ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿಪಕ್ಷಗಳ ತೀವ್ರ ವಿರೋಧ, ಜೆಪಿಸಿಗೆ ಶಿಫಾರಸ್ಸು

ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ ವಿಪಕ್ಷಗಳ ತೀವ್ರ ವಿರೋಧ, ಜೆಪಿಸಿಗೆ ಶಿಫಾರಸ್ಸು

ನವದೆಹಲಿ : ತೀವ್ರ ವಿರೋಧದ ನಡುವೆಯೂ ತ್ರಿಬಲ್ ತಲಾಖ್ ಕಾನೂನು ರದ್ದು ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಸರಕಾರ ಮುಸ್ಲಿಂ ಸಮುದಾಯಕ್ಕೆ ಸೇರಿದ ಮತ್ತೊಂದು ಕಾನೂನಿಗೆ ತಿದ್ದುಪಡಿ ಮಾಡಲು ಹೊರಟಿದೆ. ಮಹಾರಾಷ್ಟ್ರ,ಹರಿಯಾಣ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ವಕ್ಫ್ ಕಾನೂನಿಗೆ ಮೂಗುದಾರ ಹಾಕಲು ಎನ್ ಡಿಎ ಸರಕಾರ ಪ್ಲಾನ್ ಮಾಡಿದ್ದು ಲೋಕಸಭೆಯಲ್ಲಿ ಈ ಸಂಬಂಧ ಬಿಲ್‌ ಮಂಡಿಸಿದೆ.

ಪ್ರಸ್ತುತ ಇರುವ ವಕ್ಫ್ ಕಾನೂನಿಗೆ ಸುಮಾರು 40 ತಿದ್ದುಪಡಿ ತರುವ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ. ಕಳೆದ ಶುಕ್ರವಾರ ಕೇಂದ್ರದ ಸಚಿವ ಸಂಪುಟ ಸಭೆಯಲ್ಲಿ ಮಸೂದೆ ಮಂಡಿಸಲು ಒಪ್ಪಿಗೆಯನ್ನು ಪಡೆಯಲಾಗಿತ್ತು. ಇದರ ಬೆನ್ನಲೆ ಗುರುವಾರ ಲೋಕಸಭೆಯಲ್ಲಿ ಬಿಲ್ ಮಂಡಿಸಲಾಗಿದೆ.

ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸುತ್ತಿದ್ದಂತೆ ಕಾಂಗ್ರೇಸ್ ಆದಿಯಾಗಿ ಇಂಡಿಯಾ ಒಕ್ಕೂಟದ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ‌. ಈ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಕಾಂಗ್ರೇಸ್ ಸಂಸದ ಕೆ.ಸಿ ವೇಣುಗೋಪಾಲ್, ನಾವು ಈ ವಕ್ಫ್ ಬಿಲ್ ನ್ನ ವಿರೋಧ ಮಾಡುತ್ತೆವೆ ವಕ್ಫ್ ಗೆ ಆಸ್ಥಿ ಎಲ್ಲಿಂದ ಬರ್ತಿದೆ..? ಅದು ಜನರು ತಮ್ಮ ಸ್ವ ಇಚ್ಛೆಯಿಂದ ದಾನವಾಗಿ ನೀಡುತ್ತಿದ್ದಾರೆ. ಇದು ಅವರ ಸಂವಿಧಾನಿಕ ಹಕ್ಕಾಗಿದೆ ಆರ್ಟಿಕಲ್ 26 ರ ಪ್ರಕಾರ ಧಾರ್ಮಿಕ ಸಂಸ್ಥೆಗಳಿಗೆ ಸ್ಥಿರ ಮತ್ತು ಚರಾಸ್ಥಿ ನೀಡುವ ಅಧಿಕಾರ ಸಂವಿಧಾನದಲ್ಲೆ ಇದೆ ಈಗ ವಕ್ಫ್ ಕಾಯ್ದೆ ತರುತ್ತಿರುವ ಕೇಂದ್ರ ಸರ್ಕಾರ ಇದರ ವಿರೋಧ ಮಾಡುತ್ತಿದೆ ಮತ್ತು ಹಕ್ಕು ಕಸಿದುಕೊಳ್ಳುತ್ತಿದೆ ಮುಸ್ಲಿಮೇತರರು ಈ ಸಂಸ್ಥೆಯ ಭಾಗವಾಗಿರಲು ಹೇಗೆ ಸಾಧ್ಯ, ಅಯೋಧ್ಯೆ ಸೇರಿ ಬೇರೆ ಬೇರೆ ದೇವಸ್ಥಾನಗಳ ಕಮೀಟಿಯಲ್ಲಿ ಬೇರೆ ಧರ್ಮದವರು ಇದ್ದಾರಯೇ ಎಂದು ಪ್ರಶ್ನಿಸಿದರು.‌

ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಮಾತನಾಡಿ, ಮಸೂದೆಯನ್ನು ಸಂಪೂರ್ಣವಾಗಿ ಹಿಂಪಡೆಯಲು ಅಥವಾ ಸ್ಥಾಯಿ ಸಮಿತಿಗೆ ಕಳುಹಿಸಲು ನಾನು ಸರ್ಕಾರವನ್ನು ವಿನಂತಿಸುತ್ತೇನೆ, ಸಮಾಲೋಚನೆಯಿಲ್ಲದೆ ಬಿಲ್‌ ಮಂಡಿಸಬೇಡಿ ಎಂದರು. ಡಿಎಂಕೆ ಸಂಸದೆ ಕನಿಮೊಳಿ ಮಾತನಾಡಿ, ಮಸೂದೆ ಅಲ್ಪಸಂಖ್ಯಾತರು ತಮ್ಮ ಸಂಸ್ಥೆಗಳನ್ನು ನಿರ್ವಹಿಸಲು ವ್ಯವಹರಿಸುವ 30 ನೇ ವಿಧಿಯ ನೇರ ಉಲ್ಲಂಘನೆಯಾಗಿದೆ. ಈ ಮಸೂದೆ ನಿರ್ದಿಷ್ಟ ಧಾರ್ಮಿಕ ಗುಂಪನ್ನು ಗುರಿಯಾಗಿಸುತ್ತದೆ ಎಂದು ಆರೋಪಿಸಿದರು.

ಈ ಮಸೂದೆ ಧಾರ್ಮಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ಸಮಾಜವಾದಿ ಪಕ್ಷದ ಸಂಸದ ಮೊಹಿಬುಲ್ಲಾ ನದ್ವಿ ಹೇಳಿದ್ದಾರೆ. ಕೇಂದ್ರೀಯ ವಕ್ಫ್ ಕೌನ್ಸಿಲ್ ಮತ್ತು ಇತರ ಸಂಸ್ಥೆಗಳಲ್ಲಿ ಮುಸ್ಲಿಮೇತರರನ್ನು ನೇಮಿಸುವುದು ಮುಸ್ಲಿಮರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದರು. ನಾವು ಈ ಮಸೂದೆಯನ್ನು ವಿರೋಧಿಸುತ್ತೇವೆ ಎಂದು ನಾನು ಭಾವಿಸುತ್ತೇನೆ ಮತ್ತು ಮಧ್ಯಸ್ಥಗಾರರೊಂದಿಗೆ ಯಾವುದೇ ವ್ಯಾಪಕ ಸಮಾಲೋಚನೆ ಇಲ್ಲದೆ, ಅದನ್ನು ಸದನದಲ್ಲಿ ಅಂಗೀಕರಿಸುವ ಮೊದಲು ಸ್ಥಾಯಿ ಸಮಿತಿಗೆ ಉಲ್ಲೇಖಿಸಬೇಕು ಎಂದು ನಾವು ಭಾವಿಸುತ್ತೇವೆ” ಎಂದು ಕಾರ್ತಿ ಚಿದಂಬರಂ ಹೇಳಿದ್ದಾರೆ.

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮಸೂದೆಯನ್ನು ಸಮರ್ಥಿಸಿಕೊಂಡರು ಮತ್ತು ಇದು ಯಾವುದೇ ಧಾರ್ಮಿಕ ಸಂಸ್ಥೆಯ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವುದಿಲ್ಲ ಎಂದು ಹೇಳಿದರು. ಈ ಮಸೂದೆಯೊಂದಿಗೆ, ಯಾವುದೇ ಧಾರ್ಮಿಕ ಸಂಸ್ಥೆಯ ಸ್ವಾತಂತ್ರ್ಯದಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ. ಯಾರ ಹಕ್ಕುಗಳನ್ನು ತೆಗೆದುಕೊಳ್ಳುವುದನ್ನು ಮರೆತುಬಿಡಿ, ಅವುಗಳನ್ನು ಎಂದಿಗೂ ಪಡೆಯದವರಿಗೆ ಹಕ್ಕುಗಳನ್ನು ನೀಡಲು ಈ ಮಸೂದೆಯನ್ನು ತರಲಾಗಿದೆ ಎಂದು ಅವರು ಹೇಳಿದರು. ಪ್ರತಿಪಕ್ಷಗಳು ಮಸೂದೆಯ ಉದ್ದೇಶಗಳ ಬಗ್ಗೆ ಸಾರ್ವಜನಿಕರನ್ನು ತಪ್ಪುದಾರಿಗೆ ಎಳೆಯಲು ಪ್ರಯತ್ನಿಸುತ್ತಿವೆ ಎಂದು ಅವರು ಆರೋಪಿಸಿದರು.

ಜೆಡಿಯು ಸಂಸದ ಮತ್ತು ಕೇಂದ್ರ ಸಚಿವ ರಾಜೀವ್ ರಂಜನ್ ಮಾತನಾಡಿ, ಇದು ಮುಸ್ಲಿಮರ ವಿರುದ್ಧ ಹೇಗೆ? ಪಾರದರ್ಶಕತೆ ತರಲು ಈ ಕಾನೂನನ್ನು ಮಾಡಲಾಗುತ್ತಿದೆ‌ ಪ್ರತಿಪಕ್ಷಗಳು ಇದನ್ನು ದೇವಾಲಯಗಳೊಂದಿಗೆ ಹೋಲಿಸುತ್ತಿವೆ. ಅವರು ಮುಖ್ಯ ವಿಷಯದಿಂದ ಬೇರೆಡೆಗೆ ತಿರುಗುತ್ತಿದ್ದಾರೆ. ಕೆಸಿ ವೇಣುಗೋಪಾಲ್ ಕಾಂಗ್ರೇಸ್ ಸಾವಿರಾರು ಸಿಖ್ಖರನ್ನು ಹೇಗೆ ಕೊಂದರು ಎಂಬುದನ್ನು ವಿವರಿಸಬೇಕು, ಇಂದಿರಾ ಗಾಂಧಿಯನ್ನು ಕೊಂದ ಟ್ಯಾಕ್ಸಿ ಡ್ರೈವರ್ ಈಗ ಅಲ್ಪಸಂಖ್ಯಾತರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ವಿರೋಧ ಪಕ್ಷಗಳ ತೀವ್ರ ವಿರೋಧದ ಬಳಿಕ ಬಿಲ್ ಅನ್ನು ಜೆಪಿಸಿಗೆ ನೀಡಲಾಯಿತು‌.

Previous Post
ಪದಕ ವಿಜೇತೆ ಮಾದರಿಯಲ್ಲೇ ವಿನೇಶ್‌ ಫೋಗಟ್‌‌ಗೆ ಸ್ವಾಗತ
Next Post
ಲಂಚ ಸ್ವೀಕರಿಸಿದ ಇಡಿ ಸಹಾಯಕ ನಿರ್ದೇಶಕನ ಬಂಧನ

Recent News