ವಾರಣಾಸಿಯಲ್ಲಿ ಮೋದಿ ಜಯಭೇರಿ

ವಾರಣಾಸಿಯಲ್ಲಿ ಮೋದಿ ಜಯಭೇರಿ

ನವದೆಹಲಿ, ಜೂನ್ 04; ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಘೋಷಣೆಯಾಗಿದೆ. ಈ ಲೋಕಸಭಾ ಕ್ಷೇತ್ರದ ಫಲಿತಾಂಶ ದೇಶ, ವಿದೇಶದ ಗಮನ ಸೆಳೆದಿತ್ತು. ಈ ಕ್ಷೇತ್ರವನ್ನು ಪ್ರತಿನಿಧಿಸುವುದು ಭಾರತದ ಪ್ರಧಾನಿ ನರೇಂದ್ರ ಮೋದಿ. 2024ರ ಲೋಕಸಭೆ ಚುನಾವಣೆಯಲ್ಲಿ ವಾರಣಾಸಿಯಲ್ಲಿ ನರೇಂದ್ರ ಮೋದಿ 6,12,970 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಈ ಮೂಲಕ 2014, 2019 ಮತ್ತು 2024ರಲ್ಲಿ ವಾರಣಾಸಿಯಲ್ಲಿ ಜಯಗಳಿಸುವ ಮೂಲಕ ನರೇಂದ್ರ ಮೋದಿ ಹ್ಯಾಟ್ರಿಕ್ ಗೆಲುವು ಸಾಧಿಸಿದರು.

ಲೋಕಸಭೆ ಚುನಾವಣೆಯ ಕೊನೆಯ ಹಂತವಾದ 7ನೇ ಹಂತದಲ್ಲಿ ಮತದಾನ ಜೂನ್ 1ರ ಶನಿವಾರ ನಡೆದಿತ್ತು. ಅಂದು ವಾರಣಾಸಿಯಲ್ಲಿ ಮತದಾನ ನಡೆದಿದ್ದು, ಮಂಗಳವಾರ ಚುನಾವಣಾ ಫಲಿತಾಂಶ ಪ್ರಕಟವಾಗಿದೆ.

ಯಾರಿಗೆ, ಎಷ್ಟು ಮತಗಳು?; ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ನರೇಂದ್ರ ಮೋದಿ, ಕಾಂಗ್ರೆಸ್‌ನಿಂದ ಅಜಯ್ ರಾಯ್, ಬಹುಜನ ಸಮಾಜವಾದಿ ಪಕ್ಷದಿಂದ ಅಥಲ್ ಜಲಾಲ್ ಲಾರಿ, ಅಪನಾ ದಳ್‌ ಪಕ್ಷದಿಂದ ಗಂಗನ್ ಪ್ರಕಾಶ್, ರಾಷ್ಟ್ರೀಯ ಸಮಾಜವಾದಿ ಜನಶಕ್ತಿ ಪಕ್ಷದಿಂದ ಪರಾಸ್ ನಾಥ್ ಕೇಸರಿ ಮತ್ತು ಪಕ್ಷೇತರ ಅಭ್ಯರ್ಥಿಯಾದ ಸಂಜಯ್ ಕುಮಾರಿ ತಿವಾರಿ ಸೇರಿ ಆರು ಅಭ್ಯರ್ಥಿಗಳು ಕಣದಲ್ಲಿದ್ದರು.

ಚುನಾವಣೆಯಲ್ಲಿ ನರೇಂದ್ರ ಮೋದಿ 6,12,970, ಕಾಂಗ್ರೆಸ್‌ನ ಅಜಯ್ ರಾಯ್ 4,60,457, ಬಹುಜನ ಸಮಾಜವಾದಿ ಪಕ್ಷದ ಅಥಲ್ ಜಲಾಲ್ ಲಾರಿ 33,766 ಮತಗಳನ್ನು ಪಡೆದಿದ್ದಾರೆ. ಅಪನಾ ದಳ್‌ ಪಕ್ಷದ ಗಂಗನ್ ಪ್ರಕಾಶ್ 3,634. ಪಕ್ಷೇತರ ಅಭ್ಯರ್ಥಿ ಸಂಜಯ್ ಕುಮಾರಿ ತಿವಾರಿ 2171 ಮತಗಳನ್ನು ಪಡೆದಿದ್ದಾರೆ. ಕ್ಷೇತ್ರದಲ್ಲಿ 8,478 ನೋಟಾ ಮತಗಳು ಚಲಾವಣೆಯಾಗಿವೆ. ಹಿಂದಿನ ಚುನಾವಣೆ ಫಲಿತಾಂಶ: ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ನರೇಂದ್ರ ಮೋದಿ 2014ರಲ್ಲಿ ಕಣಕ್ಕಿಳಿದಿದ್ದರು. 581,022 ಮತಗಳನ್ನು ಪಡೆದು ಜಯಗಳಿಸಿದ್ದರು ಮತ್ತು ಭಾರತದ ಪ್ರಧಾನಿಯಾದರು. ಆಗ ಅವರ ಎದುರಾಳಿಯಾಗಿದ್ದು ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ 209,238 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್‌ನ ಅಜಯ್ ರಾಯ್ 75,614, ಬಿಎಸ್‌ಪಿಯ ವಿಜಯ್ ಪ್ರಕಾಶ್ ಜೈಸ್ವಾಲ್ 60,579 ಮತ್ತು ಸಮಾಜವಾದಿ ಪಕ್ಷದ ಕೈಲಾಶ್‌ ಚಾರುಸಿಯಾ 45,291 ಮತಗಳನ್ನು ಪಡೆದಿದ್ದರು. 2019ರ ಚುನಾವಣೆಯಲ್ಲಿ ನರೇಂದ್ರ ಮೋದಿ 2ನೇ ಬಾರಿಗೆ ವಾರಣಾಸಿಯಲ್ಲಿ ಕಣಕ್ಕಿಳಿದರು. ಚುನಾವಣೆಯಲ್ಲಿ 674,664 ಮತಗಳನ್ನು ಪಡೆದು ಜಯಗಳಿಸಿದರು. 2ನೇ ಅವಧಿಗೆ ಪ್ರಧಾನಿಯಾದರು. ಆಗ ಎದುರಾಳಿಯಾಗಿದ್ದ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ 195,159 ಮತಗಳನ್ನು ಪಡೆದರು. ಕಾಂಗ್ರೆಸ್‌ನ ಅಜಯ್ ರಾಯ್ 152,548 ಮತಗಳನ್ನು ಪಡೆದು ಸೋಲು ಕಂಡರು. 2024ರಲ್ಲಿಯೂ ಸಹ ಕಾಂಗ್ರೆಸ್ ಅಜಯ್ ರಾಯ್‌ ಅವರನ್ನು ಕಣಕ್ಕಿಳಿಸಿತು.

Previous Post
ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ‘ಡಾ.ಸಿಎನ್ ಮಂಜುನಾಥ್’ಗೆ ಭರ್ಜರಿ ಗೆಲುವು
Next Post
ಉತ್ತರ-ದಕ್ಷಿಣ ಎರಡೂ ಕಡೆ ಭರ್ಜರಿ ಜಯ ದಾಖಲಿಸಿದ ರಾಹುಲ್‌ ಗಾಂಧಿ

Recent News