ಲೋಕಸಭೆ ಚುನಾವಣೆಯಲ್ಲಿ ಹಣ, ಹೆಂಡದ ಹೊಳೆ ಸ್ವತಂತ್ರ ಭಾರತದಲ್ಲೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ವಸ್ತುಗಳ ವಶ

ಲೋಕಸಭೆ ಚುನಾವಣೆಯಲ್ಲಿ ಹಣ, ಹೆಂಡದ ಹೊಳೆ ಸ್ವತಂತ್ರ ಭಾರತದಲ್ಲೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ವಸ್ತುಗಳ ವಶ

ನವದೆಹಲಿ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಹಣ, ಹೆಂಡದ ಹೊಳೆ ಹರಿಯುವ ಮುನ್ಸೂಚನೆ ಸಿಕ್ಕಿದೆ. ಮೊದಲ ಹಂತದ ಮತದಾನ ಆರಂಭವಾಗುವುದಕ್ಕೂ ಮುನ್ನ ದೊಡ್ಡ ಪ್ರಮಾಣ ಅಕ್ರಮ ಮತ್ತು ಅನಧಿಕೃತ ವಸ್ತುಗಳನ್ನು ವಿವಿಧ ಸರ್ಕಾರಿ ಸಂಸ್ಥೆಗಳು, ತನಿಖಾ ಏಜೆನ್ಸಿಗಳ ಮೂಲಕ ಕೇಂದ್ರ ಚುನಾವಣಾ ಆಯೋಗ ವಶಕ್ಕೆ ಪಡೆದುಕೊಂಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಚುನಾವಣಾ ಆಯೋಗ, ಸ್ವಾತಂತ್ರ್ಯ ಭಾರತದ ಬಳಿಕ ಮೊದಲ ಬಾರಿಗೆ ಚುನಾವಣೆಯೊಂದರಲ್ಲಿ ದೊಡ್ಡ ಪ್ರಮಾಣ ಹಣ ವಶಕ್ಕೆ ಪಡೆದಿದೆ ಎಂದು ಹೇಳಿದೆ. ಈವರೆಗೂ ನಡೆದ ದಾಳಿಯಲ್ಲಿ ನಗದು ಹಣ, ಮದ್ಯ, ಡ್ರಗ್ಸ್ ಸೇರಿದಂತೆ 4,658 ಕೋಟಿ ರೂ ಮೌಲ್ಯದ ಅನಧಿಕೃತ ವಸ್ತುಗಳನ್ನು ವಶಪಡಿಸಿಕೊಂಡಿದೆ. 2019 ರಲ್ಲಿ ಪೂರ್ಣ ಚುನಾವಣೆಯಲ್ಲಿ 3475 ಕೋಟಿ ಮೌಲ್ಯದ ಅಕ್ರಮ ಹಣ ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಆಯೋಗ ಹೇಳಿದೆ.

ಪ್ರಸುತ್ತ ಎಲ್ಲ ರಾಜ್ಯಗಳೂ ಸೇರಿ ಒಟ್ಟು 395 ಕೋಟಿಗೂ ಅಧಿಕ ನಗದು ಹಣ, 489 ಕೋಟಿಗೂ ಅಧಿಕ ಮೌಲ್ಯದ ಮದ್ಯ, 2068 ಕೋಟಿ ಮೌಲ್ಯದ ಮಾಧಕ ವಸ್ತುಗಳು, 562 ಕೋಟಿ ಮೌಲ್ಯದ ಚಿನ್ನಾಭರಣಗಳು ಮತ್ತು ಮತದಾರರಿಗೆ ಉಚಿತವಾಗಿ ಹಂಚಲು ಸಂಗ್ರಹಿಸಿದ್ದ 1145 ಕೋಟಿ ಮೌಲ್ಯದ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದೆ ಎಂದು ಆಯೋಗ ಹೇಳಿದೆ.

ಕರ್ನಾಟಕದಲ್ಲಿ 35.53 ಕೋಟಿ ಮೌಲ್ಯದ ಹಣ, 124.33 ಕೋಟಿ ಮೌಲ್ಯದ ಮದ್ಯ, 18.75 ಕೋಟಿ ಮೌಲ್ಯದ ಮಾಧಕ ವಸ್ತುಗಳು, 41.93 ಕೋಟಿ ಮೌಲ್ಯದ ಚಿನ್ನಾಭರಣ, 60.86 ಕೋಟಿ ಮೌಲ್ಯದ ಉಚಿತ ಕೊಡುಗೆಗಳು ಸೇರಿದಂತೆ ಒಟ್ಟು 281.43 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ ಪಡೆದಿದೆ. ರಾಜಸ್ಥಾನದಲ್ಲಿ 700 ಕೋಟಿಗೂ ಅಧಿಕ ಮತ್ತು ಗುಜುರಾತ್ 600, ತಮಿಳುನಾಡಿನಲ್ಲಿ 460 ಕೋಟಿಗೂ ಅಧಿಕ ಮೌಲ್ಯದ ವಸ್ತು ವಶಕ್ಕೆ ಪಡೆದಿದೆ ಇವು ಮೊದಲು ಮೂರು ಸ್ಥಾನದಲ್ಲಿವೆ.

ಮಾರ್ಚ್ 1 ರಿಂದ ಜಾರಿ ಅಧಿಕಾರಿಗಳು ಪ್ರತಿದಿನ 100 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಚುನಾವಣಾ ಸಂಸ್ಥೆ ಹೇಳಿದೆ. ಫ್ಲೈಯಿಂಗ್ ಸ್ಕ್ವಾಡ್‌ಗಳು, ಕಣ್ಗಾವಲು ತಂಡಗಳು, ವೀಡಿಯೋ ವೀಕ್ಷಣಾ ತಂಡಗಳು ಮತ್ತು ಗಡಿಗಳಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಹಗಲು-ರಾತ್ರಿ ತಮ್ಮ ಕೆಲಸವನ್ನು ಮಾಡುತ್ತಿವೆ ಎಂದು ಚುನಾವಣಾ ಆಯೋಗ ಹೇಳಿದೆ.

Previous Post
ಎಲ್‌ಡಿಎಫ್ ಮತ್ತು ಯುಡಿಎಫ್ ರಾಜ್ಯದ ಪರಿಸ್ಥಿತಿ ಹದಗೆಡೆಸುತ್ತಿವೆ ಕೇರಳದಲ್ಲಿ ವಿಪಕ್ಷಗಳ ವಿರುದ್ಧ ಮೋದಿ ವಾಗ್ದಾಳಿ
Next Post
ಸುಪ್ರೀಂನಿಂದಲೂ ಸದ್ಯಕ್ಕಿಲ್ಲ ರಿಲೀಫ್ ಏಪ್ರೀಲ್ 29 ರಂದು ಕೇಜ್ರಿವಾಲ್ ಅರ್ಜಿ ವಿಚಾರಣೆ

Recent News