕತ್ವವು ನನಗೆ ನಿರ್ದೇಶಿಸಿದ್ದನ್ನು ನಾನು ಅನುಸರಿಸುತ್ತಿದ್ದೇನೆ. ಜನರು ತಮ್ಮ ಸೇವೆಯಲ್ಲಿ ನನಗೆ ಅವಕಾಶ ನೀಡಬೇಕು ಎಂದು ನಾನು ಬಯಸುತ್ತೇನೆ ಎಂದು ಅವರು ಹೇಳಿದರು.

ರಾಯ್ ಬರೇಲಿ ಮತ್ತು ಅಮೇಥಿ ಎರಡರಿಂದಲೂ ನಾಮಪತ್ರ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿತ್ತು. ಪ್ರಿಯಾಂಕಾ ಗಾಂಧಿ ಅವರು ಅಮೇಥಿ ಅಥವಾ ರಾಯ್ ಬರೇಲಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಆದರೆ, 25 ವರ್ಷಗಳಲ್ಲಿ ಗಾಂಧಿಯೇತರ ಅಭ್ಯರ್ಥಿ ಅಮೇಥಿಯಿಂದ ಸ್ಪರ್ಧಿಸುತ್ತಿರುವುದು ಇದೇ ಮೊದಲು. 1967 ರಲ್ಲಿ ಲೋಕಸಭಾ ಕ್ಷೇತ್ರವಾಗಿ ರಚನೆಯಾದಾಗಿನಿಂದ, ಅಮೇಥಿ ಸುಮಾರು 31 ವರ್ಷಗಳ ಕಾಲ ಗಾಂಧಿ ಕುಟುಂಬದಿಂದ ಪ್ರತಿನಿಧಿಸಲ್ಪಟ್ಟಿದೆ.

Previous Post
ಪ್ರಜ್ವಲ್​ರೇವಣ್ಣ ವಿರುದ್ಧ ಲುಕ್​ಔಟ್​ ನೋಟಿಸ್​ ಜಾರಿ ಮಾಡಿದ ಸರ್ಕಾರ
Next Post
ಶಿವಸೇನೆ ನಾಯಕರನ್ನು ಕರೆತರಬೇಕಿದ್ದ ಕಾಪ್ಟರ್ ಪತನ

Recent News